ಮೊದಲ ಬಾರಿಗೆ ಹಾರ್ಡ್ ಹಿಟ್ಟಿಂಗ್ ಪ್ರಶ್ನೆಗಳನ್ನು ಎದುರಿಸಿದ ಸುದೀಪ್: ಬಿಜೆಪಿ ಟ್ರ್ಯಾಪ್‌ಗೆ ಒಳಗಾದ ನಟನಿಗೇ ಇಲ್ಲ ಕ್ಲ್ಯಾರಿಟಿ
ಬೆಂಗಳೂರು, ಏಪ್ರಿಲ್ 05: ನಟ ಕಿಚ್ಚ ಸುದೀಪ್ ( Kichcha Sudeepa ) ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ( BJP ) ಎಂಬ ಉಹಾಪೋಹಗಳಿಗೆ ತೆರೆ ಬಿದ್ದಿದೆ. ಬಿಜೆಪಿಯನ್ನು ನಾನು ಸೇರ್ಪಡೆಗೊಳ್ಳುವುದಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai ) ಅವರಿಗಷ್ಟೇ ನನ್ನ ಬೆಂಬಲವಿದೆ. ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ತಿಳಿಸಿದರು.
ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಸುದೀಪ್, 'ಬಸವರಾಜ ಬೊಮ್ಮಾಯಿ ಅವರೊಂದಿಗೆ ನನಗೆ ವೈಯುಕ್ತಿಕ ಸ್ನೇಹ ಸಂಬಂಧವಿದೆ. ನನ್ನ ಕಷ್ಟದ ಕಾಲದಲ್ಲಿ ಅವರ ನನಗೆ ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಅವರ ಪರ ನಿಂತಿದ್ದೇನೆ. ಈಗ ಅವರಿಗೆ ನನ್ನ ಅನಿವಾರ್ಯವಿದೆ ಎಂಬುದಾಗಿ ಹೇಳಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲುವುದು ಮಾನವೀಯ ಗುಣ' ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳನ್ನು ಎದುರಿಸಿದ ಸುದೀಪ್ ಅವರಲ್ಲಿ ಪೊಲಿಟಿಕಲ್ ಕ್ಲ್ಯಾರಿಟಿ ಇರುವುದು ಕಂಡುಬರಲಿಲ್ಲ. ಈ ಸುದ್ದಿಗೋಷ್ಠಿಯು ತುರಾತುರಿಯಲ್ಲಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇಷ್ಟು ವರ್ಷಗಳ ಕಾಲ ಸಿನಿಮಾಗೆ ಸಂಬಂಧಿಸಿದ್ದ ಪ್ರೆಸ್‌ಮೀಟ್‌ಗಳನ್ನು ಎದುರಿಸಿದ್ದ ಸುದೀಪ್, ಮೊದಲ ಬಾರಿಗೆ ಹಾರ್ಡ್ ಹಿಟ್ಟಿಂಗ್ ಪ್ರಶ್ನೆಗಳನ್ನು ಎದುರಿಸಿದರು.
ಎರಡು ನಾಲಿಗೆ ಇರೋ ರಾಜಕಾರಣಿಗಳನ್ನ ನಂಬಿ ರಾಜಕೀಯಕ್ಕೂ ರಾಜಕೀಯ ಪಕ್ಷದ ಪ್ರಚಾರಕ್ಕೋ, ಹೋಗೋದಕ್ಕಿಂತ, ಸದಾ ನಿಮ್ಮ ಶ್ರೇಯೋಭಿಲಾಷಿಗಳಾಗಿ ಇರೋ ಅಭಿಮಾನಿಗಳಿಗಾಗಿ ಕೆಲಸ ಮಾಡಿ.
— Team Kiccha Sudeep ® (@TeamKiccha) April 5, 2023
WE DONT WANT KICCHA IN POLITICS#WeDontWantKicchaInPolitics#KicchaSudeep #KicchaBOSS pic.twitter.com/l7YXG3x90m
ದುಡ್ಡಿಗಾಗಿ ಪ್ರಚಾರಕ್ಕೆ ಬರುತ್ತಿದ್ದೀರಾ?
ನೀವು ದುಡ್ಡು ತೆಗೆದುಕೊಂಡು ಪ್ರಚಾರ ಮಾಡಲು ಬರುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಸುದೀಪ್‌ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಟ, ನನಗೆ ಚಿತ್ರರಂಗದಲ್ಲೇ ಹಲವರು ದುಡ್ಡು ಕೊಡಬೇಕಿದೆ. ಅದೆಲ್ಲವನ್ನೂ ನನಗೆ ಕೊಡಿಸಿದೆ ಸಾಕು. ನಾನು ದುಡ್ಡು ಮಾಡಲು ರಾಜಕೀಯಕ್ಕೇ ಬರಬೇಕಿಲ್ಲ ಎಂಬ ಉತ್ತರವನ್ನು ಕಿಚ್ಚ ಸುದೀಪ್ ನೀಡಿದರು.

40 ಪರ್ಸೆಂಟ್ ಆರೋಪ ಹೊತ್ತಿರುವ ಸರ್ಕಾರದ ಬಗ್ಗೆ ನಿಮ್ಮ ನಿಲುವೇನು?
ಇದೆಲ್ಲವೂ ನನಗೆ ಗೊತ್ತಿಲ್ಲ. ಗೊತ್ತಿರುವುದನ್ನು ಮಾತ್ರ ನಾನು ಹೇಳಬಲ್ಲೆ. ಬಸವರಾಜ ಬೊಮ್ಮಾಯಿ ಮಾಡಿದ ಅಭಿವೃದ್ಧಿ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು. ಅದಕ್ಕಷ್ಟೇ ನನ್ನ ಬೆಂಬಲವಿದೆ ಎಂದು ಹೇಳಿ ಜಾರಿಕೊಳ್ಳುವ ಕೆಲಸವನ್ನು ಸುದೀಪ್ ಮಾಡಿದರು.
ಒಬ್ಬ ದಲಿತನಾಗಿ (ST) ಆಗಿ ಬ್ರಾಹ್ಮಣವಾದಿಗಳಾದ RSS/BJP ಪರ ನಿಲ್ಲೋದು ಎಷ್ಟು ಸರಿ @KicchaSudeep ಅವರೇ?#ಕಿಚ್ಚಾಸುದೀಪ್ #kichchasudeepa #ಬಿಜೆಪಿಯೇಭರವಸೆ @RajyaSangha pic.twitter.com/rYmES8eOfD
— Kall Shetty (@ShettyKall) April 5, 2023
ಬೊಮ್ಮಾಯಿ ನಿಮಗೆ ಮಾಡಿದ ಸಹಾಯದ ಬಗ್ಗೆ ಹೇಳಬಹುದಾ?
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಷ್ಟಕಾಲದಲ್ಲಿ ನಿಮಗೆ ಸಹಾಯ ಮಾಡಿದ್ದಾರೆಂದು ಪದೇಪದೇ ಹೇಳುತ್ತಿದ್ದೀರಿ. ಆ ಸಹಾಯದ ಬಗ್ಗೆ ಹೇಳಬಹುದಾ ಎಂದು ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸುದೀಪ್, 'ಆ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಬರೆದರೆ ಪುಸ್ತಕವನ್ನೇ ಬರೆಯಬಹುದು' ಎಂದು ಹೇಳಿ ಮತ್ತೆ ನುಣುಚಿಕೊಳ್ಳುವ ಯತ್ನವನ್ನು ಮಾಡಿದರು.

ಐಟಿ, ಇಡಿ ದಾಳಿಗೆ ಹೆದರಿದ್ದೀರಾ?
ಐಟಿ, ಇಡಿ ದಾಳಿಗೆ ಭಯಪಟ್ಟಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಸುದೀಪ್ ಗಹಗಹಿಸಿ ನಕ್ಕರು. 'ನಾನು ಹೆದರುವವರ ಹಾಗೆ ಕಾಣುತ್ತೇನಾ? ಯಾವುದೇ ಬೆದರಿಕೆಗೆ ನಾನು ಒಳಗಾಗಿಲ್ಲ' ಎಂದು ವಿಕ್ರಾಂತ ರೋಣ ಖ್ಯಾತಿಯ ಸುದೀಪ್ ಹೇಳಿದರು.
ದೇವ್ರು ನಿಮ್ಮ ಮುಗ್ದ ಮನಸಿಗೆ ಈ ರಾಜಕೀಯ ಸೂಟ್ ಆಗಲ್ಲ...
— Bos_Team_Mysore (@Bos_Team_Mysore) April 5, 2023
Please bossuu don't Official it🥲🥲@KicchaSudeep#WeDontWantKicchaInPolitics#WeDontWantKicchaInPolitics pic.twitter.com/Gh9bmcnU82
ಡಿಕೆಶಿ ಜೊತೆಗಿನ ಫೋಟೊ ಬಗ್ಗೆ ಏನು ಹೇಳುತ್ತೀರಿ?
ಡಿಕೆ ಶಿವಕುಮಾರ್ ನನ್ನ ಮನೆಗೆ ಬಂದಿದ್ದು ನಿಜ. ರಾಜಕೀಯ ನಾಯಕರು ನಮಗೆ ಅಪ್ರೋಚ್ ಮಾಡುವುದು ತಪ್ಪಲ್ಲ ಎಂದು ಹೇಳಿದರು.
ಸುದೀಪ್ ಮಾರಿಕೊಳ್ಳುವವರಲ್ಲ ಎಂಬ ಪ್ರಕಾಶ್ ರಾಜ್ ಟ್ವೀಟ್ ಬಗ್ಗೆ ಏನು ಹೇಳುತ್ತೀರಿ?
ನಾನು ಪ್ರಕಾಶ್ ರಾಜ್ ಅವರು ರನ್ನ ಚಿತ್ರದಲ್ಲಿ ಒಟ್ಟಾರೆಯಾಗಿ ನಟಿಸಿದ್ದೆವು. ಮುಂದಿನ ದಿನಗಳಲ್ಲಿ ಅವರೊಂದಿಗೆ ನಟಿಸಲು ಕಾತರದಲ್ಲಿದ್ದೇನೆ ಎಂದು ಹೇಳಿ ಮತ್ತೆ ನುಣುಚಿಕೊಳ್ಳವ ಪ್ರಯತ್ನವನ್ನು ಸುದೀಪ್ ಮಾಡಿದರು.
ಒಟ್ಟಾರೆಯಾಗಿ ಹೇಳುವುದಾದರೆ, ನಟ ಸುದೀಪ್ ಅವರು ಯಾವುದೇ ಸಿದ್ದತೆ ಇಲ್ಲದೇ, ಸುದ್ದಿಗೋಷ್ಠಿಗೆ ಬಂದಂತಿದ್ದರು. ಸುದೀಪ್ ಅವರನ್ನು ಬಿಜೆಪಿ ಟ್ರ್ಯಾಪ್ ಮಾಡಿದೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಟ ಸುದೀಪ್ ಅವರ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಸುದೀಪ್ ಅವರು ರಾಜಕೀಯಕ್ಕೆ ಬರುವುದೇ ಬೇಡವೆಂದು ಅವರು ಹೇಳುತ್ತಿದ್ದಾರೆ.












Click it and Unblock the Notifications