ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಎಸ್.ಎಂ.ಕೃಷ್ಣ, ಇಂದು ಡಿಕೆಶಿ: ರಾಜಕೀಯ ಗುರು ಸಾಗಿದ ದಾರಿಯಲ್ಲೇ ಹೊರಟ ಕೆಪಿಸಿಸಿ ಅಧ್ಯಕ್ಷರು

|
Google Oneindia Kannada News

ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ಪಣತೊಟ್ಟು ನಿಂತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇರೆ ಬೇರೆ ದಾರಿಯಲ್ಲಿ ಸಾಗುತ್ತಿರುವುದನ್ನು ಅರಿತ ಹೈಕಮಾಂಡ್ ಜಂಟಿ ಪ್ರವಾಸ ಕೈಗೊಳ್ಳುವಂತೆ ಸೂಚಿಸಿದೆ.

ಮೈಸೂರು ಮೇಯರ್ ವಿಚಾರ ಪಕ್ಷದಲ್ಲಿ ಇಷ್ಟರಮಟ್ಟಿಗೆ ಪ್ರತಿರೋಧ ವ್ಯಕ್ತವಾಗಬಹುದು ಎನ್ನುವ ಲೆಕ್ಕಾಚಾರವನ್ನು ಡಿಕೆಶಿ ಹೊಂದಿರಲಿಕ್ಕಿರಲಿಲ್ಲ. ಈ ವಿಚಾರ, ಹೈಕಮಾಂಡ್ ಅಂಗಣಕ್ಕೂ ಹೋಗಿದೆ ಎಂದು ಹೇಳಲಾಗುತ್ತಿದೆ.

ಚುನಾವಣಾ ತಯಾರಿ; ಕುರುಡುಮಲೆ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ!ಚುನಾವಣಾ ತಯಾರಿ; ಕುರುಡುಮಲೆ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ!

ಸಿದ್ದರಾಮಯ್ಯನವರು ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದ ನಂತರ, ಹೈಕಮಾಂಡ್ ಆಪ್ತರಾಗಿರುವ ಕೆ.ಸಿ.ವೇಣುಗೋಪಾಲ್ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ, ಮೈಸೂರು ವಿಚಾರ ಪ್ರಸ್ತಾವಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಎಚ್ಡಿಕೆ ಮಣಿಸಲು ಡಿಕೆಶಿ ಬೂಟು ನೆಕ್ಕಿದ್ದ ಯೋಗೇಶ್ವರ್: ಏನಿದು ಗಂಭೀರ ಆರೋಪ!ಎಚ್ಡಿಕೆ ಮಣಿಸಲು ಡಿಕೆಶಿ ಬೂಟು ನೆಕ್ಕಿದ್ದ ಯೋಗೇಶ್ವರ್: ಏನಿದು ಗಂಭೀರ ಆರೋಪ!

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ತಮ್ಮ ಮೈಸೂರು ಪ್ರವಾಸವನ್ನು ದಿಢೀರನೇ ರದ್ದುಗೊಳಿಸಿದ್ದಾರೆ. ಇನ್ನೊಂದೆಡೆ, ಡಿ.ಕೆ.ಶಿವಕುಮಾರ್ ಅವರು ಕೋಲಾರ ಜಿಲ್ಲೆಯ ಐತಿಹಾಸಿಕ ಕುರುಡುಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿದ್ದಾರೆ. ಇದು ತಮ್ಮ ರಾಜಕೀಯ ಗುರು, ಎಸ್.ಎಂ.ಕೃಷ್ಣ ಈ ಹಿಂದೆ ತಳೆದಿದ್ದ ನಿಲುವಿನಂತೆಯೇ ಆಗಿದೆ.

ವಿನಾಯಕನಿಗೆ ಡಿಕೆಶಿ ಪೂಜೆ

ವಿನಾಯಕನಿಗೆ ಡಿಕೆಶಿ ಪೂಜೆ

ಕೋಲಾರದ ಮುಳಬಾಗಿಲಿನಲ್ಲಿರುವ ಪುರಾಣ ಪ್ರಸಿದ್ದ ಕರಡುಮಲೆ ವಿನಾಯಕಸ್ವಾಮಿ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಇಂದು (ಮಾ 1) ಪೂಜೆ ಸಲ್ಲಿಸಿದ್ದಾರೆ. ಬಹುತೇಕ ಎಲ್ಲಾ ರಾಜಕಾರಿಣಿಗಳು ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚುನಾವಣೆ ಪ್ರಚಾರವನ್ನು ಆರಂಭಿಸುವುದು ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದು ಡಿಕೆಶಿ ಪೂಜೆ ಸಲ್ಲಿಸಿದ್ದು, ಮಾರ್ಚ್ ಮೂರರಿಂದ ಪಾದಯಾತ್ರೆ ಆರಂಭವಾಗಲಿದೆ.

ಕಾಂಗ್ರೆಸ್

ಕಾಂಗ್ರೆಸ್

ಡಿ.ಕೆ.ಶಿವಕುಮಾರ್ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸುತ್ತಿರುವುದಕ್ಕೆ ವಿಶೇಷ ಮಹತ್ವವಿದೆ. ಅಂದಿನ ತಮ್ಮ ರಾಜಕೀಯ ಗುರು, ಈಗಿನ ನೆಂಟರಿಷ್ಟರೂ ಆಗಿರುವ ಎಸ್.ಎಂ.ಕೃಷ್ಣ ಅವರು ಈ ಹಿಂದೆ ಇದೇ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕಾಂಗ್ರೆಸ್ ಪರವಾಗಿ ಪ್ರಚಾರ ಆರಂಭಿಸಿದ್ದರು. ಅಂದು ಅದು ವರ್ಕೌಟ್ ಆಗಿತ್ತು.

ಎಸ್.ಎಂ.ಕೃಷ್ಣ ಪಾಂಚಜನ್ಯ ಪ್ರಚಾರ

ಎಸ್.ಎಂ.ಕೃಷ್ಣ ಪಾಂಚಜನ್ಯ ಪ್ರಚಾರ

1999ರ ಚುನಾವಣೆಯ ವೇಳೆ ಎಸ್.ಎಂ.ಕೃಷ್ಣ ಕುರುಡುಮಲೆ ದೇವಾಲಯದಿಂದಲೇ ಪಾಂಚಜನ್ಯ ಎನ್ನುವ ಹೆಸರಿನ ಮೂಲಕ ಪ್ರಚಾರ ಆರಂಭಿಸಿದ್ದರು. ಇದು ಕಾಂಗ್ರೆಸ್ಸಿಗೆ ಭರ್ಜರಿ ವರ್ಕೌಟ್ ಆಗಿತ್ತು. ಕೃಷ್ಣ ಅವರ ಈ ಯಾತ್ರೆ, ಜೆ.ಎಚ್ ಪಟೇಲ್ ಅವರ ಸರಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿತ್ತು. 132 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತ್ತು.

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada
ಕಾರ್ಯತಂತ್ರ ಕಾಂಗ್ರೆಸ್ಸಿಗೆ ಯಾವ ರೀತಿ ಲಾಭ ತಂದು ಕೊಡಲಿದೆ

ಕಾರ್ಯತಂತ್ರ ಕಾಂಗ್ರೆಸ್ಸಿಗೆ ಯಾವ ರೀತಿ ಲಾಭ ತಂದು ಕೊಡಲಿದೆ

ಈಗ, ಕೆಪಿಸಿಸಿ ಅಧ್ಯಕ್ಷರು ಅದೇ ದಾರಿಯಲ್ಲಿ ಸಾಗಲು ಮುಂದಾಗಿದ್ದಾರೆ. ಅಪ್ರತಿಮ ದೈವಭಕ್ತರಾಗಿರುವ ಡಿಕೆಸಿ, ಕುರುಡುಮಲೆ ದೇವಾಲಯದಿಂದಲೇ ಪ್ರಚಾರ ಶುರು ಮಾಡಲು ಪೂಜೆ ಸಲ್ಲಿಸಿದ್ದಾರೆ. ಇವರ ಈ ಕಾರ್ಯತಂತ್ರ ಕಾಂಗ್ರೆಸ್ಸಿಗೆ ಯಾವ ರೀತಿ ಲಾಭ ತಂದು ಕೊಡಲಿದೆ, ಎಸ್.ಎಂ.ಕೃಷ್ಣ ಅವರ ರೀತಿಯಲ್ಲಿ ಜನರ ಮತ್ತು ವಿನಾಯಕನ ಆಶೀರ್ವಾದ ಕಾಂಗ್ರೆಸ್ ಮೇಲೆ ಇರಲಿದೆಯೇ ಎಂದು ಕಾದು ನೋಡಬೇಕಿದೆ.

English summary
KPCC President DK Shivakumar Started Election Campaign From Kurudumale Temple, In 1999 S M Krishna Did The Same Thing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X