ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ಕುರಿತು ಟ್ವೀಟ್ : ಹರ್ಷ ಮೊಯ್ಲಿಗೆ ಕೆಪಿಸಿಸಿಯಿಂದ ನೋಟಿಸ್

|
Google Oneindia Kannada News

ಬೆಂಗಳೂರು, ಮಾರ್ಚ್ 18 : ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಕುರಿತು ಟ್ವೀಟ್ ಮಾಡಿದ್ದ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿಗೆ ಕಾಂಗ್ರೆಸ್ ನೋಟಿಸ್ ಜಾರಿ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಶನಿವಾರ ಕೆಪಿಸಿಸಿ ಹರ್ಷ ಮೊಯ್ಲಿಗೆ ನೋಟಿಸ್ ನೀಡಿದೆ. ಆದರೆ, ವೀರಪ್ಪ ಮೊಯ್ಲಿ ಅವರಿಗೆ ವಿವರಣೆ ಕೇಳಿ ಯಾವುದೇ ನೋಟಿಸ್ ನೀಡಿಲ್ಲ.

ಹಣಕ್ಕಾಗಿ ಟಿಕೆಟ್ ಮಾರಾಟ, ಇಲ್ಲಿ ಯಾರು ಸಭ್ಯರು ನೀವೇ ಹೇಳಿಹಣಕ್ಕಾಗಿ ಟಿಕೆಟ್ ಮಾರಾಟ, ಇಲ್ಲಿ ಯಾರು ಸಭ್ಯರು ನೀವೇ ಹೇಳಿ

ಶುಕ್ರವಾರ ಹರ್ಷ ಮೊಯ್ಲಿ ಅವರು ಮಾಡಿದ್ದ ಟ್ವೀಟ್‌ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಈ ಟ್ವೀಟ್ ಪಕ್ಷಕ್ಕೆ ಭಾರೀ ಮುಜುಗರ ತಂದಿತ್ತು. ಪ್ರತಿಪಕ್ಷಗಳ ನಾಯಕರು ಟ್ವೀಟ್‌ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

KPCC issued notice to Harsha Moily

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

'ಹಣದ ರಾಜಕೀಯಕ್ಕೆ ಕಾಂಗ್ರೆಸ್ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ರಾಜ್ಯದ ಲೋಕೋಪಯೋಗಿ ಸಚಿವ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲಾಗದು' ಎಂದು ವೀರಪ್ಪ ಮೊಯ್ಲಿ ಅವರ ಖಾತೆಯಿಂದ ಟ್ವಿಟ್ ಮಾಡಲಾಗಿತ್ತು.

ಆ ಟ್ವೀಟ್ ಗೂ ನನಗೂ ಸಂಬಂಧವಿಲ್ಲ: ವೀರಪ್ಪ ಮೊಯ್ಲಿಆ ಟ್ವೀಟ್ ಗೂ ನನಗೂ ಸಂಬಂಧವಿಲ್ಲ: ವೀರಪ್ಪ ಮೊಯ್ಲಿ

ಈ ಟ್ವೀಟ್ ಸಾಕಷ್ಟು ವಿವಾದ ಉಂಟು ಮಾಡಿದ ಬಳಿಕ ಮೊಯ್ಲಿ ಅವರ ಖಾತೆಯಿಂದ ಅದನ್ನು ಡಿಲೀಟ್ ಮಾಡಲಾಗಿತ್ತು. 'ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಈ ಟ್ವೀಟ್ ನಾನು ಮಾಡಿದ್ದಲ್ಲ' ಎಂದು ವೀರಪ್ಪ ಮೊಯ್ಲಿ ಸ್ಪಷ್ಟನೆಯನ್ನು ನೀಡಿದ್ದರು.

English summary
Karnataka Pradesh Congress Committee (KPCC) has issued a notice to Harsha Moily who embarrassed the party by tweet alleging money power in the selection of candidates for the Karnataka assembly elections 2018. Harsha Moily son of the former Minister M. Veerappa Moily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X