ಬಾಲಕ ಅಪಹರಣ: ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

Posted By: Prithviraj
Subscribe to Oneindia Kannada

ಕೊಪ್ಪಳ, ಅಕ್ಟೋಬರ್, 19: ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಪ್ರಜ್ವಲ್ (4) ಎಂಬ ಬಾಲಕನನ್ನು ಅಪಹರಣ ಮಾಡಲಾಗಿದ್ದು, ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಬಾಲಕನನ್ನು ಪತ್ತೆ ಮಾಡುವಲ್ಲಿ ಸಹಕರಿಸುವಂತೆ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಕ್ಟೋಬರ್ 16ರಂದು ಸಂಜೆ 4 ಗಂಟೆಗೆ ಸುಮಾರಿಗೆ ಹುಲಿಗಿ ಗ್ರಾಮದ ನಮ್ಮ ಮನೆಯಿಂದ ನನ್ನ ಮೊಮ್ಮಗನನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿದ್ದಾರೆ. ಕೂಡಲೇ ಪತ್ತೆ ಮಾಡುವಂತೆ ಬಾಲಕನ ಅಜ್ಜ ಭರಮಪ್ಪ ಇಟಗಿ ಅವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Koppala: a four year old boy kidnapped

ಮೇಲಿನ ಭಾವಚಿತ್ರದಲ್ಲಿರುವ ಬಾಲಕನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕರೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಸಂಖ್ಯೆಗೆ 08539230111 ಕರೆ ಮಾಡಿ ಮಾಹಿತಿ ತಿಳಿಸುವಂತೆ ಕೋರಲಾಗಿದೆ.

ಕೊಪ್ಪಳ ಡಿಎಸ್ ಪಿ 08539222433, ಕೊಪ್ಪಳ ಗ್ರಾಮೀಣ ಸಿಪಿಐ-08539221333. ಅಥವಾ ಮುನಿರಾಬಾದ್ ಸಬ್ ಇನ್ಸ್ ಪೆಕ್ಟರ್ 08539270333 ಸಂಖ್ಯೆಗೆ ಕರೆ ಮಾಡಿ, ಬಾಲಕನ ಪತ್ತೆಗೆ ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A four years old boy kidnapped from Koppala taluk Hitnal village on Oct 16. Koppala Munirabad Police Sub Inspector request's in public to support find the boy.
Please Wait while comments are loading...