ಮುಳಬಾಗಿಲು: ಕುರಾನ್ ಹರಿದ ಯುವಕನ ಹೊಡೆದು ಹತ್ಯೆ

ಕುಡಿದ ಅಮಲಿನಲ್ಲಿ ಇಮ್ರಾನ್ ಕುಕೃತ್ಯ:
ಸ್ಥಳೀಯ ನಿವಾಸಿ ಇಮ್ರಾನ್ ಎಂಬ 25 ವರ್ಷದ ಯುವಕ ಮಸೀದಿಯೊಳಕ್ಕೆ ನುಗ್ಗಿ ಕುರಾನ್ ಗ್ರಂಥವನ್ನು ಮಸೀದಿಯಿಂದ ಹೊರಗೆ ತಂದು ಅದನ್ನು ಹರಿದು ಬೆಂಕಿಯಿಂದ ಸುಡಲು ಯತ್ನಿಸಿದಾಗ ಈ ಘಟನೆ ನಡೆದಿದೆ. ಇಷ್ಟಕ್ಕೂ ಇಮ್ರಾನ್ ಕುಡಿದ ಅಮಲಿನಲ್ಲಿ ಈ ಕುಕೃತ್ಯವೆಸಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
(ಕುರಾನ್ ಪಠಿಸದ ಪುತ್ರನ ಕೊಂದುಸುಟ್ಟ ಮಹಾತಾಯಿ)
ಇಮ್ರಾನ್ ಕುಡಿದ ಅಮಲಿನಲ್ಲಿ ಭಾನುವಾರ ಸಂಜೆ ಪಟ್ಟಣದ ನೂಗಲಬಂಡೆಯಲ್ಲಿರುವ ಮಸೀದಿಗೆ ನುಗ್ಗಿದ್ದಾನೆ. ಅಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಹೊರಗಡೆ ತಂದು ಹರಿದು ಹಾಕಿದ್ದಾನೆ. ಬಳಿಕ ಬೆಂಕಿಯಿಂದ ಸುಡಲು ಪ್ರಯತ್ನಿದ್ದಾನೆ. ಇದನ್ನು ಸ್ಥಳದಲ್ಲಿದ್ದವರು ರೊಚ್ಚಿಗೆದ್ದು ಯುವಕನನ್ನು ಮನ ಬಂದಂತೆ ಥಳಿಸಿದ್ದಾರೆ. ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ. ಮುಳಬಾಗಿಲು ಪಿಎಸ್ಸೈ ಶಂಕರಪ್ಪ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಜಮೀಲ್ ಊರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications