Dasara 2026: ಕೇವಲ ₹500ಕ್ಕೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ದೇವಾಲಯ ದರ್ಶನ ಟೂರ್ ಪ್ಯಾಕೇಜ್

ನವರಾತ್ರಿ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದ್ದು, ಕರಾವಳಿಯ ಪ್ರಸಿದ್ಧ ಆಚರಣೆಯಾದ ಮಂಗಳೂರು ದಸರಾ 2026 ಕಳೆಗಟ್ಟಿದೆ. ಹಬ್ಬದ ರಜೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಮತ್ತು ಅತ್ಯಂತ ಕೈಗೆಟುಕುವ ದರದಲ್ಲಿ ಒಂದಿಷ್ಟು ದೇವಾಲಯ ದರ್ಶನ ಪ್ಯಾಕೇಜ್‌ಗಳನ್ನ ಘೋಷಿಸಿದೆ.

ಹೌದು, 2026ರ ಅಕ್ಟೋಬರ್ 11ರಿಂದ ಅಕ್ಟೋಬರ್ 20ರವರೆಗೆ ಈ ವಿಶೇಷ ಪ್ರವಾಸಗಳು ಲಭ್ಯವಿರಲಿದ್ದು, ಭಕ್ತಿ, ಪ್ರವಾಸ ಹಾಗೂ ಸಂಸ್ಕೃತಿಯನ್ನ ಈ ಒಂದೇ ಪ್ರಯಾಣದಲ್ಲಿ ಸವಿಯುವ ಅಪೂರ್ವ ಅವಕಾಶವನ್ನ ಭಕ್ತಾದಿಗಳಿಗೆ ಕಲ್ಪಿಸಿ ಕೊಡಲಾಗಿದೆ.

KSRTC Mangaluru Dasara Packages 2026 Explore Special Temple Tours from Mangaluru amp amp Udupi Now

ಕರಾವಳಿಯಿಂದ ಪುಣ್ಯಕ್ಷೇತ್ರಗಳಿಗೆ ಸಂಪರ್ಕ

ಮಂಗಳೂರಿನಿಂದ ಹೊರಡುವ ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿ ಹಲವು ಆಯ್ಕೆಗಳನ್ನ ನೀಡಿದೆ ನೋಡಿ. ಸ್ಥಳೀಯವಾಗಿ ನವದುರ್ಗೆಯರ ದರ್ಶನ ಪಡೆಯಲು ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಲಭ್ಯವಿದೆ. ಇದರ ಜೊತೆಗೆ ದೂರದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಇಚ್ಛಿಸುವವರಿಗಾಗಿ ಮಂಗಳೂರು-ಕೊಲ್ಲೂರು, ಮಂಗಳೂರು-ತಲಕಾವೇರಿ-ಭಾಗಮಂಡಲ, ಮಂಗಳೂರು-ಸಿಗಂದೂರು ಹಾಗೂ ಹೊಸದಾಗಿ ಪರಿಚಯಿಸಲಾದ ಮಂಗಳೂರು-ಶೃಂಗೇರಿ ಪ್ಯಾಕೇಜ್‌ಗಳು ಸಹ ಸಾರ್ವಜನಿಕರಿಗೆ ಲಭ್ಯವಿವೆ.

ಕುಟುಂಬ ಸಮೇತರಾಗಿ ಸುರಕ್ಷಿತವಾಗಿ ಪ್ರಯಾಣಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ.

ಉಡುಪಿ ಶೃಂಗೇರಿ ದರ್ಶನ ಹಾಗೂ ಕೊಲ್ಲೂರು ವಿಶೇಷ ಪ್ರವಾಸ

ಕೇವಲ ಮಂಗಳೂರು ಮಾತ್ರವಲ್ಲದೆ ಉಡುಪಿಯಿಂದಲೂ ಎರಡು ಪ್ರಮುಖ ಧಾರ್ಮಿಕ ಪ್ರವಾಸಗಳನ್ನ ಆಯೋಜಿಸಲಾಗಿದೆ. 'ಉಡುಪಿ-ಶೃಂಗೇರಿ ದರ್ಶನ' ಪ್ಯಾಕೇಜ್ ಅಡಿಯಲ್ಲಿ ಭಕ್ತರು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿಯ ಶ್ರೀ ಶಾರದಾಂಬ ದೇವಸ್ಥಾನ, ಕಿಗ್ಗದ ಋಷ್ಯಶೃಂಗೇಶ್ವರ ದೇವಸ್ಥಾನ, ಹರಿಹರಪುರ ಮಠ ಹಾಗೂ ಪೆರ್ಡೂರಿನ ಅನಂತಪದ್ಮನಾಭ ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ಅದೇ ರೀತಿ 'ಉಡುಪಿ-ಕೊಲ್ಲೂರು ದರ್ಶನ' ಪ್ಯಾಕೇಜ್‌ ಮೂಲಕ ನೀಲಾವರ ಮಹಿಷಮರ್ದಿನಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಸೌಕೂರು ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳನ್ನ ಒಂದೇ ದಿನದಲ್ಲಿ ಸುಲಭವಾಗಿ ದರ್ಶನ ಮಾಡಬಹುದಾಗಿದೆ.

ಕೈಗೆಟುಕುವ ದರದಲ್ಲಿ ನವರಾತ್ರಿ ದೇವಾಲಯ ದರ್ಶನ

ಈ ಎಲ್ಲಾ ವಿಶೇಷ ಪ್ಯಾಕೇಜ್‌ಗಳ ಪ್ರಯಾಣ ದರ ಕೇವಲ ₹500 ರಿಂದ ಆರಂಭವಾಗಿ ₹700 ರವರೆಗೆ ನಿಗದಿಪಡಿಸಲಾಗಿದೆ. ಇದು ಕೇವಲ ಪ್ರಯಾಣ ವೆಚ್ಚವಾಗಿದ್ದು, ಊಟ ಮತ್ತು ಉಪಾಹಾರದ ವೆಚ್ಚವನ್ನ ಪ್ರವಾಸಿಗರು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.

ಹಬ್ಬದ ದಿನಗಳಲ್ಲಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ, ಸ್ವಂತ ವಾಹನಗಳಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುವ ಬದಲು ಸರ್ಕಾರಿ ಸಾರಿಗೆಯನ್ನ ಬಳಸುವುದು ಆರ್ಥಿಕವಾಗಿಯೂ ಲಾಭದಾಯಕ ಹಾಗೂ ಒತ್ತಡರಹಿತವಾಗಿರುತ್ತದೆ.

ಮಂಗಳೂರು ದಸರಾ ತನ್ನದೇ ಆದ ವಿಶಿಷ್ಟ ಆಚರಣೆಗಳಿಗೆ, ಹುಲಿವೇಷ ಹಾಗೂ ಭವ್ಯ ಮೆರವಣಿಗೆಗಳಿಗೆ ವಿಶ್ವವಿಖ್ಯಾತವಾಗಿದೆ. ಈ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಕರಾವಳಿಗೆ ಆಗಮಿಸುತ್ತಾರೆ.

ಹೀಗೆ ಬರುವ ಪ್ರವಾಸಿಗರಿಗೆ ಕೇವಲ ಮಂಗಳೂರು ಮಾತ್ರವಲ್ಲದೆ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಇತರ ಪ್ರಮುಖ ಶಕ್ತಿಪೀಠಗಳ ದರ್ಶನ ಮಾಡಿಸುವುದು ಕೆಎಸ್‌ಆರ್‌ಟಿಸಿಯ ಮುಖ್ಯ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ಭಕ್ತರು ತಮ್ಮ ಸಮೀಪದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಥವಾ ಘಟಕವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕಿಂಗ್‌ಗಾಗಿ ಮೊಬೈಲ್ ಸಂಖ್ಯೆಗಳಾದ 7760990713, 7760990723, 7760990711, ಮತ್ತು 7760990720 ಗಳಿಗೆ ಕರೆ ಮಾಡಬಹುದಾಗಿದೆ.

ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಈ ನವರಾತ್ರಿಯನ್ನ ಮತ್ತಷ್ಟು ಭಕ್ತಿಮಯವಾಗಿ ಆಚರಿಸಲು ಈ ವಿಶೇಷ ಪ್ಯಾಕೇಜ್‌ಗಳ ಸದುಪಯೋಗ ಪಡೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+