Kodi Shree Prediction: ಊಹಿಸಲಾರದ ದುಃಖ, ದೊಡ್ಡ ಗಂಡಾಂತರ: ಕೋಡಿಶ್ರೀ ನುಡಿದ ಸ್ಫೋಟಕ ಭವಿಷ್ಯವೇನು?
ರಾಜಕೀಯ, ನೈಸರ್ಗಿಕ ವಿಕೋಪಗಳು ಸೇರಿದಂತೆ ಭಯಾನಕ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ (ಕೋಡಿಶ್ರೀ) ಈಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಎಚ್ಚರಿಸಿರುವ ಅವರು ಯಾರೂ ಊಹೆ ಮಾಡದ ದುಃಖವೊಂದು ಎದುರಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ರಾಜಕೀಯ ಸೇರಿದಂತೆ ಹಲವು ವಿಚಾರಗಳ ಕುರಿತು ಕೋಡಿಶ್ರೀಗಳು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಮಾತನಾಡಿರುವ ಅವರು ಕರ್ನಾಟಕ, ಭಾರತಕ್ಕೆ ಮುಂದಿನ ಜನವರಿಯೊಳಗೆ ಭಾರಿ ದೊಡ್ಡ ಗಂಡಾಂತರವಿದೆ. ಯಾರೂ ಊಹಿಸಿರದ ದುಃಖ ಬರುತ್ತೆ, ನಾನು ಈ ಹಿಂದೆ ಮೇಘಸ್ಫೋಟ, ಜಲಪ್ರಳಯ ಸೇರಿದಂತೆ ವಾಯುವಿನಿಂದ ಆಪತ್ತು ಇದೆ ಎಂದು ಹೇಳಿದ್ದೆ. ಇತ್ತೀಚೆಗೆ ವಿಮಾನ ಅಪಘಾತ ದುರಂತ ಸೇರಿ ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟವಾಗಲಿದೆ. ಜೊತೆಗೆ ನಿರೀಕ್ಷೆಗೂ ಮೀರಿದ ದುಃಖವೊಂದರ ಮುನ್ಸೂಚನೆಯೂ ಇದೆ ಎಂದಿದ್ದಾರೆ.

ಮನುಷ್ಯ ಓಡಾಡುತ್ತಲೇ ಸಾವನ್ನಪ್ಪುತ್ತಾನೆ. ಈ ಹಿಂದೆ ಜನಜೀವನ ಅಸ್ಥಿರಗೊಳ್ಳಲಿದೆ ಎಂದು ಹೇಳಿದ್ದೆ. ಹೃದಯಾಘಾತಗಳು ಹೆಚ್ಚಾಗುತ್ತಿದೆ. ಇದು ಮತ್ತಷ್ಟು ಹೆಚ್ಚಾಗಲಿದೆ. ದೇಶಕ್ಕೆ ರಾಜ್ಯಕ್ಕೆ ಕಂಟಕವಿದೆ. ದ್ವೇಷ ಅಸೂಯೆಯಿಂದ ಒಂದಿಬ್ಬರು ಬ*ಲಿಯಾಗುತ್ತಾರೆ. ಅಕಾಲದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಸಕಾಲದಲ್ಲಿ ಮಳೆಯ ಕೊರತೆ ಎದುರಿಸಬೇಕು. ಈಗ ನಡೆಯುತ್ತಿರುವ ಯುದ್ಧ ನಿಲ್ಲುವುದು ಸದ್ಯಕ್ಕೆ ಕಷ್ಟ ಎಂದು ಪರೋಕ್ಷವಾಗಿ ಜಾಗತಿಕವಾಗಿ ಗಮನ ಸೆಳೆದಿರುವ ಇರಾನ್-ಇಸ್ರೇಲ್ ಯುದ್ಧವನ್ನು ಉಲ್ಲೇಖಿಸಿದ್ದಾರೆ.
ಅರಸನಾಲಯಕ್ಕೆ ಕಾರ್ಮೋಡ ಕವಿದಿತ್ತು. ಇದು ಕೇಂದ್ರಕ್ಕೆ ಹಾಗೂ ರಾಜ್ಯಕ್ಕೆ ಎರಡೂ ಅನ್ವಯವಾಗುತ್ತೆ. ಈ ಹಿಂದೆ ಮೂರು ಜನ ಪ್ರಧಾನಮಂತ್ರಿಗಳು ಕೊಲೆ ಆಗುತ್ತಾರೆ ಎಂದಿದ್ದೆ, ಅದು ನಡೆಯುತ್ತೆ. ನಮ್ಮ ದೇಶಕ್ಕೆ ಊಹಿಸಲೂ ಅಸಾಧ್ಯವಾದ ದುಃಖ ಎದುರಾಗುತ್ತದೆ. ಜನ ಯಾವಾಗ ಮನೆಗೆ ಬರುತ್ತಾರೆ, ಹೋಗ್ತಾರೆ ಅನ್ನೋದು ಗೊತ್ತಾಗಲ್ಲ ಎಂದು ಹೇಳಿದ್ದಾರೆ.
ಸೂ*ಳೆಯ ಮಗ ಆಳುತ್ತಾನೆ
ಇದೇ ವೇಳೆ ಮುಂದಿನ ಭವಿಷ್ಯವಾಣಿಯೊಂದನ್ನು ಮಾರ್ಮಿಕವಾಗಿ ನುಡಿದಿರುವ ಅವರು, ಸೂ*ಳೆಯಾ ಮಗನುಟ್ಟಿ, ಆಳುವನು ಮುನಿಪುರವ. ಯುದ್ಧವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಹೇಳಿದ್ದಾರೆ. ಇದರ ಅರ್ಥ ಏನು ಎಂಬುದನ್ನು ನಾನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇದನ್ನ ಬರೆದಿಟ್ಟುಕೊಳ್ಳಿ, ಇದಕ್ಕೆ ಪರಿಹಾರ ಆ ಮೇಲೆ ಸೂಚಿಸುತ್ತೇನೆ ಎಂದೂ ಸುಳಿವು ನೀಡಿದ್ದಾರೆ. ಕೊರೊನಾ ಮತ್ತೊಂದು ರೂಪ ತಾಳಲಿದೆ. ಹಲವು ದೇಶಗಳು ಮುಳುಗಡೆಯಾಗಲಿವೆ, ಕೆಲವು ದೇಶಗಳು ಏಳುತ್ತವೆ. ವಾಯು ಪ್ರಳಯ, ಭೂ ಪ್ರಳಯ, ಭೂಪ್ರಳಯ, ಮೇಘಸ್ಫೋಟವಾಗುತ್ತದೆ. ಮುಂದಿನ ಜನವರಿಯೊಳಗೆ ದೊಡ್ಡ ಗಂಡಾಂತರ ಕಾದಿದ್ದು, ಹೆಚ್ಚು ದುಃಖ ಹೊತ್ತುತರಲಿದೆ ಎಂದು ಕೋಡಿಶ್ರೀ ಎಚ್ಚರಿಸಿದ್ದಾರೆ.
ಈ ಹಿಂದೆಯೂ ಕೋಡಿಶ್ರೀ ಅವರು ನುಡಿದಿರುವ ಹಲವು ಭವಿಷ್ಯವಾಣಿಗಳು ನಿಜವಾಗಿದೆ ಎನ್ನುವ ಮಾತಿದೆ. ರಾಜಕೀಯದ ಬಗ್ಗೆ, ಸರ್ಕಾರ ಉರುಳುವ, ಗಣ್ಯರ ನಿಧನ ಸೇರಿದಂತೆ ಮುಂದಾಗುವ ಅಪಾಯಗಳ ಬಗ್ಗೆ ತಮ್ಮ ಭವಿಷ್ಯವಾಣಿ ಮೂಲಕ ಮುನ್ಸೂಚನೆ ನೀಡುವ ಅವರು ಇದೀಗ ದೊಡ್ಡ ಗಂಡಾಂತರ ಎಂದು ಎಚ್ಚರಿಸಿದ್ದಾರೆ. ಮುಂದಿನ ಸಂಕ್ರಾಂತಿಯೊಳಗೆ ಎದುರಾಗಲಿರುವ ಅಪಾಯಗಳೇನು? ಎಂದು ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.












Click it and Unblock the Notifications