ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 25ರಂದು ಸರ್ಕಾರಿ ಬಸ್‌ಗಳು ರಸ್ತೆಗಿಳಿಯವು

By Manjunatha
|
Google Oneindia Kannada News

ಬೆಂಗಳೂರು, ಜನವರಿ 23: ಮಹದಾಯಿ ಕುರಿತು ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಕಳಸಾ ಬಂಡೂರಿ ಹೊರಾಟಗಾರರ ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಜನವರಿ 25ರ ರಾಜ್ಯ ಬಂದ್‌ಗೆ ಕೆಎಸ್‌ಆರ್‌ಟಿಸಿ ನೌಕರರ ಸಂಘ ಬೆಂಬಲ ಸೂಚಿಸಿದೆ.

ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘಗಳು ಬಂದ್‌ಗೆ ಬೆಂಬಲ ಸೂಚಿಸಿರುವ ಪರಿಣಾಮ ಜನವರಿ 25ರಂದು ರಾಜ್ಯಾದ್ಯಂತ ಯಾವುದೇ ಕೆಎಸ್‌ಆರ್‌ಟಿಸಿ ಮತ್ತು ನಗರದಲ್ಲಿ ಬಿಎಂಟಿಸಿ ಬಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗಿಳಿಯುವುದಿಲ್ಲ.

ಬಂದ್ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಖಡಕ್ ಉತ್ತರಬಂದ್ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಖಡಕ್ ಉತ್ತರ

ಹೊರ ನಗರಗಳಿಗೆ ತೆರಳುವ ಪ್ರಯಾಣಿಕರು, ಈಗಾಗಲೇ ಟಿಕೆಟ್ ಬುಕ್‌ ಮಾಡಿ ಕಾಯುತ್ತಿರುವ ಪ್ರಯಾಣಿಕರು ಅಂದು ಒದ್ದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಓಲಾ ಮತ್ತು ಟ್ಯಾಕ್ಸಿ ಸಂಘಟನೆಗಳೂ ಕೂಡ ಬಂದ್‌ಗೆ ಬೆಂಬಲ ಸೂಚಿಸಿರುವ ಕಾರಣ ಅಂದು ಓಲಾ ಮತ್ತು ಇತರ ಟ್ಯಾಕ್ಸಿ ಕೂಡಾ ಇರುವುದಿಲ್ಲ. ಬಸ್‌ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳೂ ಸಾಕಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಇದೆ.

KSRTC employee organization supports state bandh

ಜನವರಿ 25ರ ರಾಜ್ಯಬಂದ್‌ಗೆ ಪರ-ವಿರೋಧ ಚರ್ಚೆಗಳು ಹುಟ್ಟಿ, ಬಿಜೆಪಿಯು ಇದೊಂದು ಸರ್ಕಾರ ಪ್ರಾಯೋಜಿತ ಬಂದ್‌ ಎಂದು ಕರೆದು ಗೇಲಿ ಮಾಡಿದೆ. ಇದರ ಬೆನ್ನಲ್ಲೆ ಕೆಲವು ಸಂಘಟನೆಗಳು ರಾಜ್ಯ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿವೆ, ಬಂದ್‌ ನಡೆಯುವುದೇ ಡೊಲಾಯಮಾನಯ ಸ್ಥಿತಿಯಲ್ಲಿದ್ದಾಗ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಬಂದ್‌ಗೆ ಬೆಂಬಲ ಸೂಚಿಸಿರುವುದು ಬಂದ್‌ ಆಯೋಜಿಸಿರುವ ಸಂಘಟನೆಗಳಿಗೆ ಆನೆ ಬಲ ಬಂದಿದೆ.

ಬಂದ್‌ಗೆ ಈಗಾಗಲೇ ಹಲವು ಕನ್ನಡ ಪರ ಸಂಘಟನೆಗಳು, ಖಾಸಗಿ ಶಾಲೆಗಳ ಒಕ್ಕೂಟ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ, ಚಲನಚಿತ್ರ ಮಂಡಳಿ, ಓಲಾ, ಟ್ಯಾಕ್ಸಿ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

KSRTC employee organization supports state bandh

ಜನವರಿ 25 ರಂದು ಬಸ್‌ಗಳು ರಸ್ತೆಗಿಳಿಯುವುದಿಲ್ಲವಾದ್ದರಿಂದ ಹೊರ ನಗರಗಳಿಗೆ, ರಾಜ್ಯಗಳಿಗೆ ತೆರಳ ಬೇಕಾದವರು ಮೊದಲೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

English summary
On January 25 No KSRTC BMTC will get on the road. KSRTC employee organization expend support to state bandh. Kalasa bandoori activists and pro Kannada Organizations calls for state bandh on January 25th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X