ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶಕ್ಕೆ ನಾಲ್ಕು ಆನೆ ಕಳುಹಿಸಿದ ಕರ್ನಾಟಕ, ಕಾರಣವೇನು?

|
Google Oneindia Kannada News

ಬೆಂಗಳೂರು, ನವೆಂಬರ್‌ 10: ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ನಾಲ್ಕು ಆನೆಗಳು ಸೇರ್ಪಡೆಗೊಂಡಿವೆ. ಕರ್ನಾಟಕದ ಅರಣ್ಯ ಇಲಾಖೆಯಿಂದ ಈ ಆನೆಗಳನ್ನು ಕಳುಹಿಸಿಕೊಡಲಾಗಿದೆ.

ಉತ್ತರಪ್ರದೇಶದಲ್ಲಿ ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಕಾಡಿನೊಳಗೆ ಮರಳಿಸಲು ಈ ಆನೆಗಳು ನೆರವಾಗಲಿವೆ. ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರಿಶೀಲಿಸಲು ಆನೆಗಳನ್ನು ಕರೆತರಲಾಗಿದ್ದು, ಗಸ್ತು ಮೂಲಕ ನಿಗಾ ವಹಿಸಲಾಗುವುದು ಎಂದು ಪಿಟಿಆರ್ ಉಪ ನಿರ್ದೇಶಕ ನವೀನ್ ಖಂಡೇಲ್ವಾಲ್ ಹೇಳಿದ್ದಾರೆ.

ಆಪರೇಷನ್ ಭೈರ ವಿಫಲ: ದಸರಾ ಆನೆಗಳು ವಾಪಸ್‌, ಸ್ಥಳೀಯರ ಆಕ್ರೋಶಆಪರೇಷನ್ ಭೈರ ವಿಫಲ: ದಸರಾ ಆನೆಗಳು ವಾಪಸ್‌, ಸ್ಥಳೀಯರ ಆಕ್ರೋಶ

ಈ ಆನೆಗಳ ಆರೈಕೆ, ಆಹಾರ, ನೀರು ಮತ್ತು ನಿರ್ವಹಣೆಯಂಥ ಇತರ ಅವಶ್ಯಕತೆಗಳನ್ನು ಒಳಗೊಂಡಂತೆ ಎಂಟು ಮಾವುತರನ್ನು ಸಹ ಈ ಆನೆಗಳನ್ನು ನೋಡಿಕೊಳ್ಳಲು ಕರೆತರಲಾಗಿದೆ. ಕಳುಹಿಸಿಕೊಟ್ಟಿರುವ ಆನೆಗಳೆಂದರೆ 12 ವರ್ಷದ ನಿಸರ್ಗ, 8 ವರ್ಷದ ಮಣಿಕಂಠ ಮತ್ತು 7 ಮತ್ತು 14 ವರ್ಷ ವಯಸ್ಸಿನ ಇತರ ಎರಡು ಆನೆಗಳಾಗಿವೆ. ಅರಣ್ಯ ಸಚಿವ ಅರುಣ್ ಸಕ್ಸೇನಾ ಅವರು ಮಾಲಾ ಶ್ರೇಣಿಯಲ್ಲಿ ಆನೆಗಳನ್ನು ಸ್ವಾಗತಿಸಿ ಅವರಿಗೆ ಪೂಜೆ ಸಲ್ಲಿಸಿದರು.

Know Why Karnataka sent four elephants to Uttar Pradesh

ಬಳಿಕ ಮಾತನಾಡಿ, ''ಆನೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿವೆ. ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಆನೆಗಳು ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತಾರೆ'' ಎಂದು ಹೇಳಿದರು.

ಆನೆ ದಾಳಿಗೆ ಯುವಕ ಬಲಿ: ಪ್ರತಿಭಟನಾ ಸ್ಥಳಕ್ಕೆ ಸಚಿವರ ದೌಡುಆನೆ ದಾಳಿಗೆ ಯುವಕ ಬಲಿ: ಪ್ರತಿಭಟನಾ ಸ್ಥಳಕ್ಕೆ ಸಚಿವರ ದೌಡು

ಮೇ ತಿಂಗಳಲ್ಲೂ ಕೂಡ ಕರ್ನಾಟಕದಿಂದ 4 ಆನೆಗಳನ್ನು ಇದೇ ಪಿಲಿಭತ್‌ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾರ್ಯಚರಣೆಗೆ ಕಳುಹಿಸಿಕೊಡಲಾಗಿತ್ತು. ಆಗ ಪಿಲಿಭಿತ್ ಟೈಗರ್ ರಿಸರ್ವ್ ಅಧಿಕಾರಿಗಳು 2018 ರಲ್ಲಿ ಪ್ರಾಜೆಕ್ಟ್ ಟೈಗರ್ ಭಾಗವಾಗಿ 10 ಆನೆಗಳನ್ನು ಹುಡುಕಿದ್ದರು. ಇದನ್ನು ಡಿಸೆಂಬರ್ 2021 ರಲ್ಲಿ ಕರ್ನಾಟಕದ ಅಧಿಕಾರಿಗಳು ಆರಕ್ಕೆ ಇಳಿಸಿದ್ದರು.

ಅಕ್ಟೋಬರ್‌ ತಿಂಗಳಲ್ಲಿ ಕೂಡ ಕರ್ನಾಟಕದಿಂದ ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಪಿಟಿಆರ್) ನಾಲ್ಕು ಆನೆಗಳ ಪ್ರಯಾಣ ಪ್ರಾರಂಭವಾಗುತ್ತಿದ್ದಂತೆ ಸ್ಥಳಾಂತರ ಪ್ರಕ್ರಿಯೆಯು ತೊಂದರೆಯಿಲ್ಲದೆ ಉಳಿಯಲು ಅರಣ್ಯ ಅಧಿಕಾರಿಗಳು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆನೆಗಳ ಪ್ರಯಾಣವು ಕರ್ನಾಟಕದಿಂದ ಆರಂಭಗೊಂಡು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂಲಕ ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಲುಪಿವೆ.

English summary
Four elephants were sent from Karnataka to the Pilibhit Tiger Reserve in Uttar Pradesh on Wednesday by the Forest Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X