ಐರಾವತ ಡೈಮಂಡ್‌ ಕ್ಲಾಸ್‌ ಬಸ್ ವಿಶೇಷತೆಗಳು

ಬೆಂಗಳೂರು, ಜೂ. 25 : ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ, ವಿಮಾನದಂತೆ ಬ್ಲಾಕ್ ಬಾಕ್ಸ್ ಹೊಂದಿರುವ ಐರಾವತ ಡೈಮಂಡ್‌ ಕ್ಲಾಸ್‌ ಬಸ್ ಸೇವೆಗೆ ಕೆಎಸ್ಆರ್‌ಟಿಸಿ ಚಾಲನೆ ನೀಡಿದೆ. ದೇಶದ ಸಾರಿಗೆ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಬಸ್‌ ಸೇವೆ ಆರಂಭಿಸಿರುವ ಕೀರ್ತಿಗೆ ಕೆಎಸ್ಆರ್‌ಟಿಸಿ ಪಾತ್ರವಾಗಿದೆ.

ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಐರಾವತ ಡೈಮಂಡ್ ಕ್ಲಾಸ್ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ. ಹೈದರಾಬಾದ್, ಚೆನ್ನೈ, ಎರ್ನಾಕುಲಂ, ತಿರುಪತಿ, ನೆಲ್ಲೂರು ಸೇರಿ ಐದು ಮಾರ್ಗಗಳಲ್ಲಿ ಈ ಬಸ್ ಸಂಚಾರ ನಡೆಸಲಿದೆ. [ಬೆಂಗಳೂರು ರಸ್ತೆಗಿಳಿದ ಯುಡಿ ವೋಲ್ವೊ ಬಸ್]

bus

ಕೆಎಸ್ಆರ್‌ಟಿಸಿ ಈ ಬಸ್ ಖರೀದಿ ಮಾಡುವ ಮೊದಲು ಆರು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಂಗಳೂರು, ತಿರುಪತಿ, ಸಿಕಂದರಾಬಾದ್‌, ಮೈಸೂರು, ಚೆನ್ನೈ ಮಾರ್ಗಗಳಲ್ಲಿ ಸಂಚಾರ ನಡೆಸುತ್ತಿತ್ತು. ಬಸ್ ಕಾರ್ಯಕ್ಷಮತೆ ಉತ್ತಮವಾಗಿರುವುದರಿಂದ ಇದನ್ನು ಖರೀದಿ ಮಾಡಲಾಗಿದೆ. ಈ ಬಸ್‌ ದರ 91.10 ಲಕ್ಷ ರೂ.. [ಅವೆನ್ಯೂ ರಸ್ತೆಯಲ್ಲಿ ಬಿಎಂಟಿಸಿ ಸಂಚಾರ]

ವೋಕ್ಸ್ ವ್ಯಾಗನ್ ಗ್ರೂಪ್‌ ಜೊತೆ ಪಾಲುದಾರಿಕೆ ಹೊಂದಿರುವ SCANIA ದಿಂದ ಈ ಬಸ್‌ಗಳನ್ನು ಕೆಎಸ್ಆರ್‌ಟಿಸಿ ಖರೀದಿ ಮಾಡಿದ್ದು, 'ಐರಾವತ ಡೈಮಂಡ್‌ ಕ್ಲಾಸ್‌' ಎಂದು ನಾಮಕರಣ ಮಾಡಿದೆ. SCANIA ಕೋಲಾರದ ನರಸಾಪುರದಲ್ಲಿ 200 ಕೋಟಿ ಹೂಡಿಕೆ ಮಾಡಿ ಘಟಕ ಆರಂಭಿಸಿದೆ. [KSRTC ಯಿಂದ ಫ್ಲೈ ಬಸ್ ಸೇವೆ]

ದೇಶದಲ್ಲೇ ಮೊದಲ ಬಾರಿಗೆ ಈ ಮಾದರಿಯ ಬಸ್ ಸೇವೆ ಆರಂಭಿಸಿದ ಕೀರ್ತಿ ಕೆಎಸ್ಆರ್‌ಟಿಸಿಯದ್ದು. ಈ ಮಾದರಿಯ 35 ಬಸ್ಸುಗಳನ್ನು ಕೆಎಸ್ಆರ್‌ಟಿಸಿ ಖರೀದಿ ಮಾಡಿದೆ. ವಿಮಾನದಲ್ಲಿರುವಂತೆ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಎಂಬ 'ಸುರಕ್ಷತಾ ವೀಡಿಯೋ ಮಾಹಿತಿ ಯೋಜನೆ', ಅಪಘಾತಗಳಿಗೆ ಕಾರಣಗಳನ್ನು ತಿಳಿಯಬಹುದಾದ ಬ್ಲಾಕ್‌ ಬಾಕ್ಸ್‌ಗಳನ್ನು ಬಸ್ ಒಳಗೊಂಡಿದೆ.

ksrtc

ಬಸ್ ವಿಶೇಷತೆಗಳು : ಐರಾವತ ಡೈಮಂಡ್‌ ಕ್ಲಾಸ್‌ ಬಸ್‌ನಲ್ಲಿ ಬೆಂಕಿ ಅನಾಹುತ ತಡೆಗಟ್ಟಲು ಸಹಕಾರಿಯಾಗುವಂತೆ ಬ್ಯಾಟರಿ ಬಾಕ್ಸ್‌ ಮತ್ತು ಡೀಸೆಲ್‌ ಟ್ಯಾಂಕ್‌ಗಳನ್ನು ಬಸ್ಸಿನ ಮಧ್ಯಭಾಗದಲ್ಲಿ ಅಳವಡಿಸಲಾಗಿದೆ.

ಬಸ್ಸಿನ ಒಳಭಾಗ ಮತ್ತು ಹೊರಭಾಗ ಅಲ್ಯುಮಿನಿಯಂ ಹೊದಿಕೆಯಿಂದ ನಿರ್ಮಿಸಲಾಗಿದೆ. ಇದು ಬೆಂಕಿ ಅನಾಹುತ ತಡೆಯುತ್ತದೆ. ತುರ್ತು ಸಂದರ್ಭದಲ್ಲಿ ಸಹಾಯಕವಾಗಲು 6 ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+