ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಡಿಕೆಶಿ ಸ್ಪೋಟಕ ಭಾಷಣ: 'ಮಂಚದ ಮೇಲಿರುವಾಗ ಮಂಚದ ಕೆಲಸ ಮಾಡಲಿ'

|
Google Oneindia Kannada News

ಬೆಂಗಳೂರು, ಮಾರ್ಚ್ 22: ಹಾಲಿ ಬಜೆಟ್ ಅಧಿವೇಶನದ ನಿಯಮ 69ರಡಿ ವಿಧಾನಸಭೆಯಲ್ಲಿ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಚರ್ಚೆ ಜೋರಾಗಿ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಸುದೀರ್ಘವಾಗಿ ಭಾಷಣ ಮಾಡಿದ್ದಾರೆ.

ಈ ವಿಚಾರದಲ್ಲಿ ವಿಶೇಷ ತನಿಖಾ ದಳದವರು ಸಂಪೂರ್ಣ ವಿಫಲರಾಗಿದ್ದು, ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ಸಿಡಿ' ಪ್ರಕರಣ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಯಿ ಮುಚ್ಚಿಸಿದ ಬಸವರಾಜ್ ಬೊಮ್ಮಾಯಿ!'ಸಿಡಿ' ಪ್ರಕರಣ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಯಿ ಮುಚ್ಚಿಸಿದ ಬಸವರಾಜ್ ಬೊಮ್ಮಾಯಿ!

ಸಿದ್ದರಾಮಯ್ಯನವರ ಭಾಷಣದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಬೆಂಕಿಯುಂಡೆಯಂತಹ ಭಾಷಣವನ್ನು ಮಾಡಿ, ಆಡಳಿತ ಪಕ್ಷವನ್ನು ತಬ್ಬಿಬ್ಬಾಗಿಸಿದ್ದಾರೆ.

"ಮಂಚದ ಮೇಲಿರುವಾಗ, ಮಂಚದ ಕೆಲಸ ಮಾಡಲಿ, ಅಲ್ಯಾಕ್ರೀ ರಾಜಕೀಯ ಮಾಡುತ್ತೀರಾ" ಎಂದು ತಮ್ಮ ಭಾಷಣದಲ್ಲಿ ಡಿಕೆಶಿ ಹೇಳಿದ್ದು, ಈಗಿನ ರಾಜಕೀಯ ವ್ಯವಸ್ಥೆಯನ್ನು ಜನರು ಹೇಸಿಗೆ ಪಟ್ಟು ನೋಡುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಡಿಕೆಶಿ ಭಾಷಣದ ಹೈಲೆಟ್ಸ್, ಮುಂದೆ:

 ಕಲ್ಯಾಣ ಕರ್ನಾಟಕ ಅಭಿವೃದ್ದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಂಪತ್ತು ವೃದ್ದಿ! ಕಲ್ಯಾಣ ಕರ್ನಾಟಕ ಅಭಿವೃದ್ದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸಂಪತ್ತು ವೃದ್ದಿ!

 ಗೃಹಸಚಿವ ಬೊಮ್ಮಾಯಿ

ಗೃಹಸಚಿವ ಬೊಮ್ಮಾಯಿ

ಎಲ್ಲರ ಫೋನ್ ಟ್ಯಾಪ್ ಆಗುತ್ತಿದೆ, ಆದರೆ, ಸಚಿವರ ಫೋನ್ ಅನ್ನು ಕಸ್ಟಡಿಗೆ ಯಾಕೆ ತೆಗೆದುಕೊಂಡಿಲ್ಲ. ಇದಕ್ಕಾಗಿ ಪ್ರತ್ಯೇಕ ಆದೇಶವನ್ನು ಹೊರಡಿಸಿ"ಎಂದು ಗೃಹಸಚಿವ ಬೊಮ್ಮಾಯಿಯವರನ್ನು ಒತ್ತಾಯಿಸಿದ ಡಿಕೆಶಿ, "ಸಿಡಿ ಮಾಡಿದ ಹುಡುಗರು, ಆ ಹುಡುಗಿ ಇದ್ದಾರೋ ಇಲ್ಲವೋ, ಇಂತಹ ನೀಚ ರಾಜಕಾರಣವನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರಲ್ಲಾ ಅದು ಒಪ್ಪಿಕೊಳ್ಳಬೇಕಾದ ವಿಚಾರ"ಎಂದು ಡಿಕೆಶಿ ಹೇಳಿದರು.

 ಕಾಂಗ್ರೆಸ್ಸಿನವರು ಜಿಪ್ ತೆಗೆಯೋಕೆ ಹೇಳಿದ್ರಾ

ಕಾಂಗ್ರೆಸ್ಸಿನವರು ಜಿಪ್ ತೆಗೆಯೋಕೆ ಹೇಳಿದ್ರಾ

ಪ್ರೆಸ್ ಕಾನ್ಫರೆನ್ಸ್ ನಲ್ಲಿ ಆವತ್ತು ಕೇಳಿದೆ. ಜುಬ್ಬಾ, ಪ್ಯಾಂಟ್ ಜಿಪ್ ಬಿಚ್ಚೋಕೆ ನಾವು ಹೇಳಿದ್ವಾ. ಕಾಂಗ್ರೆಸ್ಸಿನವರು ಜಿಪ್ ತೆಗೆಯೋಕೆ ಹೇಳಿದ್ರಾ, ಘಟನೆಗಳ ದೃಶ್ಯಗಳನ್ನು ನೋಡಿದ್ದೆವು. ಇದು ಬೇರೆ ಕಡೆ ನಡೆಯಲು ಸಾಧ್ಯನಾ. ಇದು ಅವರ ಖಾಸಗಿ ವಿಚಾರ, ನಾವ್ಯಾರೂ ಬಟನ್ ತೆಗೆಯಲು ಹೇಳಿಲ್ಲ, ಹಾಕಲೂ ಹೇಳಿಲ್ಲ"ಎಂದು ಡಿ.ಕೆ.ಶಿವಕುಮಾರ್ ಸದನದಲ್ಲಿ ಹೇಳಿಕೆಯನ್ನು ನೀಡಿದರು.

 ಮಂಚದಲ್ಲಿದ್ದಾಗ ಮಂಚದ ಮೇಲೆ ಏನು ಕೆಲಸ ಮಾಡಬೇಕೋ ಅದನ್ನು ಮಾಡಲಿ

ಮಂಚದಲ್ಲಿದ್ದಾಗ ಮಂಚದ ಮೇಲೆ ಏನು ಕೆಲಸ ಮಾಡಬೇಕೋ ಅದನ್ನು ಮಾಡಲಿ

"ನಾವು ಕನ್ನಡಿಗರನ್ನು ಅವ್ಯಾಚ್ಯ ಶಬ್ದಗಳಿಂದ ಬೈಯಿರಿ ಎಂದು ಹೇಳಿಲ್ಲ, ಯಡಿಯೂರಪ್ಪನವರು ಕಡು ಭ್ರಷ್ಟ ಎಂದು ಹೇಳಿಲ್ಲ. ಸಿದ್ದರಾಮಯ್ಯನವರು ಎರಡು ದಿನಕ್ಕೊಮ್ಮೆ ಫೋನ್ ಮಾಡುತ್ತಾರೆ ಎಂದು ವಿಡಿಯೋದಲ್ಲಿದೆ. ಮಂಚದಲ್ಲಿದ್ದಾಗ ಮಂಚದ ಮೇಲೆ ಏನು ಕೆಲಸ ಮಾಡಬೇಕೋ ಅದನ್ನು ಮಾಡುವುದನ್ನು ಬಿಟ್ಟು ಈ ರಾಜಕಾರಣ ಎಲ್ಲಾ ಯಾಕೆ. ರಾಜಕಾರಣಿಗಳ, ಸರಕಾರದ ಮರ್ಯಾದೆಯನ್ನು ಯಾಕೆ ತೆಗೆಯಬೇಕು"ಎಂದು ಡಿಕೆಶಿ ಪ್ರಶ್ನಿಸಿದರು.

Recommended Video

ಸಿಡಿ ಗ್ಯಾಂಗ್‌ ವಶದಲ್ಲಿದ್ದಾಳಾ ಸಂತ್ರಸ್ತ ಯುವತಿ! ಎಸ್‌ಐಟಿಗೆ ಮಾಹಿತಿ ನೀಡಿದ ಯುವತಿ ಪೋಷಕರು | Oneindia Kannada
 ಇದಕ್ಕಿಂತ ನಾಚಿಕೆಗೇಡಿನ ಕೆಲಸ ಇನ್ನೊಂದು ಇದೆಯಾ

ಇದಕ್ಕಿಂತ ನಾಚಿಕೆಗೇಡಿನ ಕೆಲಸ ಇನ್ನೊಂದು ಇದೆಯಾ

ಇಷ್ಟೆಲ್ಲಾ ಮಾಡಿ, ನಾನು ಅಮಾಯಕ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಕೆಲಸ ಇನ್ನೊಂದು ಇದೆಯಾ. ಇಂತಹ ವಿದ್ಯಮಾನಗಳಿಂದ ರಾಜಕೀಯದವರು ತಲೆತಗ್ಗಿಸುವಂತಾಗಿದೆ. ಎಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ಮಾಡುವುದನ್ನು ಬಿಟ್ಟು, ದೆಹಲಿ, ಮುಖ್ಯಮಂತ್ರಿಗಳ ವಿಚಾರವೆಲ್ಲಾ ಮಂಚದಲ್ಲಿರುವಾಗ ಯಾಕೆ"ಎಂದು ಡಿ.ಕೆ.ಶಿವಕುಮಾರ್ ಸದನದಲ್ಲಿ ಸಿಡಿ ವಿಚಾರದಲ್ಲಿ ಕಿಡಿಕಾರಿದರು.

English summary
KPCC President D K Shivakumar Fiery Speech In Assembly On Ramesh Jarkiholi CD Debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X