ಎಂಎಂ ಹಿಲ್ಸ್ : ಕೋಟಿ ರು ದಾಟಿದ ಹುಂಡಿ ಹಣ

ಚಾಮರಾಜನಗರ, ಏ.24: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶ್ರೀಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 1 ಕೋಟಿ ರು.ಗೂ ಅಧಿಕ ನಗದು ಹಣ ಭಕ್ತಾದಿಗಳ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ದೇಗುಲದ ಸಿಇಒ ಎಚ್ ಎಸ್ ಸತೀಶ್ ಬಾಬು ಹೇಳಿದ್ದಾರೆ.

ದೇಗುಲದ ಹುಂಡಿಯಲ್ಲಿ 1,12,32,834 ಹಣದ ಜೊತೆಗೆ 40 ಗ್ರಾಂ ಚಿನ್ನ, 880 ಗ್ರಾಂ ಬೆಳ್ಳಿ ಆಭರಣಗಳು ಸಂಗ್ರಹಣೆಯಾಗಿದೆ ಎಂದು ಮಹದೇಶ್ವರ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಸತೀಶ್ ಬಾಬು ತಿಳಿಸಿದ್ದಾರೆ. ಮಲೆ ಮಹದೇಶ್ವರ ದೇಗುಲದಲ್ಲಿ ವಾರ್ಷಿಕವಾಗಿ ಮೂರು ಬಾರಿ ಭಾರಿ ಮಹಾರಥೋತ್ಸವ ನಡೆಯುತ್ತದೆ. ದೀಪಾವಳಿ(ಕಾತೀ೯ಕ ಮಾಸದ ಶುಕ್ಲಪಕ್ಷ ಪಾಡ್ಯಮಿ), ಮಹಾಶಿವರಾತ್ರಿ( ಫಾಲ್ಗುಣ ಮಾಸ ಶುಕ್ಲಪಕ್ಷ ಪಾಡ್ಯಮಿ) ಯುಗಾದಿ(ಚೈತ್ರಮಾಸ ಶುಕ್ಲಪಕ್ಷದ ಪಾಡ್ಯಮಿ)[ಇಂದಿನ ಪಂಚಾಂಗ ಓದಿ]

Male Mahadeshwara temple income report

ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಎಚ್.ಎಸ್. ಸತೀಶ್ ಬಾಬು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ, ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಚ್.ರಾಮಪ್ಪ, ಅಧೀಕ್ಷಕ ಎಂ.ಬಸವರಾಜು, ಲೆಕ್ಕ ಅಧೀಕ್ಷಕ ಬಿ.ಎಸ್. ಕಪ್ಪಣ್ಣ, ಕಚೇರಿ ಅಧೀಕ್ಷಕ ಎಂ.ಸದಾಶಿವ, ದೇವಸ್ಥಾನದ ಎಲ್ಲಾ ನೌಕರರುಗಳು, ಮಹದೇಶ್ವರಬೆಟ್ಟದಲ್ಲಿರುವ ಎಸ್ ‌ಬಿಎಂನ ವ್ಯವಸ್ಥಾಪಕ ಹಾಗೂ ಬ್ಯಾಂಕ್ ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಜರಗಿತು.

ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ಪಡೆದಿದ್ದ ಈ ಪ್ರಸಿದ್ಧ ದೇಗುಲ ಅತಿ ಹೆಚ್ಚು ಆದಾಯ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 34 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದೆ. ಆದಾಯ ಗಳಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಸರಾಸರಿ ಆದಾಯ 50 ಕೋಟಿ ರು. ವಾರ್ಷಿಕ ಆದಾಯವಿದ್ದರೆ, ಕೊಳ್ಳೆಗಾಲದ ಮಲೆ ಮಹದೇಶ್ವರ ಸರಾಸರಿ 30 ಕೋಟಿ ರು. ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಧಾರ್ಮಿಕವಾಗಿ ಅತಿಹೆಚ್ಚು ಆದಾಯ ಬರುವ ದೇವಸ್ಥಾನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವುದು ವಿಶೇಷ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕೊಳ್ಳೆಗಾಲದ ಮಲೆ ಮಹದೇಶ್ವರ,ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇಗುಲಗಳನ್ನು ಹೊರತುಪಡಿಸಿದರೆ ಉಳಿದವು ಅಮ್ಮನವರ ದೇಗುಲಗಳಾಗಿದೆ. ಶ್ರೀ ಕೊಲ್ಲೂರು ಮೂಕಾಂಬಿಕೆ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಮೈಸೂರು ಶ್ರೀ ಚಾಮುಂಡೇಶ್ವರಿ, ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ, ಮಂದರ್ತಿ ಶ್ರೀ ದುರ್ಗಾ ಪರಮೇಶ್ವರಿ, ಬೆಂಗಳೂರಿನ ಶ್ರೀ ಬನಶಂಕರಿ, ಶ್ರೀ ಹುಲಿಗಮ್ಮ ಅತ್ಯಂತ ಶ್ರೀಮಂತ ದೇಗುಲಗಳಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+