Minister KJ George: ವರ್ಗಾವಣೆಗೂ ಯಾವುದೇ ಹಣ ಕೊಡಬೇಡಿ, ಹಣ ಕೇಳಿದ್ರೆ ನನ್ನ ಗಮನಕ್ಕೆ ತನ್ನಿ: ಕೆ ಜೆ ಜಾರ್ಜ್
ಬೆಂಗಳೂರು, ಜೂನ್ 12: ನಮ್ಮ ಇಲಾಖೆಯಲ್ಲಿ ಯಾವುದೇ ಹಣ ಕೇಳಲ್ಲ. ನನ್ನ ಹೆಸರಲ್ಲಿ, ಅಧಿಕಾರಿಗಳ ಹೆಸರಲ್ಲಿ, ವರ್ಗಾವಣೆಗೂ ಯಾವುದೇ ಹಣ ಕೊಡಬೇಡಿ, ಹಣ ಕೇಳಿದ್ರೆ ನನ್ನ ಗಮನಕ್ಕೆ ತನ್ನಿ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮನೆ ಮತ್ತು ಮನೆ ಬದಲಾವಣೆ ವಿಚಾರ ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ಜೊತೆ ಚರ್ಚೆಯಾಗಿದೆ. ಯಾರು ಹೊಸದಾಗಿ ಮನೆಗೆ ಬರ್ತಾರೆ ಅವರಿಗೆ ದಾಖಾಲೆ ಇಲ್ಲ.ಅವರಿಗೆ ಅವರೇಜ್ 53% +10% . 58 ಯೂನಿಟ್ ವರೆಗೂ ವಿದ್ಯುತ್ ಉಚಿತ ಆಗಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ಒಂದು ವರ್ಷದವರೆಗೂ ಲೆಕ್ಕ ಸಿಗದವರಿಗೆ ಇದು ಅನ್ವಯ ಆಗಲಿದೆ ಎಂದು ಹೇಳಿದರು.

200 ಯೂನಿಟ್ ಷರತ್ತು ವಿಚಾರವಾಗಿ ಮಾತನಾಡಿ, ಹೊಸ ಮನೆಯವರಿಗೆ ಹಂತ ಹಂತವಾಗಿ 200 ಯೂನಿಟ್ ಸಿಗಲಿದೆ. ನಿನ್ನೆಯೂ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ನಮ್ಮ ಉಚಿತ ಕೊಡುಗೆ ವಿರುದ್ಧ ಇದ್ದಾರೆ. ಅವರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ. 2022ರ ಏಪ್ರಿಲ್ ತಿಂಗಳಿಂದ 2023ರ ಮಾರ್ಚ್ ತಿಂಗಳ 12 ತಿಂಗಳ ಅವಧಿ ಲೆಕ್ಕಾಚಾರ ಮಾಡಲಿದ್ದೇವೆ. ಮೊದಲು ಮೂರು ಹಂತದಲ್ಲಿ ಸ್ಲಾಬ್ ಇತ್ತು. 200 ಯೂನಿಟ್ ವರೆಗೂ ನಾಲ್ಕು ಹಂತದಲ್ಲಿ ದರ ಇತ್ತು. ಈಗ ಎರಡು ಹಂತದಲ್ಲಿ ಸ್ಲಾಬ್ ಮಾಡಲಾಗಿದೆ ಎಂದು ಹೇಳಿದರು.
ಈ ಹೊರೆ ಯಾವ ಗ್ರಾಹಕರಿಗೆ ಹೋಗ್ತಿಲ್ಲ. ರಾಜ್ಯ ಸರ್ಕಾರವೇ ಬರಿಸಿಕೊಳ್ತಿದೆ, ಯಾರ ಮೇಲೂ ಹೊರೆ ಮಾಡುವುದಿಲ್ಲ. ಎರಡು ಹಂತದ ದರ ನಿಗದಿ KERC ಇಂದಲೇ ಜಾರಿಗೆ ತಂದಿರೋದು. ಹೀಗಾಗಿ ಹಿಂದೆ ಇದ್ದ ನಾಲ್ಕು ಸ್ಲಾಬ್‌ಗೆ ಹೋಗಬಹುದಾ ಅಂತ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಹಿಂದಿನ ರೀತಿ ಮಾಪನಕ್ಕೆ ಹೋಗಲು ಪ್ರಯತ್ನ ಮಾಡುತ್ತೇವೆ ಎಂದರು.
ಕನಿಷ್ಠ ದರ ನಿಗದಿ 100 ರಿಂದ 110ರೂಗೆ ಹೆಚ್ಚಳ ವಿಚಾರವಾಗಿ ಮಾತನಾಡಿ, ಅದೂ ಕೂಡ KERC ಮೂಲಕವೇ ಹೆಚ್ಚಳ ಮಾಡಲಾಗಿದೆ. ಸದ್ಯ ಮಳೆ ಕೊರತೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ.
ಮಳೆ ಬರಲು ಇನ್ನೂ ಸಮಯ ಇದೆ. ಸೋಲಾರ್ ಮತ್ತು ವಿಂಡ್ ಎನರ್ಜಿ ಬಳಕೆ ಆಗ್ತಿದೆ, ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಆಗಸ್ಟ್ ವರೆಗೂ ಮಳೆ ಬರುವ ನಿರೀಕ್ಷೆ ಇದೆ. ದೇವರ ಮೇಲೆ ಬಾರ ಹಾಕಿದ್ದೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.












Click it and Unblock the Notifications