ಬುದ್ದಿಬ್ರಮಣೆಯಿಂದ ಹೇಳಿಕೆ ನೀಡಿದ್ದೇನೆಂದು ರಾಮಲಿಂಗಾ ರೆಡ್ಡಿ ಕ್ಷಮೆ ಕೇಳಬೇಕು: ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ, ಅಕ್ಟೋಬರ್‌ 04: ಶಿವಮೊಗ್ಗ ಗಲಭೆಯಲ್ಲಿ ಹಿಂದೂ ಕಾರ್ಯಕರ್ತರೇ ವೇಷ ಬದಲಿಸಿ ಕಲ್ಲು ತೂರಾಡಿದ್ದಾರೆಂದಿರುವ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಹಿಂದೆ ಗೃಹಮಂತ್ರಿ ಆಗಿದ್ದವರು. ರಾಮ ಮತ್ತು ಲಿಂಗ ಹೆಸರಿನ ರಾಮಲಿಂಗಾರೆಡ್ಡಿ ಹೆಸರಿಟ್ಟುಕೊಂಡವರು, ಇಂತಹ ಬೇವಾಜವ್ದಾಬಾರಿ ಹೇಳಿಕೆ ಕೊಡಬಾರದು. ರಾಮಲಿಂಗಾರೆಡ್ಡಿ ಬುದ್ದಿಬ್ರಮಣೆ ಆಗಿತ್ತು ಎಂದು ಒಪ್ಪಿಕೊಂಡು ರಾಜ್ಯದ ಜನತೆ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಹೇಳಿದರು.

ks-eshwarappa-slams-minister-ramalinga-reddy

ರಾಮಲಿಂಗಾರೆಡ್ಡಿ ಇಲ್ಲಿ ಬೇಂದ್ರೆ ಹೊಡೆತ ತಿಂದವರ ಮನೆಗೆ ನಾನೇ ಸ್ವತಃ ಕರೆದುಕೊಂಡು ಹೋಗುತ್ತೇನೆ. ಬಿಜೆಪಿಯವರು ಮಾರುವೇಶದಲ್ಲಿ ಬಂದು ಹಲ್ಲೆ ಮಾಡಿದ್ದಾರೆಂದು ಎಸ್ಪಿ ಹೇಳಿದರೆ ರಾಮಲಿಂಗಾರೆಡ್ಡಿ ಹೇಳಿದಂತೆ ನಾನು ಕೇಳುತ್ತೇನೆ, ಸ್ಥಳಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ ಹೇಳಿದರೆ ನಂಬುತ್ತೇನೆ. ಎಲ್ಲೋ ಕುಳಿತು ರಾಮಲಿಂಗಾರೆಡ್ಡಿ ಬಾಣ ಬಿಟ್ಟಿದ್ದಾರೆ. ಕದ್ದು ಮುಚ್ಚಿ ಯಾರನ್ನು ಒಡೆಯುವ ಜರೂರತ್ತು ಬಿಜೆಪಿಗೆ ಇಲ್ಲ ಎಂದು ಹೇಳಿದರು.

ಮಧು ಬಂಗಾರಪ್ಪ ಮತ್ತು ಎಸ್ಪಿ ಇಬ್ಬರು ಸುಳ್ಳು ಮಾತು ನಂಬಬೇಡಿ ಎಂದು ಹೇಳಿದ್ದಾರೆ. ರಾಮಲಿಂಗಾರೆಡ್ಡಿ ಬುದ್ದಿಬ್ರಮಣೆ ಆಗಿತ್ತು ಎಂದು ಒಪ್ಪಿಕೊಂಡು ರಾಜ್ಯದ ಜನತೆ ಕ್ಷಮೆ ಕೇಳಬೇಕು ಹಿಂದೂ ಮಹಾಸಭೆ ಗಣೇಶ ವೇಳೆ ಮಾಡಬೇಕಿದ್ದವರು, ಈದ್ ಮಿಲಾದ್ ವೇಳೆ ವ್ಯವಸ್ಥಿತವಾಗಿ ಮಾಡಿದ್ದಾರೆ. ರಾಮಲಿಂಗಾರೆಡ್ಡಿಗೆ ಮಧು ಬಂಗಾರಪ್ಪ ಮೇಲೆ ನಂಬಿಕೆ ಇಲ್ಲ ಅಂದ್ರೆ ಜೈಲಿನಲ್ಲಿ ಇರುವ ಮುಸಲ್ಮಾನ ಗೂಂಡಾಗಳನ್ನು ಕೇಳಲಿ ಬೇಕಿದ್ರೆ, ಗೃಹ ಮಂತ್ರಿಗೆ ಇಲ್ಲಿ ತಲ್ವಾರ್ ರಟ್ಟಿನ ತಲ್ವಾರ್ ಎಂದು ಹೇಳುತ್ತಾರೆ ಎಂದು ಹೇಳಿದರು.

ಗೂಂಡಾಗಳನ್ನು ಕೊಲೆ ಗಡುಕರನ್ನು ಬಿಡುಗಡೆ ಮಾಡಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮುಂದಾಗಿದ್ದಾರೆ. ಇಂತಹ ಉಪಮುಖ್ಯಮಂತ್ರಿ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯಗೆ ಡಿಸಿಎಂ ಬದಲಾವಣೆ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದರು.

ರಾಗಿಗುಡ್ಡದ ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತದೆ. ಹಲ್ಲೆಗೊಳಗಾದ ಕುಟುಂಬದವರಿಗೆ ದೈರ್ಯ ತುಂಬುವ ಕೆಲಸ ಮಾಡುತ್ತದೆ, ಇನ್ನೂ ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆ, ಹುಬ್ಬಳ್ಳಿ ಘಟನೆ ಕೇಸ್ ಹಿಂಪಡೆಯುವ ವಿಚಾರ ಕುರಿತು ಚರ್ಚೆ ಮಾಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಎಸ್ಪಿ ಮಿಥುನ ಕುಮಾರ್ ಮೇಲೆ ಕಾಂಗ್ರೆಸ್ ಒತ್ತಡವಿದೆ. ಈ ಘಟನೆಯಲ್ಲಿ ಪೊಲೀಸರಿಗೂ ಸಹ ಪೆಟ್ಟು ಬಿದ್ದಿದೆ. ಅವರನ್ನು ಬೇಟಿ ಮಾಡಲು ಬಿಡುತ್ತಿಲ್ಲ, ಅವರು ಎಲ್ಲಿ ಅವರ ಮನೆ ಎಲ್ಲಿ ಎಂದು ಕೇಳಿದ್ರೆ ಎಸ್ಪಿ ಗೊತ್ತಿಲ್ಲ ಎನ್ನುತ್ತಾರೆ. ನಾನು ಗಾಯಗೊಂಡ ಪೊಲೀಸ್ ರನ್ನು ಭೇಟಿ ಆಗಬೇಕು, ಅವರನ್ನು ಮುಚ್ಚಿಡಲು ಪೊಲೀಸ್ ಇಲಾಖೆ ಯಾಕೆ ಪ್ರಯತ್ನ ಮಾಡುತ್ತಿದ್ದಾರೆಂದು ಗೊತ್ತಿಲ್ಲಎಸ್ಪಿ ಅವರ ಮೇಲೆ ಕಲ್ಲು ತೂರಾಟ ಆಯ್ತು, ಅವರೆ ತಮ್ಮ ರಕ್ಷಣೆಗಾಗಿ ಓಡಿ ಹೋಗಿದ್ದಾರೆ ಎಂದರು.

ದಯಮಾಡಿ ಗೃಹಮಂತ್ರಿ ಪರಮೇಶ್ವರ್ ಇಲ್ಲಿಗೆ ಬರಬೇಕು. ಘಟನಾ ಸ್ಥಳಕ್ಕೆ ಬೇಟಿ ನೀಡಬೇಕು, ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲರನ್ನೂ ರಕ್ಷಣೆ ಮಾಡುವ ಜವಾಬ್ದಾರಿ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಗೆ ಇದೆ. ಇಲ್ಲಿ ಬಂದು ಹಿಂದೂಗಳಿಗೆ, ನಾವು ನಿಮ್ಮ ಜೊತೆ ಇದೆ ಎಂದು ಧೈರ್ಯ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+