ಗಡ್ಡಕ್ಕೆ ಕತ್ತರಿ ಹಾಕಿದ ಡಿಕೆಶಿ: ಈಡೇರಿತಾ ಕೆಪಿಸಿಸಿ ಅಧ್ಯಕ್ಷರ ಶಪಥ?

ರಾಮನಗರ, ಮೇ 11: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದ್ದು. ಕಳೆದ ಮೂರು ನಾಲ್ಕು ತಿಂಗಳಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರಾಜಕೀಯ ನಾಯಕರು ಫಲಿತಾಂಶದ ಚಿಂತೆಯ ನಡುವೆಯೇ ಸದ್ಯ ರಿಲ್ಯಾಕ್ಸ್‌ ಮೂಡಿಗೆ ಜಾರಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಹೊರಬಂದ ಬಳಿಕ ಗೆಲುವಿನ ನಿರೀಕ್ಷೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ.

ಗುರುವಾರ ಬೆಳಗ್ಗೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಗೌರಮ್ಮ ವಾಸವಿರುವ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ಡಿ.ಕೆ ಶಿವಕುಮಾರ್‌ ಜೊತೆ ಅವರ ಸಹೋದರ ಡಿ.ಕೆ ಸುರೇಶ್‌ ಸಹ ಗೌರಮ್ಮ ಅವರ ಆಶೀರ್ವಾದ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಚುನಾವಣಾ ಪ್ರಚಾರದಲ್ಲಿದ್ದ ಡಿ.ಕೆ ಶಿವಕುಮಾರ್‌ ಸದ್ಯ ತಾಯಿ ಹಾಗೂ ಸಹೋದರನೊಂದಿಗೆ ಸಮಯ ಕಳೆದಿದ್ದಾರೆ.

dk shivakumar

ಅಲ್ಲದೇ ಕನಕಪುರದ ಹೋಟೆಲ್‌ವೊಂದರಲ್ಲಿ ಸಹೋದರ ಡಿ.ಕೆ ಸುರೇಶ್‌ ಹಾಗೂ ಬೆಂಬಲಿಗರ ಜೊತೆ ಉಪಹಾರ ಸೇವಿಸಿ ಸಮಯ ಕಳೆದಿದ್ದಾರೆ.

ಇನ್ನು ಚುನಾವಣಾ ಸಮಯದಲ್ಲಿ ಡಿ.ಕೆ ಶಿವಕುಮಾರ್‌ ಗಡ್ಡ ಕೂಡ ಇಂಟ್ರಸ್ಟಿಂಗ್‌ ವಿಚಾರ ಎನಿಸಿತ್ತು. ಈ ವಿಚಾರದ ಬಗ್ಗೆ ಚರ್ಚೆ ಕೂಡ ನಡೆದಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿ ಡಿ.ಕೆ ಶಿವಕುಮಾರ್‌ ಗಡ್ಡ ಬಿಟ್ಟಿದ್ದಾರೆ ಎನ್ನುವ ವಿಚಾರವೂ ಹರಿದಾಡಿತ್ತು.

dk shivakumar

ಈ ಬಗ್ಗೆ ಮಾತನಾಡಿದ್ದ ಡಿ.ಕೆ ಶಿವಕುಮಾರ್‌ ಜೊತೆ ಅವರ ಸಹೋದರ ಡಿ.ಕೆ ಸುರೇಶ್‌ ಕೆಪಿಸಿಸಿ ಅಧ್ಯಕ್ಷರು ಯಾಕೆ ಗಡ್ಡ ಬಿಟ್ಟಿದ್ದಾರೆ ಎನ್ನುವುದು ಮೇ 13ರ ಬಳಿಕ ಗೊತ್ತಾಲಿಗೆ ಎಂದಿದ್ದರು. ಆದರೆ ಇದೀಗ ಮತದಾನ ಮುಗಿಯುತ್ತಿದ್ದಂತೆ ಚುನಾವಣಾ ಫಲಿತಾಂಶಕ್ಕೂ ಮೊದಲು ಡಿ.ಕೆ ಶಿವಕುಮಾರ್‌ ಗಡ್ಡವನ್ನು ಟ್ರಿಮ್‌ ಮಾಡಿದ್ದಾರೆ. ಡಿ.ಕೆ ಶಿವಕುಮಾರ್‌ ಈ ರೀತಿ ಗಡ್ಡ ತೆಗೆದಿರುವುದು ಅವರ ಶಪಥ ಈಡೇರಿದೆಯಾ ಎನ್ನುವ ಕುತೂಹಲ ಮೂಡಿಸಿದೆ.



ಇನ್ನು ಮೇ 10 ಸಂಜೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿದ್ದು, ಕರ್ನಾಟಕದ ಜನತೆ ಕಾಂಗ್ರೆಸ್‌ ಪಕ್ಷದ ಮೇಲೆ ಹೆಚ್ಚಿನ ಒಲವು ಹೊಂದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಕೂಡ ಹೆಚ್ಚಿದೆ ಎನ್ನುವುದು ಕೂಡ ಸಮೀಕ್ಷೆಯಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+