ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಿದ್ದಾನೆ! ನಾಳೆ ಅಂತಿಮ ನಿರ್ಧಾರ ಪ್ರಕಟಿಸುವೆ: ಉಪ್ಪಿ

By Mahesh
|
Google Oneindia Kannada News

ಬಿಜೆಪಿಗೆ ಸೇರ್ತೀರಾ?.. ಅಯ್ಯೋ ಹಂಗೇನಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿಯಿಂದ ನಡೆದು ಹೋದರು. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಸೋಮವಾರ(ಮಾರ್ಚ್ 05) ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಜೆಪಿ ಹಾಗೂ ಪ್ರಜಾಕೀಯದ ನಡುವಿನ ಟಿಕೆಟ್ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಭಾರಿ ನಿರೀಕ್ಷೆಯಿಂದ ಸ್ಥಾಪನೆಯಾಗಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆ.ಪಿ.ಜೆ.ಪಿ ) ದಲ್ಲಿ ಭಿನ್ನಮತ ಸ್ಫೋಟಗೊಂಡಿರುವ ಸುದ್ದಿ ಸ್ಫೋಟಗೊಂಡ ಬಳಿಕ ಪಕ್ಷದ ಸ್ಥಾಪಕ ಮಹೇಶ್ ಗೌಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?

ಅವರೇ ನಮ್ಮ ಸಿದ್ಧಾಂತ ನಂಬಿ ಬಂದರು. ನನ್ನ ಪ್ರೆಸಿಡೆಂಟ್ ಮಾಡಿದರು, ಈಗ ಇನ್ನೇನು ಪ್ರಚಾರಕ್ಕೆ ಹೊರಡಬೇಕು ಎನ್ನುವಾಗ, ಫಂಡ್ ಕಲೆಕ್ಷನ್ ಬಗ್ಗೆ ಮಾತು ಬಂತು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತು, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿದರು.

ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದ ಉಪೇಂದ್ರ ಅವರಿಗೆ ಹಿನ್ನಡೆಯಾಗಿದೆ. ದೇವರಿದ್ದಾನೆ, ನನ್ನ ಅಂತಿಮ ನಿರ್ಧಾರವನ್ನು ಮಾರ್ಚ್ 06ರಂದು ಪ್ರಕಟಿಸುತ್ತೇನೆ ಎಂದಿದ್ದಾರೆ...ಉಪೇಂದ್ರ ಅವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ...

ನಾನು ಉತ್ತರ ನೀಡಬೇಕಾಗುತ್ತದೆ

ನಾನು ಉತ್ತರ ನೀಡಬೇಕಾಗುತ್ತದೆ

''ನಮಗೆ ಕಾರ್ಮಿಕರು ಬೇಕು. ಚುನಾವಣೆಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಸಮೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ಅಪಸ್ವರ ಕೇಳಿ ಬಂದಿತು. ಬಿ-ಫಾರ್ಮ್ ನೀಡುವ ವಿಚಾರವಾಗಿ ಕೆಲವೊಂದು ಗೊಂದಲ ಉಂಟಾಗುವ ಭೀತಿ ಎದುರಾಯಿತು, ಹೀಗಾಗಿ, 150-200 ಅಭ್ಯರ್ಥಿಗಳ ಹಿತ ಕಾಯಲು ಸೈನಿಂಗ್ ಅಥಾರಿಟಿ ಕೇಳಿದೆ ಎಂದ ಉಪೇಂದ್ರ

ಪಕ್ಷವನ್ನು ಕೊಂಡುಕೊಳ್ಳಲಿಲ್ಲ

ಪಕ್ಷವನ್ನು ಕೊಂಡುಕೊಳ್ಳಲಿಲ್ಲ

ಹಣವಿಲ್ಲದೆ ಮಾಡೋಣ, ವಿಚಾರ ಮುಖ್ಯ ಎಂದರು, ಒಂದೆರಡು ತಿಂಗಳು ಚೆನ್ನಾಗಿ ನಡೆಯಿತು. ಕೆಪಿಜೆಪಿ ಹಾಗೂ ಪ್ರಜಾಕೀಯ ಬಗ್ಗೆ ಅವರಿಗಿದ್ದ ಗೊಂದಲ ಪರಿಹಾರವಾದ ಬಳಿಕ ಈಗ ಟಿಕೆಟ್ ರಾಜಕೀಯ ಸಮಸ್ಯೆ ಎದುರಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಲು ಮಾರ್ಚ್ 06ರಂದು ನಾನು ಅಭ್ಯರ್ಥಿಗಳ ಜತೆ ಮಾತನಾಡಿ ಇತ್ಯರ್ಥ ಮಾಡುವುದಕ್ಕೂ ಮುಂಚೆ ಆತುರವಾಗಿ ಅವರು ಮಾಧ್ಯಮಗಳ ಮುಂದೆ ಹೋಗಿ ನನ್ನನ್ನು ಡಿಕ್ಟೇಟರ್ ಎಂದೆಲ್ಲ ಹೇಳಿದ್ದಾರೆ.

ಕೆಆರ್ ಕ್ಷೇತ್ರದಿಂದ ರೂಪಾ ಅಯ್ಯರ್ ಸ್ಪರ್ಧೆ? ಕೆಪಿಜೆಪಿ ಮಾಹಿತಿ ಏನು?ಕೆಆರ್ ಕ್ಷೇತ್ರದಿಂದ ರೂಪಾ ಅಯ್ಯರ್ ಸ್ಪರ್ಧೆ? ಕೆಪಿಜೆಪಿ ಮಾಹಿತಿ ಏನು?

ರಾಜಕೀಯ ಅಲ್ಲ, ಪ್ರಜಾಕೀಯ

ರಾಜಕೀಯ ಅಲ್ಲ, ಪ್ರಜಾಕೀಯ

ಹಣ, ಹೆಸರು ಬೇಡ, ನಿಮ್ಮ ಸಿದ್ಧಾಂತ ಒಪ್ಪಿದ್ದೇವೆ, ಪ್ರಜಾಕೀಯಕ್ಕೆ ಬೆಂಬಲವಿದೆ' ಎಂದು ಹೇಳಿದ್ದರಿಂದ ಅವರ ಜತೆ ಕೈಜೋಡಿಸಿದ್ದೆವು. ಆದರೆ, ಅವರ ಕಮಿಟಿಯವರು ಉಪೇಂದ್ರ ಸಿದ್ಧಾಂತ ಸರಿಯಿಲ್ಲ, ಅವರನ್ನು ಪಕ್ಷದಿಂದ ಹೊರ ಹಾಕೋಣ ಎಂದು ನಿರ್ಧರಿಸಿದರೆ, ಏನು ಮಾಡಲಿ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.

ಡಿಕ್ಟೇಟರ್ ಶಿಪ್ ಎಂದು ಯಾಕೆ ಹೇಳಿದ್ರು?

ಡಿಕ್ಟೇಟರ್ ಶಿಪ್ ಎಂದು ಯಾಕೆ ಹೇಳಿದ್ರು?

ನಾನು ನಾಯಕ ಅಲ್ಲ. ನಾನು ಕಾರ್ಮಿಕ. ನಮಗೆ ಕಾರ್ಮಿಕರು ಬೇಕು. ರಾಜಕೀಯ ಮಾಡುವುದಾಗಿದ್ದರೆ, ನನ್ನ ಜೊತೆಗೆ ಬರಲೇಬಾರದಿತ್ತು. ಜನರಿಗೆ ನಾನು ಕಾರ್ಮಿಕರನ್ನು ಕೊಡುತ್ತೇನೆ ಎಂದು ಹೇಳಿದ್ದೇನೆ. ರಾಜರನ್ನು ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೀಗಿರುವಾಗ, ಅಭ್ಯರ್ಥಿಗಳಿಗೆ ಇಪ್ಪತ್ತು ವೋಟ್ ಕೂಡ ಬರಲ್ಲ ಅಂದ್ರೆ ಏನರ್ಥ.?

ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ

ಬಿಜೆಪಿಗೆ ಸೇರ್ತೀರಾ?.

ಬಿಜೆಪಿಗೆ ಸೇರ್ತೀರಾ?.

ಬಿಜೆಪಿಗೆ ಸೇರ್ತೀರಾ?.. ಅಯ್ಯೋ ಹಂಗೇನಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿಯಿಂದ ನಡೆದು ಹೋದರು. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಸೋಮವಾರ (ಮಾರ್ಚ್ 05) ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಜೆಪಿ ಹಾಗೂ ಪ್ರಜಾಕೀಯದ ನಡುವಿನ ಟಿಕೆಟ್ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಬೇರೆ ಪಕ್ಷ ಸೇರಬೇಕಾದ್ರೆ 6 ತಿಂಗಳಿನಿಂದ ಕೆಪಿಜೆಪಿಗಾಗಿ ದುಡಿಯಬೇಕಾಗಿರಲಿಲ್ಲ ಎಂದರು

English summary
KPJP- Prajakiya president, Actor Upendra clarifies about the difference between the Prajakiya and politics. Final decision on whether to go with KPJP or to quit will be announced on March 06. Here are the Press meet highlights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X