ಬಿಜೆಪಿ ಆಡಳಿತದಲ್ಲಿ ಕಂಡು ಬರುವುದು ಎರಡೇ ಸಂಗತಿಗಳು; ಒಂದು ಲಂಚ, ಮತ್ತೊಂದು ಮಂಚ!

ಬೆಂಗಳೂರು, ಮಾ. 13: ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಪ್ರಕರಣ ಬಿಜೆಪಿಗೆ ಇನ್ನಿಲ್ಲದ ಮುಜುಗುರವನ್ನು ತಂದಿಟ್ಟಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗೂ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡುತ್ತಿದೆ.

ಮಾರ್ಚ್‌ 2 ರಂದು ಸಂಜೆ ಬಿಡುಗಡೆ ಆದ ಬಳಿಕ ಬಹಳಷ್ಟು ಬೆಳವಣಿಗೆಗಳು ರಾಜ್ಯದಲ್ಲಿ ಆಗಿವೆ. ತಾವು ನಿರಪರಾಧಿ ಎಂದು ಹೇಳುತ್ತಲೇ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಈ ವರೆಗೂ ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ದೂರು ದಾಖಲಿಸಿಲ್ಲ. ಅದು ಸಂಶಯಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

KPCC Satire on Karnataka BJP Govt over Ramesh Jarkiholi CD

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಬಿಜೆಪಿ ನಡೆಯನ್ನು ಲೆವಡಿ ಮಾಡಿದೆ. ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ ಸಂಗತಿಗಳು. ಒಂದು ಲಂಚ, ಮತ್ತೊಂದು ಮಂಚ!. ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿ ಅವರು ದೂರು ನೀಡಲು ಮಿನಾಮೇಷ ಎಣಿಸುತ್ತಿರುವುದೇಕೆ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ? ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವಾ ಅಥವಾ ಬಿಜೆಪಿ ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯ ರಮೇಶ್ ಜಾರಕಿಹೊಳಿ ಅವರನ್ನು ಕಾಡುತ್ತಿದೆಯಾ ಎಂದು ಕೆಪಿಸಿಸಿ ಪ್ರಶ್ನೆ ಮಾಡಿದೆ.

KPCC Satire on Karnataka BJP Govt over Ramesh Jarkiholi CD

ಕಾಂಗ್ರೆಸ್ ಪಕ್ಷ ಎತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ಏನೆಂದು ಉತ್ತರ ಕೊಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+