Hampi Case: ಪ್ರಕರಣ ನಡೆದು ಒಂದು ವರ್ಷದೊಳಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತಿರ್ಪು ನೀಡಿದ ಗಂಗಾವತಿ ಕೋರ್ಟ್
ಕೊಪ್ಪಳ: ಜಿಲ್ಲೆ ವ್ಯಾಪ್ತಿಯ ಸಾಣಾಪುರದಲ್ಲಿ ವಿದೇಶಿ ಮಹಿಳಾ ಪ್ರವಾಸಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಹತ್ಯೆಗೈದ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಮೂವರು ಅಪರಾಧಿಗಳಿಗೆ ಗಂಗಾವತಿ ನ್ಯಾಯಾಲಯ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. ಒಂದು ವರ್ಷದೊಳಗೆ ಸದರಿ ಪ್ರಕರಣದಲ್ಲಿ ಅಪಾರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
ಸದರಿ ಪ್ರಕರಣದ ಅಪರಾಧಿಗಳಾದ ಹಂದಿ ಮಲ್ಲೇಶ್, ಶರಣಬಸವ, ಚೇತನ್ ಸಾಯಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು. 2025ರ ಮಾರ್ಚ್ 06ರಂದು ಇಡೀ ಕರ್ನಾಟಕ ಹಾಗೂ ಮನಕುಲವೇ ತಲೆ ತಗ್ಗಿಸುಂತಹ ಪ್ರಕರಣ ವಿಶ್ವ ಪಾರಂಪರಿಕ ಪ್ರವಾಸಿ ತಾಣದ ಪಟ್ಟಿಗೆ ಸೇರಿದ (ಯುನೆಸ್ಕೋ ಮಾನ್ಯತೆ) ಸ್ಥಳ ಹಂಪಿಯ ಸಮೀಪದಲ್ಲಿ ವಿದೇಶಿ ಮಹಿಳಾ ಪ್ರವಾಸಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಬಳಿಕ ಕೊಲೆ ಮಾಡಿ ಕಾಲುವೆಗೆ ಎಸೆಯಲಾಗಿತ್ತು.

ಈ ಪ್ರಕರಣ ನಡೆದು ಒಂದು ವರ್ಷದೊಳಗೆ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು ಪ್ರಕಟವಾಗಿದೆ.ಇಷ್ಟು ಕಡಿಮೆ ಅವಧಿಯಲ್ಲಿ ತಪ್ಪಿತಸ್ಥರ ವಿರುದ್ಧ ತೀರ್ಪು ಹೊರ ಬಿದ್ದಿದ್ದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ತ್ವರಿತ ತನಿಖೆ, ಸಾಕ್ಷ್ಯಾಧಾರಾಗಳನ್ನು ಪತ್ತೆ ಮಾಡಿ ಕೋರ್ಟ್‌ಗೆ ಸಲ್ಲಿಸಿದ ಪೊಲೀಸರ ಕಾರ್ಯಕ್ಷಮತೆಗೆ ಅಭಿನಂದನೆಗಳು ಹರಿದು ಬಂದಿವೆ. ವಿಚಾರಣೆ ನಡೆಸಿದ ಗಂಗಾಗತಿ ಹಿರಿಯ ಸಿವಿಲ್ ನ್ಯಾಯಾಲಯ ಇಂದು ಸೋಮವಾರ (ಫೆಬ್ರವರಿ 16) ಮೂವರನ್ನು ದೋಷಿ ಎಂದು ನಿರ್ಧರಿಸಿದೆ. ಅವರಿಗೆ ಮರಣ ದಂಡನೆ ನೀಡಿ ಮಹತ್ವದ ಆದೇಶ ಪ್ರಕಟಿಸಿದೆ. ಈ ಮೂಲಕ ಮೃತಳಿಗೆ ನ್ಯಾಯ ಕೊಡಿಸಲಾಗಿದೆ.
ಪ್ರವಾಸಿಗರ ಇಳಿಕೆಗೆ ಕಾರಣವಾಗಿದ್ದ ಪ್ರಕರಣ
ಇನ್ನು ಈ ಪ್ರಕರಣವು ಹಂಪಿ ಹಾಗೂ ಕೊಪ್ಪಳ ಸುತ್ತಮುತ್ತಲಿನ ಪ್ರವಾಸಿ ಸ್ಥಳಕ್ಕೆ ಆಗಮಿಸುತ್ತಿದ್ದ ಪ್ರವಾಸಿಗರ ಇಳಿಕೆಗೆ ಕಾರಣವಾಗಿತ್ತು. ಯುನೆಸ್ಕೋ ಮಾನ್ಯತೆ ಪಡೆದ ಹಂಪಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಭಾರೀ ಇಳಿಕೆ ಕಂಡಿತ್ತು. 2024-25ರಲ್ಲಿ 20,000 ಜನ ಪ್ರವಾಸಿಗರಿಂದ ಕೇವಲ 3,818ಕ್ಕೆ ಕುಸಿದಿತ್ತು. ಇದು ಶೇ. 80ರಷ್ಟು ಭಾರಿ ಇಳಿಕೆ ಆಗಿದೆ. ಸನಾಪುರ ಪ್ರದೇಶದಲ್ಲಿನ ಭದ್ರತಾ ವೈಫಲ್ಯ, ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಹಲವು ಕಾರಣಗಳಿಗೆ ಪ್ರವಾಸೋದ್ಯಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಂತಾಗಿದೆ.












Click it and Unblock the Notifications