KRS Dam: ಮತ್ತೆ ಮಳೆ ಶುರು; ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಹಲವು ದಿನಗಳಿಂದ ಸುಮ್ಮನಾಗಿದ್ದ ಮಳೆ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ ಬಳಿಕ ಸುಮ್ಮನಾಗಿತ್ತು, ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚುವ ಹೊತ್ತಲ್ಲೇ ಮಳೆ ಕಡಿಮೆಯಾಗಿತ್ತು.
ಹಲವು ದಿನ ವ್ಯಾಪಕ ಮಳೆಯಾದ ಕಾರಣ ವಿವಿಧ ಜಲಾಶಯಗಳಿಗೆ ನೀರಿನ ಒಳಹರಿವು ದಿನೇ ದಿನೇ ಹೆಚ್ಚಾಗುತ್ತಿತ್ತು. ಬಳಿಕ ಮಳೆ ಕಡಿಮೆಯಾದಂತೆ ಒಳಹರಿವು ಕಡಿಮೆಯಾಗಿತ್ತು, ಈಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ.

ಇಂದಿನ ಒಳಹರಿವು ಎಷ್ಟಿದೆ?
ಕೃಷ್ಣರಾಜಸಾಗರ ಜಲಾಶಯದ (ಕೆಆರ್ ಎಸ್) ಒಳಹರಿವು ಒಂದು 1233 ಕ್ಯೂಸೆಕ್ಸ್ ದಾಖಲಾಗಿದ್ದು, 545 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 12.66 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯ
ಒಳಹರಿವು - 286 ಕ್ಯೂಸೆಕ್ಸ್
ಹೊರ ಹರಿವು - 300 ಕ್ಯೂಸೆಕ್ಸ್
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ಸಾಮರ್ಥ್ಯ- 7.51 ಟಿಎಂಸಿ
ಹಾರಂಗಿ ಜಲಾಶಯ
ಒಳಹರಿವು - 242 ಕ್ಯೂಸೆಕ್ಸ್
ಹೊರ ಹರಿವು - 200 ಕ್ಯೂಸೆಕ್ಸ್
ಒಟ್ಟು ಸಾಮರ್ಥ್ಯ - 8.25 ಟಿಎಂಸಿ
ಇಂದಿನ ಸಾಮರ್ಥ್ಯ- 3.04 ಟಿಎಂಸಿ
ಹೇಮಾವತಿ ಜಲಾಶಯ
ಒಳಹರಿವು - 201 ಕ್ಯೂಸೆಕ್ಸ್
ಹೊರ ಹರಿವು - 250 ಕ್ಯೂಸೆಕ್ಸ್
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ಸಾಮರ್ಥ್ಯ- 9.90 ಟಿಎಂಸಿ
ವ್ಯಾಪಕ ಮಳೆ ಮುನ್ಸೂಚನೆ
ಜೂನ್ 1ರಿಂದ 8ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಕೂಡ ಇಂದಿನಿಂದ ಮತ್ತೆ ಮಳೆ ಆರಂಭವಾಗಲಿದೆ.












Click it and Unblock the Notifications