KSRTC Price Hike: ನಾಳೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜ್‌ ದರ ಹೆಚ್ಚಳ, ಪರಿಷ್ಕೃತ ದರಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಲಗೇಜ್‌ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್‌ಗಳಿಗೆ ನೂತನ ಪರಿಷ್ಕೃತ ದರವು ನಾಳೆಯಿಂದಲೇ (ಫೆಬ್ರವರಿ 16) ಜಾರಿಯಾಗಲಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ, ನಿರ್ವಹಣಾ ವೆಚ್ಚ ಹಾಗೂ ಇತರೆ ಕಾರ್ಯಾಚರಣಾ ಖರ್ಚುಗಳಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಲಗೇಜ್ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಎಂಡಿ ಸ್ಪಷ್ಟಪಡಿಸಿದ್ದಾರೆ. 2021ರಲ್ಲಿ ಕೊನೆಯ ಬಾರಿ ಲಗೇಜ್ ದರ ಏರಿಕೆಯಾಗಿತ್ತು. ನಂತರ ಟಿಕೆಟ್ ದರ ಪರಿಷ್ಕರಣೆ ನಡೆದರೂ ಲಗೇಜ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿರಲಿಲ್ಲ ಎಂದು ತಿಳಿಸಲಾಗಿದೆ.

KSRTC Luggage Charges

ಪರಿಷ್ಕೃತ ಲಗೇಜ್ ದರಪಟ್ಟಿ (ಪ್ರಯಾಣಿಕರಿಲ್ಲದೆ ಸಾಗಿಸುವ ಸರಕುಗಳಿಗೆ)

* 1ರಿಂದ 5 ಸ್ಟೇಜ್‌ಗಳು - ₹6

* 6ರಿಂದ 12 ಸ್ಟೇಜ್‌ಗಳು - ₹12

* 156ರಿಂದ 160 ಸ್ಟೇಜ್‌ಗಳು - ₹145

ಸಂಸ್ಥೆ ಬಿಡುಗಡೆ ಮಾಡಿದ ದರ ಪಟ್ಟಿಯ ಪ್ರಕಾರ, ಸ್ಟೇಜ್ ಆಧಾರಿತವಾಗಿ ಶುಲ್ಕ ವಿಧಿಸಲಾಗುತ್ತದೆ. ಕಡಿಮೆ ದೂರಗಳಿಗೆ ಸಣ್ಣ ಪ್ರಮಾಣದ ಏರಿಕೆ ಇದ್ದರೂ, ದೀರ್ಘ ದೂರಗಳಿಗೆ ಈ ದರ ಹೆಚ್ಚಳ ಹೆಚ್ಚು ಕಾಣಿಸಿಕೊಳ್ಳಲಿದೆ. ಸಣ್ಣ ವ್ಯಾಪಾರಿಗಳು, ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ಸರಕು ಕಳುಹಿಸುವವರು, ಪ್ರಯಾಣಿಸದೇ, ಲಗೇಜ್ ಮಾತ್ರ ಕಳುಹಿಸುವ ವ್ಯಕ್ತಿಗಳು, ಬಸ್‌ಗಳ ಮೂಲಕ ಪಾರ್ಸೆಲ್ ಸೇವೆ ಬಳಸುವ ವ್ಯಾಪಾರ ವಲಯಕ್ಕೆ ಇದರಿಂದ ಭಾರೀ ಹೊಡೆತ ಬೀಳಲಿದೆ.

ಕೆಎಸ್‌ಆರ್‌ಟಿಸಿ ಮೂಲಗಳ ಪ್ರಕಾರ, ಲಗೇಜ್ ಸಾಗಾಣಿಕೆ ಸೇವೆ ಸಂಸ್ಥೆಗೆ ಹೆಚ್ಚುವರಿ ಆದಾಯದ ಮೂಲವಾಗಿದ್ದು, ಇತ್ತೀಚಿನ ವೆಚ್ಚ ಏರಿಕೆಯಿಂದ ಆರ್ಥಿಕ ಸಮತೋಲನ ಕಾಪಾಡಲು ಈ ಕ್ರಮ ಅನಿವಾರ್ಯ ಎನ್ನಲಾಗಿದೆ. ನಾಳೆಯಿಂದಲೇ ಎಲ್ಲ ಡಿಪೋಗಳು ಮತ್ತು ಕೌಂಟರ್‌ಗಳಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಪ್ರಯಾಣಿಕರು ಹಾಗೂ ಸರಕು ಕಳುಹಿಸುವವರು ನೂತನ ದರಗಳನ್ನು ಪರಿಶೀಲಿಸಿ ಲಗೇಜ್ ಬುಕ್ಕಿಂಗ್ ಮಾಡಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

ರಾಜ್ಯದಲ್ಲಿ ಈಗಾಗಲೇ ಸಾರಿಗೆ ದರ, ಇಂಧನ ಬೆಲೆ ಏರಿಕೆ ಚರ್ಚೆಯಲ್ಲಿರುವ ಸಂದರ್ಭದಲ್ಲಿ ಲಗೇಜ್ ದರ ಹೆಚ್ಚಳ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇತರೆ ಸಾರಿಗೆ ನಿಗಮಗಳು ಕೂಡ ದರ ಪರಿಷ್ಕರಣೆ ಮಾಡಲಿವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+