ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗ ಶಂಕರದ ಹೆಜ್ಜೆ ಗುರುತುಗಳು, ಕನಸುಗಳು ಇಲ್ಲಿವೆ

By Mahesh
|
Google Oneindia Kannada News

ಶಂಕರ್ ನಾಗ್ ಕನಸು ಕಂಡಿದ್ದು ನಮಗಾಗಿ, ನಮ್ಮ ಉದ್ಧಾರಕ್ಕಾಗಿ. ವ್ಯಕ್ತಿಯಾಗಿ ಮಾತ್ರ ಬೆಳೆಯದೇ ಸಮಷ್ಟಿಯ ಸುಖದ ಕನಸು ಹೊತ್ತ ಶಂಕರ್ ನಿಜಕ್ಕೂ ಗ್ರೇಟ್. ನಟ, ರಂಗಕರ್ಮಿ ಶಂಕರ್‌ನಾಗ್ ಅವರ ಕನಸು ಕೊನೆಗೂ ನನಸು ಮಾಡಲು ರಂಗಶಂಕರ ತಂಡ ಮುಂದಾಗಿದೆ.

ಹತ್ತು ವರ್ಷಗಳ ಬಳಿಕ 'ರಂಗ ಶಂಕರ' ಕರ್ನಾಟಕದ ಬೇರೆ ಊರುಗಳಿಗೆ ಸಂಚರಿಸಲು ಆರಂಭಿಸಿದೆ. ಇದರ ಜೊತೆಗೆ ಶಂಕರ್ ನಾಗ್ ರಂಗಭೂಮಿಗಾಗಿ ಕಂಡ ಕನಸನ್ನು ರಾಜ್ಯದೆಲ್ಲೆಡೆ ಹಂಚಲು ರಂಗ ಕರ್ಮಿಗಳು ಸಿದ್ಧರಾಗಿದ್ದಾರೆ. ತುಮಕೂರು, ಚಿತ್ರದುರ್ಗ, ಹಾವೇರಿ ಹಾಗೂ ದಾವಣಗೆರೆಯಲ್ಲಿ ಪ್ರದರ್ಶನ ನೀಡಿದ ನಂತರ ಮೈಸೂರು, ಮಂಡ್ಯ, ಕೆ.ಆರ್ ಪೇಟೆಗಳಲ್ಲಿ ಲೋಕ ಸಂಚಾರ ಮುಂದುವರೆಯಲಿದೆ. [ಶಂಕರ್ ನಾಗ್ ಕನಸು ಈಗ ನನಸಾಗುತ್ತಿದೆ: ಅರುಂಧತಿ]

ಹುಟ್ಟಿದ್ದು ಅಕ್ಟೋಬರ್ 28, 2004

700000 ಪ್ರೇಕ್ಷಕರು
4000 ಪ್ರದರ್ಶನಗಳು
24 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಯ ನಾಟಕಗಳು
12 ರಾಷ್ಟ್ರೀಯ ನಾಟಕೋತ್ಸವಗಳು.
10 ಸಮ್ಮರ್ ಎಕ್ಸ್‍ಪ್ರೆಸ್ - ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು.
10 ರಂಗ ಶಂಕರ ಪ್ರಸ್ತುತಿಗಳು
7 ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವಗಳು
4 ಅಂತರ ರಾಷ್ಟ್ರೀಯ ಸಹಭಾಗತ್ವದ ಯೋಜನೆಗಳು

Know about dreams and History of Ranga Shankara

ರಾಷ್ಟ್ರ ಮಟ್ಟದಲ್ಲಿ ಸಶಕ್ತ ಮತ್ತು ಸಂಪೂರ್ಣ ಮಕ್ಕಳ ನಾಟಕ ಚಟುವಟಿಕೆಗಳಿಗೆ ವೇದಿಕೆಯ ನಿರ್ಮಾಣ.

ಸಂಪೂರ್ಣ ರಂಗ ತಿಳುವಳಿಕೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು. ಮುಂದಿನ ಪೀಳಿಗೆಯನ್ನು ಹೊಸ ರಂಗ ಸಾಧ್ಯತೆಗಳಿಗೆ ಪರಿಚಯಿಸುವುದು.

ಭಾರತೀಯ ಶಾಸ್ತ್ರೀಯ, ಪಾರಂಪಾರಿಕ, ಜಾನಪದ ರಂಗಪ್ರಕಾರಗಳು ಮತ್ತು ಆಧುನಿಕ ರಂಗಭೂಮಿಯ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸುವುದು. ಈ ಉದ್ದೇಶಕ್ಕಾಗಿ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸುವುದು.

ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಹಭಾಗತ್ವದ ಯೋಜನೆಗಳಿಂದ ರಂಗಭೂಮಿಯ ಹೊಸ ಸಾಧ್ಯತೆಗಳನ್ನು, ಹೊಸ ಆಯಾಮಗಳನ್ನು ಗುರುತಿಸಿಕೊಳ್ಳುವುದು.

ನಾಟಕ ರಚನೆ ಮತ್ತು ನಾಟಕ ಪ್ರಯೋಗಗಳ ಒಟ್ಟು ಗುಣಮಟ್ಟವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಪ್ರಯತ್ನದಲ್ಲಿ ಹೊಸ ಹೊಸ ರಂಗ ಪ್ರಯೋಗಗಳನ್ನು ನಿರ್ಮಿಸುವುದು.

ರಂಗ ಶಿಬಿರಗಳ ವಿವರಗಳು

ಶಾಲಾ ಉಪಾಧ್ಯರುಗಳಿಗಾಗಿ ರಂಗ ಸಂವೇದನೆ ತರಬೇತಿ ಶಿಬಿರ

ಸಂಪನ್ಮೂಲ ಗಣ್ಯರು: ಸುಖೇಶ್ ಅರೋರಾ, ದೆಹಲಿ
ಶ್ರೀಮತಿ ಕೀರ್ತನ ಕುಮಾರ್, ಬೆಂಗಳೂರು

ಜನವರಿ 21ರಿಂದ 24, ಬೆಳಿಗ್ಗೆ 9 ರಿಂದ ಸಂಜೆ 5ವರೆಗೆ.

ರಂಗಭೂಮಿ, ನಾಟಕಗಳು ಇಂದು ಜಗತ್ತಿನಾದ್ಯಂತ ವಿವಿಧ ರೂಪ ತಾಳಿವೆ. ವಿವಿಧ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿವೆ. ಪ್ರತಿಭಟನೆಯಿಂದ ಮೊದಲ್ಗೊಂಡು, ಬೀದಿ ನಾಟಕಗಳು, ಜನಪರ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರ ಮೂಡಿಸುವವರೆಗಿನ ಪ್ರಯತ್ನಗಳಾಗುತ್ತಿವೆ.

ಸುಮಾರು ದಶಕಗಳಿಂದೀಚೆಗೆ ರಂಗ ಭೂಮಿಯನ್ನು 8 ತಿಂಗಳ ಮಗುವಿಗೂ ಪ್ರಪಂಚದ ಬಣ್ಣಗಳನ್ನು, ಸದ್ದುಗಳನ್ನು ಅರಿವುಗೊಳಿಸುವ ಪ್ರಯತ್ನಗಳೂ ಆಗುತ್ತಿವೆ. ರಂಗಭೂಮಿಯನ್ನು ಶಾಲೆಗಳಲ್ಲಿ ಪಠ್ಯೇತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತಿದೆ.

ಸಾಂಪ್ರದಾಯಿಕ ಪಾಠ-ಪ್ರವಚನಗಳನ್ನು ಮಾಡದೇ, ರಂಗಭೂಮಿಯ ಮೂಲಕ ಮಕ್ಕಳಿಗೆ ಪಾಠ ಹೇಳುವ ಹೊಸ ಪ್ರಯತ್ನಗಳು ಜಗತ್ತಿನಾದ್ಯಂತ ಯಶಸ್ವಿವಾಗುತ್ತಿವೆ. ಶಾಲಾ ಆವರಣ ಮಕ್ಕಳಿಗೆ ಈ ಮೂಲಕ ಪ್ರಿಯವಾಗುತ್ತಿದೆ.

ಈ ವಿಷಯದಲ್ಲಿ ವಿಶೇಷವಾಗಿ ಅಭ್ಯಾಸ ಮಾಡಿರುವ ಅನೇಕಾನೇಕ ಗಣ್ಯರು ಭಾರತದಲ್ಲಿ ಇಂದು ಇದ್ದಾರೆ. ಉಪಾಧ್ಯಾಯರುಗಳ ಜೊತೆ ಸಂವಹನ ನಡೆಸುತ್ತಾ, ರಂಗಭೂಮಿಯ ಹೊಸ ವಿಸ್ತಾರಗಳನ್ನು ಪರಿಚಯ ಮಾಡಿಕೊಡುವುದೇ ಈ ಶಿಬಿರದ ಉದ್ದೇಶ.

ರಂಗ ಕರ್ಮಿಗಳಿಗಾಗಿ ರಂಗ ತರಬೇತಿ ಶಿಬಿರ

ಸಂಪನ್ಮೂಲ ಗಣ್ಯರು: ಮೋಹಿತ್ ಟಾಕಲ್ಕರ್, ಪುಣೆ
ಸುರೇಂದ್ರನಾಥ್, ರಂಗ ಶಂಕರ

ಜನವರಿ 21ರಿಂದ 24, ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ
ಗುರುಭವನ, ದಾವಣಗೆರೆ.
(ಒನ್ ಇಂಡಿಯಾ ಸುದ್ದಿ)

English summary
Know about dreams and History of Ranga Shankara which conducting Loka Sanchara campaign. Ranga Shankara Born from a dream envisioned by actor – director Shankar Nag the theatre is a celebration of artistic excellence Ranga Shankara is a commitment to the art of theatre, to the cultural fabric of our country and its people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X