ರೈತರಿಗೆ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್: ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ, ಪ್ರಮುಖಾಂಶಗಳು
ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸಂಬಂಧಿಸಿದ ಸ್ಥಗಿತಗೊಂಡಿದ್ದ 'ಕೃಷಿಭಾಗ್ಯ ಯೋಜನೆ'ಗೆ ಮರು ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಇದು ಸೇರಿದಂತೆ ಸರ್ಕಾರದ ಸಾಧನೆಗಳ ಕುರಿತು ಮಹತ್ವದ ಭರವಸೆ ಹಾಗೂ ಸಾಧನೆಗಳನ್ನು ವಿವರಿಸಿದ್ದಾರೆ.
'1,000 ದಿನಗಳ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ನಿಮ್ಮ ಪ್ರೀತಿ - ಸಹಕಾರ ಮುಂದೆಯೂ ನಮ್ಮೊಂದಿಗಿರಲಿ' ಕೋರಿ ಸಿದ್ದರಾಮಯ್ಯ ಅವರು ಹಾವೇರಿ ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಕೃಷಿಭಾಗ್ಯ ಯೋಜನೆಗೆ ನಾವು ಮರು ಚಾಲನೆ ನೀಡಿದ್ದೇವೆ. ಬರಪೀಡಿತ ತಾಲೂಕುಗಳಲ್ಲಿ ರೂಪಾಯಿ 200 ಕೋಟಿ ಅನುದಾನದಡಿ 3,735 ಕೃಷಿ ಹೊಂಡಗಳು ಹಾಗೂ ಪಾಲಿಹೌಸ್ ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಏನಿದು ಕೃಷಿ ಭಾಗ್ಯ ಯೋಜನೆ
ಕರ್ನಾಟಕ ಸರ್ಕಾರದ ಕೃಷಿಭಾಗ್ಯ ಯೋಜನೆ ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಕೃಷಿ ಹೊಂಡ ನಿರ್ಮಾಣ, ತಾಡಪತ್ರಿ (ಪಾಲಿತಿನ್ ಕವರ್), ಮತ್ತು ನೀರಾವರಿ ಉಪಕರಣಗಳಿಗೆ ಸಹಾಯಧನ ನೀಡಿ, ಬೇಸಿಗೆಯಲ್ಲೂ ಕೃಷಿ ಮಾಡಲು ಅನುವು ಮಾಡಿಕೊಡುವ ಮಹತ್ವದ ಯೋಜನೆಯಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಈ ಯೋಜನೆ ಸಹಾಯಧನದೊಂದಿಗೆ ತಾಂತ್ರಿಕ ಬೆಂಬಲವನ್ನೂ ಸರ್ಕಾರ ನೀಡುತ್ತದೆ.
ಮಳೆಯಾತ್ರಿತ ಕೃಷಿಯಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನಮ್ಮ ಈ ಯೋಜನೆ ಅನಿಶ್ಚಿತತೆಯ ಆತಂಕವನ್ನು ರಾಜ್ಯ ಸರ್ಕಾರ ದೂರ ಮಾಡಿದೆ. ನಮ್ಮ ಸರ್ಕಾರದ ಈ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಒಟ್ಟು 59,181 ಎಕರೆಗೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಸೃಜನೆ ಮಾಡಲಾಗಿದೆ. ಏತ ನೀರಾವರಿ, ಕೆರೆ, ಕಾಲುವೆಗಳ ಆಧುನೀಕರಣ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಸೇರಿದಂತೆ ರೂ.9,331 ಕೋಟಿ ವೆಚ್ಚದ 77 ಹೊಸ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಇದರಿಂದ ನೀರಿಲ್ಲದೆ ಬರಡಾಗಿದ್ದ ಭೂಮಿಗೂ ಇಂದು ಜೀವಜಲ ಹರಿಯುತ್ತಿದೆ ಎಂದು ಅವರು ಸರ್ಕಾರದ ಸಾಧನೆ ವಿವರಿಸಿದರು.
ಪ್ರತಿ ಟನ್ ಗೆ ರೂ.50 ರಂತೆ ರಾಜ್ಯ ಸರ್ಕಾರದಿಂದ ಒಟ್ಟು ರೂ.300 ಕೋಟಿ ಸಬ್ಸಿಡಿ ಹಂಚಿಕೆ ಮಾಡುವ ಮೂಲಕ ರೈತರಿಗೆ ಎದುರಾಗಿದ್ದ ಬಹುದೊಡ್ಡ ಸಂಕಷ್ಟದಿಂದ ಪಾರು ಮಾಡಿದ್ದೇವೆ. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಗದು ರಹಿತ ಡಿಜಿಟಲ್ ವಹಿವಾಟು ಜಾರಿಗೊಳಿಸಿದ ದೇಶದ ಏಕೈಕ ರಾಜ್ಯ ಕರ್ನಾಟಕ. ರಾಜ್ಯದ ರೇಷ್ಮೆ ಮಾರಾಟ ಕೇಂದ್ರಗಳಲ್ಲಿ ನಗದು ರಹಿತ ಆನ್ ಲೈನ್ ವಹಿವಾಟು, ಇ-ಹರಾಜು ಹಾಗೂ ಇ-ತೂಕ ಮಾಪನ ವ್ಯವಸ್ಥೆಯ ಮೂಲಕ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತಂದು, ರೇಷ್ಮೆ ಬೆಳೆಗಾರರ ಹಿತ ರಕ್ಷಿಸಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಕೃಷಿಭಾಗ್ಯ ಯೋಜನೆಗೆ ನಾವು ಮರುಚಾಲನೆ ನೀಡಿದ್ದು, ಬರಪೀಡಿತ ತಾಲೂಕುಗಳಲ್ಲಿ ರೂ.200 ಕೋಟಿ ಅನುದಾನದಡಿ 3,735 ಕೃಷಿಹೊಂಡಗಳು ಹಾಗೂ ಪಾಲಿಹೌಸ್ ಗಳನ್ನು ನಿರ್ಮಿಸಲಾಗಿದೆ.
— CM of Karnataka (@CMofKarnataka) February 14, 2026
ಮಳೆಯಾತ್ರಿತ ಕೃಷಿಯಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನಮ್ಮ ಈ ಯೋಜನೆ ಅನಿಶ್ಚಿತತೆಯ ಆತಂಕವನ್ನು… pic.twitter.com/YmB1ktTQfr
ಪ್ರವಾಹ ಸಂತ್ರಸ್ತರಿಗೆ ರೂ.1,218 ಕೋಟಿ
ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆನಷ್ಟಕ್ಕೀಡಾದ ರಾಜ್ಯದ ರೈತರಿಗೆ ಸಕಾಲದಲ್ಲಿ ನೆರವಿಗೆ ನಿಂತಿದ್ದು ನಮ್ಮ ಸರ್ಕಾರ. ಪ್ರವಾಹ ಸಂತ್ರಸ್ತ 14.21 ಲಕ್ಷ ರೈತರಿಗೆ ರೂ.1,218 ಕೋಟಿ ಎಸ್.ಡಿ.ಆರ್.ಎಫ್ ಅನುದಾನ ಹಾಗೂ ರೂ.1,032 ಕೋಟಿ ಹೆಚ್ಚುವರಿಯಾಗಿ ಪರಿಹಾರ ಹಂಚಿಕೆ ಮಾಡಿ, ಕಷ್ಟಕಾಲದಲ್ಲಿ ಅನ್ನದಾತರ 'ಕೈ' ಹಿಡಿದಿದ್ದೇವೆ.
ಜಾನುವಾರು ಮತ್ತು ಕುರಿ/ಮೇಕೆಗಳು ಆಕಸ್ಮಿಕ ಮರಣ ಹೊಂದಿದರೆ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಮರುಚಾಲನೆ ನೀಡಲಾಗಿದೆ. ಈ ವರೆಗೆ ಸುಮಾರು ರೂ.100 ಕೋಟಿ ಪರಿಹಾರ ವಿತರಣೆ ಪರಿಹಾರದ ಹಣವನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿದ್ದ ಪಶು ಸಾಕಾಣಿಕೆದಾರರಿಗೆ ಸಕಾಲದಲ್ಲಿ ನೆರವಿಗೆ ನಿಲ್ಲಲಾಗಿದೆ ಎಂದರು.
ಲಕ್ಷಾಂತರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ
ರಾಜ್ಯ ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನೀಡಿದ್ದೇವೆ. ಹಕ್ಕು ಪತ್ರಗಳನ್ನು ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳು ಪಡೆದಿವೆ. ಇದು ನಮ್ಮ ಸರ್ಕಾರದ ದಾಖಲೆ. ರಾಜ್ಯದ ಜಿಡಿಪಿ ಯನ್ನು ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರು ಸಚಿವರಾದ ಮೇಲೆ ಕ್ರಾಂತಿಕಾರಿ ಪ್ರಗತಿ ಆಗಿದೆ. ಜಿಡಿಪಿ ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ ಎಂದು ಅವರು ತಮ್ಮ ಸರ್ಕಾರದ ಸಾಧನೆ ತಿಳಿಸಿದರು.
-
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications