ನೇಣು ಬಿಗಿದುಕೊಂಡು ಕೊಪ್ಪಳ ಪಿಎಸ್ ಐ ಆತ್ಮಹತ್ಯೆಗೆ ಶರಣು
ಕೊಪ್ಪಳ,ಮಾರ್ಚ್, 05 : ಕೊಪ್ಪಳ ಜಿಲ್ಲಾ ವೈರ್ ಲೆಸ್ ವಿಭಾಗದ ಪಿಎಸ್ ಐ ಟಿ.ಶಶಿಧರ್ (59) ಭಾನುವಾರ ಪೊಲೀಸ್ ಕ್ವಾಟರ್ಸ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. 2015ರಲ್ಲಿ ಶಶಿಧರ್ ಅವರ ಮಗ ಅಜಯ್ ಕುಮಾರ್ ಆತ್ಮಹತ್ಯೆ ಶರಣಾಗಿದ್ದರು. ಮಗನ ಸಾವಿನ ನಂತರ ಖಿನ್ನತೆಗೊಳ್ಳಗಾಗಿದ್ದರು.

ಹಾಗೂ ಶಶಿಧರ್ ಕಳೆದ ಕೆಲ ವರ್ಷದಿಂದ ಗಂಟಲು ಕ್ಯಾನ್ಸರ್ ನಿಂದಲೂ ಬಳಲುತ್ತಿದ್ದರು. ಇದರಿಂದ ಮನನೊಂದಿದ್ದ ಶಶಿಧರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications