KSET Results Announce: ಕೆಸೆಟ್ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಬಿಡುಗಡೆ, ಕಟ್ಆಫ್ ಅಂಕಗಳು ಎಷ್ಟು?
ಬೆಂಗಳೂರು, ನವೆಂಬರ್ 23: "ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ'ಯಲ್ಲಿ (KSET Exam 2025) ಅರ್ಹರಾದವರ ಮೆರಿಟ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದವರ ಪೈಕಿ ಶೇಕಡಾ 6ರಷ್ಟು ಅಭ್ಯರ್ಥಿಗಳು ಮಾತ್ರವೇ ಈ ಬಾರಿಯ ಕೆಸೆಟ್ ಗೆ ಅರ್ಹರರಾಗಿದ್ದಾರೆ. ಯುಜಿಸಿ ಮತ್ತು ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಕೆಸೆಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟಂಬರ್ 18ರಂದು ಕೊನೆಗೊಂಡ, ನವೆಂಬರ್ 2ರಂದು ಬೆಂಗಳೂರು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇತ್ತೀಚೆಗೆ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಬಳಿಕ 50 ರೂಪಾಯಿ ಅರ್ಜಿ ಶುಲ್ಕ ಸಹಿತ ಆಕ್ಷೇಪಣೆಗೆ ನವೆಂಬರ್ 06ರವರೆಗೆ ಅವಕಾಶ ನೀಡಲಾಗಿತ್ತು.

ಅದರ ಬೆನ್ನಲ್ಲೆ ಇದೀಗ ಕೆಸೆಟ್ ಮೆರಿಟ್ ಲಿಸ್ಟ್ ಜೊತೆಗೆ ವಿವಿಧ ವಿಷಯಗಳ ಅಂಕಗಳ ಕಟ್ ಅಫ್ ರಾಂಕ್ ಸಹ ಪ್ರಕಟಿಸಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೂಡಲೇ ಈ ಕೆಳಗಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಲಿಂಕ್ (https://cetonline.karnataka.gov.in/keawebentry456/kset2025/kset_2025_cutoff_repokannada.pdf) ಮೂಲಕ ಅಂಕಗಳ ಕಟ್ ಅಫ್ ಮಾಹಿತಿ ಪಡೆಯಬಹುದಾಗಿದೆ.
ಒಟ್ಟು 33 ವಿಷಯಗಳ ಮೇಲೆ ಸ್ನಾತಕೋತ್ತರ ಪದವೀಧರರಿಗೆ ಕೆಇಎ ಕೆಸೆಟ್ ಪರೀಕ್ಷೆ ನಡೆಸಿತ್ತು. ಒಟ್ಟು 1,34,826 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1,21,052 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸದ್ಯ ಈ ಪರೀಕ್ಷೆ ಬಳಿಕ ಅಂತಿಮ ಫಲಿತಾಂಶ ಬರಬೇಕಿದೆ. ಮೆರಿಟ್ ಲಿಸ್ಟ್ ಬಿಡುಗಡೆ ಆಗಿದ್ದು, ಅದರಲ್ಲಿ ಶೇಕಡಾ 06ರಂದು ಅಂದರೆ 8,383 ಮಂದಿ ಮಾತ್ರ ಕೆಸೆಟ್ "ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ'ಗೆ ಅರ್ಹರಾಗಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಕೆಸೆಟ್ ಪರೀಕ್ಷೆ ಫಲಿತಾಂಶ: ಮುಖ್ಯಾಂಶಗಳು
ಕೆಇಎ ವರ್ಗವಾರು ಮತ್ತು ವಿಷಯವಾರು ಜೊತೆಗೆ ಪೇಪರ್ 1 ಮತ್ತು ಪೇಪರ್ 2 (ಒಟ್ಟು 300 ಅಂಕಗಳು) ಆಧರಿಸಿ, ಸಂಯೋಜನೆ ಮಾಡಿ ಒಟ್ಟು ಅಂಕಗಳನ್ನು ಬಳಸಿಕೊಂಡು ಮೆರಿಟ್ ಪಟ್ಟಿ ತಯಾರಿಸಿ ಬಿಡುಗಡೆ ಮಾಡಿದೆ.
ಕನಿಷ್ಠ ಅರ್ಹತಾ ಅಂಕಗಳನ್ನು ನೋಡುವುದಾದರೆ, ಎರಡೂ ಪತ್ರಿಕೆಗಳ ಒಟ್ಟು, ಸಾಮಾನ್ಯ/ಮೀಸಲಿಡದ ಶೇಕಡಾ 40ರಷ್ಟು ಅಂದರೆ ಒಟ್ಟು 120/300 ಅಂಕಗಳು. ಇದರಲ್ಲಿ ಜಾತಿ ಮೀಸಲಾತಿ ಪಡೆದ ವರ್ಗಗಳಡಿ SC/ST/OBC/PwD ಶೇಕಡಾ 35ರಷ್ಟು ಅಂದರೆ ಒಟ್ಟು 105/300 ಅಂಕ ಪಡೆಯಬೇಕಿದೆ.
ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ
PGMedical-25 ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಲಾಗಿದೆ. ನವೆಂಬರ್ 24ರಂದು ಬೆಳಗ್ಗೆ 10ಗಂಟೆವರೆಗೆ ಅಭ್ಯರ್ಥಿಗಳು ಸದ್ಯ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಹೊಸದಾಗಿ ಆಪ್ಷನ್ಸ್ ದಾಖಲಿಸುವವರಿಗೂ ಅವಕಾಶ ನೀಡಲಾಗಿದೆ. ನವೆಂಬರ್ 25ರಂದು ತಾತ್ಕಾಲಿಕ ಹಾಗೂ ನವೆಂಬರ್ 26ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications