• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nandini Ghee Price Hike : ನಂದಿನಿ ತುಪ್ಪದ ಬೆಲೆ 2 ತಿಂಗಳಲ್ಲಿ 180 ರೂ. ಹೆಚ್ಚಳ

|
Google Oneindia Kannada News

ಬೆಂಗಳೂರು, ನವೆಂಬರ್‌ 7: ಕಳೆದ ಕೆಲವು ತಿಂಗಳುಗಳಲ್ಲಿ ಹಾಲಿನ ದರವನ್ನು ಹೆಚ್ಚಿಸಲು ಸರ್ಕಾರದ ಅನುಮೋದನೆ ಪಡೆಯಲು ಸಾಧ್ಯವಾಗದೆ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ತುಪ್ಪದ ಬೆಲೆಯನ್ನು ಹೆಚ್ಚಿಸುತ್ತಿದ್ದು, ಇದು ಎರಡೂವರೆ ತಿಂಗಳಲ್ಲಿ ಲೀಟರ್‌ಗೆ 180 ರೂಪಾಯಿ ಬೆಲೆ ಹೆಚ್ಚಳ ಮಾಡಿದೆ.

ಆಗಸ್ಟ್ 22 ರಂದು 450 ರೂಪಾಯಿಗೆ ಮಾರಾಟವಾಗಿದ್ದ ಒಂದು ಲೀಟರ್ ನಂದಿನಿ ತುಪ್ಪ ಈಗ ಲೀಟರ್‌ಗೆ 630 ರೂ. ಆಗಿದೆ. ಜಿಎಸ್‌ಟಿ ದರಗಳ ಪರಿಷ್ಕರಣೆಯು ಕೆಎಂಎಫ್‌ಗೆ ಮೊಸರು ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದ್ದರೂ, ತುಪ್ಪ ಮತ್ತು ಹಾಲಿನ ಬೆಲೆಯನ್ನು ತುಲನಾತ್ಮಕವಾಗಿ ಮುಟ್ಟಲಿಲ್ಲ. ಆದರೆ ಹಾಲಿನ ಮಾರಾಟದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಕೆಎಂಎಫ್ ಈಗ ನಿರಂತರವಾಗಿ ತುಪ್ಪದ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿದೆ.

ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಕೆಎಂಎಫ್ ರೀಟೆಲ್ ವ್ಯಾಪಾರಿಯೊಬ್ಬರ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ನಂದಿನಿ ತುಪ್ಪದ ಬೆಲೆ ಏರಿಕೆಯಾಗುತ್ತಿದೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ ಆಗಸ್ಟ್ 22 ರಂದು ಒಂದು ಲೀಟರ್ ತುಪ್ಪವನ್ನು 450 ರೂ.ಗೆ ಮಾರಾಟ ಮಾಡಲಾಗಿತ್ತು. ಹಬ್ಬದ ಸೀಸನ್ ಪ್ರಾರಂಭವಾದಾಗ, ಕೆಎಂಎಫ್ ನಿಯಮಿತವಾಗಿ ತುಪ್ಪದ ಬೆಲೆ ಏರಿಕೆಯನ್ನು ಪ್ರಾರಂಭಿಸಿತು. ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ಅದು 470 ರೂ.ಗೆ ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಒಂದು ಲೀಟರ್ ತುಪ್ಪವನ್ನು 518 ರೂ.ಗೆ ಮಾರಾಟ ಮಾಡಲಾಗಿತ್ತು. ಈಗ ಕಳೆದ ಒಂದು ವಾರದಿಂದ 620 ರೂ.ನಿಂದ 630 ರೂ.ಗೆ ಮಾರಾಟವಾಗುತ್ತಿದೆ.

ಕಳೆದ ಒಂದು ತಿಂಗಳ ಮಾರಾಟದ ಬೆಲೆಗಳ ವಿಶ್ಲೇಷಣೆಯು 200 ಎಂಎಲ್ ಸ್ಯಾಚೆ, ಬಾಟಲ್‌ನಲ್ಲಿ ಒಂದು ಲೀಟರ್ ಪ್ರಮಾಣಕ್ಕೆ ನೀಡುವ ದರವು 12 ರಿಂದ 54 ರೂ.ಗೆ ಏರಿದೆ ಎಂದು ಬಹಿರಂಗಪಡಿಸಿದೆ. ಒಂದು ತಿಂಗಳ ಹಿಂದೆ 113 ರೂ.ಗೆ ಮಾರಾಟವಾದ 200 ಎಂಎಲ್ ತುಪ್ಪದ ಸ್ಯಾಚೆ ಈಗ 135 ರೂ. ಬೆಲೆಯಿದೆ. ಪೆಟ್ ಬಾಟಲ್ ಬೆಲೆಯೂ 122 ರೂ.ನಿಂದ 145 ರೂ.ಗೆ ಏರಿಕೆಯಾಗಿದೆ. ಅದೇ ರೀತಿ 259 ರೂ.ಗೆ ಲಭ್ಯವಿದ್ದ ಅರ್ಧ ಲೀಟರ್ ಸ್ಯಾಚೆ ಈಗ ರೂ. 305ಕ್ಕೆ ಮಾರಾಟವಾಗುತ್ತಿದ್ದು, ಅದೇ ಪ್ರಮಾಣದ ಪೆಟ್ ಬಾಟಲ್ ಅನ್ನು ಹಿಂದಿನ ರೂ 268 ರಿಂದ 315 ರೂ.ಗೆ ಮಾರಾಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

KMF Nandini ghee price Increased Rs 180 per litre

ಕಳೆದ ಎರಡು ವರ್ಷಗಳಿಂದ ಹೆಚ್ಚುತ್ತಿರುವ ನಷ್ಟದ ಮೇಲಿನ ಏರಿಳಿತವನ್ನು ಸಮತೋಲನ ಮಾಡಲು ಉಪ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೆ ಮಾರ್ಗಗಳಿಲ್ಲ. ಹಾಲಿನ ದರವನ್ನು ಪರಿಷ್ಕರಿಸಲು ಸರ್ಕಾರ ಪದೇ ಪದೇ ನಿರಾಕರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Unable to get the government's approval to raise milk prices in the past few months, the Karnataka Milk Federation (KMF) has now incfreaase the price of Nandini ghee by Rs 180 per liter in two-and-a-half months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X