KPSC Re Exam 2024: ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಮರು ಪರೀಕ್ಷೆಗೆ ದಿನಾಂಕ ಫಿಕ್ಸ್
ಬೆಂಗಳೂರು, ಅಕ್ಟೋಬರ್ 02: ಇದೇ ವರ್ಷ ಡಿಸೆಂಬರ್ 29ರಂದು ಬೇರಾವುದೇ ಪರೀಕ್ಷೆಗಳು ನಿಗದಿ ಆಗಿರದ ಕಾರಣ ಅಂದು ಗೆಜೆಟೆಡ್ ಪ್ರೊಬೆಷನರಿ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆಯನ್ನು ನಿಗದಿ ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ (KPSC) ಅಧಿಸೂಚನೆ ಹೊರಡಿಸಿದೆ.
''2023-24ನೇ ಸಾಲಿನ ಗೆಜರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಮರುಪರಿಶೀಲನೆಗೆ ದಿ:29.12.2024 ರಂದು ನಿಗದಿಪಡಿಸಿದ ಅಧಿಸೂಚನೆಯ ತಿದ್ದುಪಡಿಯನ್ನು ಆದೇಶಿಸಲಾಗಿದೆ. ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ'' ಎಂದು ಕೆಪಿಎಸ್‌ಸಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದೆ.

ಈ ಕೆಪಿಎಸ್‌ಸಿ ಒಟ್ಟು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಪರೀಕ್ಷೆಗಳನ್ನು ಇದೇ ವರ್ಷ ಆಗಸ್ಟ್ ನಲ್ಲಿ ನಡೆಸಲಾಗಿತ್ತು. ಆದರೆ ಅಂದಿನ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರ ಮಾಡಲಾಗಿದೆ ಎಂಬ ಸುದ್ದಿ, ಸ್ಕ್ರೀನ್ ಶಾಟ್‌ಗಳು ಹರಿದಾಡಿದ್ದವು.
2023-24ನೇ ಸಾಲಿನ ಗೆಜ಼ೆಟೆಡ್ ಪ್ರೊಬೆಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿರುತ್ತದೆ.
— Secretary KPSC (@secretarykpsc) October 1, 2024
ಕೆಪಿಎಸ್‌ಸಿಯ ಈ ಯಡವಟ್ಟು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮರುಪರೀಕ್ಷೆ ನಡೆಸುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ಡಿಸೆಂಬರ್‌ನಲ್ಲಿ ಮರು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಯಾರೆಲ್ಲ ಕೆಪಿಎಸ್‌ಸಿಯ ಈ ಮೇಲಿನ 384 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೀರಿ ಅವರೆಲ್ಲ, ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಆಯೋಗವು ಮಾಹಿತಿ ನೀಡಿದೆ.
ಯಾವುದೇ ಕಾರಣಕ್ಕೆ ದಿನಾಂಕ ಬದಲಾಗಲ್ಲ
ಬೇರೆ ಯಾವುದೇ ಪರೀಕ್ಷೆಗಳು ಮುಂದಿನ ಡಿಸೆಂಬರ್ 29ರಂದು ಈವರೆಗೆ ನಿಗದಿ ಆಗಿಲ್ಲ. ಹೀಗಾಗಿ ಕೆಎಪಿಎಸ್ ಮರು ಪರೀಕ್ಷೆ ಅಂದು ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ದಿನಾಂಕದಂದು ಬೇರೆ ಯಾವುದೇ ಪರೀಕ್ಷೆಗಳು ನಿಗದಿ ಆದರೂ ಅದಕ್ಕೆ ಕೆಪಿಎಸ್‌ಸಿ ಹೊಣೆಯಲ್ಲ. ಕೆಪಿಎಸ್‌ಸಿ ಮರು ಪರೀಕ್ಷೆ ದಿನಾಂಕ ಮುಂದೂಡಲ್ಲ ಎಂದು ಅಧಿಸೂಚನೆಯಲ್ಲಿ ಆಯೋಗ ತಿಳಿಯಪಡಿಸಿದೆ.
ಇದೇ ಹುದ್ದೆಗಳಿಗೆ ಆಗಸ್ಟ್‌ನಲ್ಲಿ ಪರೀಕ್ಷೆ ನಡೆದಿತ್ತು. ಅಂದು ಭಾಷಾಂತರ ವಿಚಾರವಾಗಿ ಪ್ರಶ್ನೆಪತ್ರಿಕೆ ಫೋಟೋ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದರಿಂದ ಆಯೋಗ ಇರಿಸು ಮುರಿಸು ಅನುಭವಿಸಿತ್ತು. ಇದರ ಬೆನ್ನಲ್ಲೆ ಮುಂದಿನ ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿತ್ತು.
ಅದರಂತೆ ಕಳೆದ ತಿಂಗಳು ಸೆಪ್ಟಂಬರ್ 26 ರಂದು ಮರು ಪರೀಕ್ಷೆಗೆ ದಿನಾಂಕ ನಿಗದಿ ಮಾಡುವ ಕುರಿತು ಸಭೆ ನಡೆಸಲಾಗಿತ್ತು. ಅದರಲ್ಲಿ ಚರ್ಚೆಗಳು ನಡೆಸಿ ಕೊನೆಗೆ ಡಿಸೆಂಬರ್ 29ರಂದು ಫಿಕ್ಸ್ ಮಾಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ. ಈ ಬಾರಿ ಯಾವುದೇ ತಪ್ಪುಗಳಾಗದಂತೆ ಅಗತ್ಯ ಎಚ್ಚರಿಕೆ ವಹಿಸುವುದಾಗಿ ಆಯೋಗ ಭರವಸೆ ನೀಡಿದೆ.












Click it and Unblock the Notifications