ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಚೆಕ್ ಕೊಟ್ಟು ವಿವಾದಕ್ಕೆ ತೆರೆ ಎಳೆದ ಕೆಪಿಸಿಸಿ

|
Google Oneindia Kannada News

ಮಂಡ್ಯ, ಅಕ್ಟೋಬರ್ 15 : ಮಂಡ್ಯ ಜಿಲ್ಲೆಯ ಸಣಬದಕೊಪ್ಪಲುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ಕುಟುಂಬಕ್ಕೆ ಕೆಪಿಸಿಸಿ ಇಂದು ಚೆಕ್‌ ಅನ್ನು ಹಸ್ತಾಂತರ ಮಾಡಿದೆ. ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಿದಾಗ ಚೆಕ್ ನೀಡಿ ವಾಪಸ್ ಪಡೆದಿದ್ದು ವಿವಾದಕ್ಕೆ ಕಾರಣವಾಗಿತ್ತು.

ಗುರುವಾರ ಬೆಳಗ್ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಆನಂದ್ ಅವರು ಮೃತ ರೈತ ಲೋಕೇಶ್ ಪತ್ನಿ ಶೋಭಾ ಅವರಿಗೆ 1 ಲಕ್ಷ ರೂ. ಚೆಕ್‌ ಅವನ್ನು ಹಸ್ತಾಂತರ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದರು. [ಚೆಕ್ ವಿಚಾರದಲ್ಲಿ ಮೌನ ಮುರಿದ ಸಿದ್ದರಾಮಯ್ಯ]

kpcc

ಅಕ್ಟೋಬರ್ 9 ರಂದು ರೈತ ಲೊಕೇಶ್ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 1 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ, ಚೆಕ್‌ನಲ್ಲಿ ಲೋಪವಿದೆ ಎಂದು ಕೆಲವೇ ಗಂಟೆಗಳಲ್ಲಿ ಕೆಪಿಸಿಸಿ ಅದನ್ನು ವಾಪಸ್ ಪಡೆದಿತ್ತು.[ಚೆಕ್ ವಿವಾದ : ಯಾರು, ಏನು ಹೇಳಿದರು?]

ಕಾಂಗ್ರೆಸ್ ಪಕ್ಷದ ಈ ನಿರ್ಧಾರಕ್ಕೆ ಗ್ರಾಮಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಕೆಪಿಸಿಸಿಯ ನಿರ್ಧಾರದಿಂದ ಬೇಸರಗೊಂಡಿದ್ದ ಶೋಭಾ ಅವರು 'ನಾವು ಚೆಕ್‌ ಅನ್ನು ವಾಪಸ್ ಪಡೆಯುವುದಿಲ್ಲ' ಎಂದು ಹೇಳಿದ್ದರು. ಮಂಡ್ಯ ಸಂಸದ ಪುಟ್ಟರಾಜು ಅವರು ಕಾಂಗ್ರೆಸ್ ನಿರ್ಧಾರವನ್ನು ಖಂಡಿಸಿದ್ದರು.

'ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಮತ್ತು ಚೆಕ್ ವಾಪಸ್ ಪಡೆದ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದ್ದರಿಂದ ಚೆಕ್‌ ಅನ್ನು ವಾಪಸ್ ಪಡೆಯುತ್ತಿದ್ದೇನೆ' ಎಂದು ಶೋಭಾ ಅವರು ಹೇಳಿದರು.

English summary
Finally Karnataka Pradesh Congress Committee (KPCC) handover the compensation cheque to the family of farmer Lokesh in Mandya district. A cheque of Rs 1 lakh issued by KPCC to family of the deceased farmer Lokesh of Sanabadakoppalu village has been withdrawn on October 9, during Congress vice-president Rahul Gandhi visit to Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X