• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್‌.ಡಿ.ರೇವಣ್ಣಗೆ ಶಾಕ್

|
   ಎಚ್ ಡಿ ರೇವಣ್ಣಗೆ ದೊಡ್ಡ ಆಘಾತ | Oneindia Kannada

   ಬೆಂಗಳೂರು, ಜುಲೈ 29: ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎಚ್‌.ಡಿ.ರೇವಣ್ಣ ಅವರಿಗೆ ಸರ್ಕಾರವು ಶಾಕ್ ನೀಡಿದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನ ಚುನಾವಣೆಯನ್ನು ಮುಂದೂಡಿ ಸರ್ಕಾರವು ಆದೇಶ ಹೊರಡಿಸಿದೆ.

   ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು, ಎಚ್‌.ಡಿ.ರೇವಣ್ಣ ಅವರು ಅಧ್ಯಕ್ಷರಾಗಲು ಬಹು ಪ್ರಯಾಸ ಪಟ್ಟಿದ್ದರು, ಹಲವು ತಂತ್ರಗಳನ್ನು ಸಹ ಹೂಡಿದ್ದರು, ಆದರೆ ಹಠಾತ್ತನೆ ಚುನಾವಣೆಯನ್ನು ಮುಂದೂಡಲಾಗಿದೆ.

   ಕೆಎಂಎಫ್ ಅಧ್ಯಕ್ಷ ಹುದ್ದೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಪಾಲು!ಕೆಎಂಎಫ್ ಅಧ್ಯಕ್ಷ ಹುದ್ದೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಪಾಲು!

   ಕೆಎಂಎಫ್‌ನ ಹಾಲಿ ಅಧ್ಯಕ್ಷ ನಾಗರಾಜ್ ಅವರು ಸಿಎಂ ಯಡಿಯೂರಪ್ಪ ಅವರ ಬಳಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಚುನಾವಣೆಯನ್ನು ಮುಂದೂಡಿದ್ದಾರೆ.

   ಎಚ್‌.ಡಿ.ರೇವಣ್ಣ ಅವರು ಕೆಎಂಎಫ್‌ನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಕಾಂಗ್ರೆಸ್‌ನ ನಾಲ್ವರು ನಿರ್ದೇಶಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಎಚ್‌.ಡಿ.ರೇವಣ್ಣ ಮತ್ತು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್‌ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಪೈಪೋಟಿ ನಡೆಯುತ್ತಿದೆ.

   ಸರ್ಕಾರದ ಬಿಕ್ಕಟ್ಟಿನ ನಡುವೆಯೇ ರಹಸ್ಯವಾಗಿ 1,500 ಕೋಟಿ ರೂ. ಬಿಲ್ ಚುಕ್ತಾ ಮಾಡಿದ ರೇವಣ್ಣಸರ್ಕಾರದ ಬಿಕ್ಕಟ್ಟಿನ ನಡುವೆಯೇ ರಹಸ್ಯವಾಗಿ 1,500 ಕೋಟಿ ರೂ. ಬಿಲ್ ಚುಕ್ತಾ ಮಾಡಿದ ರೇವಣ್ಣ

   ಕಾಂಗ್ರೆಸ್‌ನ ನಿರ್ದೇಶಕರು ಹೆಚ್ಚಿದ್ದರೂ ಸಹ ಭೀಮಾನಾಯ್ಕ್‌ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪುವ ಸಾಧ್ಯತೆ ಇದೆ. ರೇವಣ್ಣ ಅವರು ಕೆಲವು ಕಾಂಗ್ರೆಸ್‌ನ ನಿರ್ದೇಶಕರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಚುನಾವಣೆ ಇಂದು ನಡೆದಿದ್ದರೆ ರೇವಣ್ಣ ಅವರು ಅಧ್ಯಕ್ಷರಾಗುವ ಸಾಧ್ಯತೆ ಇತ್ತು.

   English summary
   KMF president election is postponed by government. HD Revanna is in race of KMF president election.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X