KEA: ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಎರಡು ಮತ್ತು ಮೂರನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಜೊತೆಗೆ ಆಕ್ಷೇಪಣೆಗೂ ಆಹ್ವಾನಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ತಿಳಿಸಿದ್ದಾರೆ.

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ ಆರ್ಚ್ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಇಂದು ಶುಕ್ರವಾರ (ಅಕ್ಟೋಬರ್ 24) ಕೆಇಎ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳಲ್ಲಿ ಯಾರಾದರೂ ಅಕ್ಟೋಬರ್ 25ರಂದು ಮಧ್ಯಾಹ್ನ 1 ಗಂಟೆ ಒಳಗೆ ಇ-ಮೇಲ್ ([email protected]) ಮೂಲಕ ತಿಳಿಸಬಹುದೆಂದು ಹೇಳಿದರು.

KEA PGCET and UGNEET-25 Provisional Seat Allotment Results Announced Objection Window Open

ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಗೆ 23-10-2025 ರ ಬೆಳಗ್ಗೆ 10.30 ರವರೆಗೆ ನಮೂದಿಸಿದ Options ಗಳನ್ನು ಪರಿಗಣಿಸಲಾಗಿದೆ. ಇದು PGCET-2025 ರ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವಾಗಿದೆ. ಅಭ್ಯರ್ಥಿಗಳು ತಾತ್ಕಾಲಿಕವಾಗಿ ಹಂಚಿಕೆಯಾಗಿರುವ ಸೀಟಿಗೆ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂದು ಕೆಇಎ ತಿಳಿಸಿದೆ.

ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ (Options ಗಳನ್ನು ದಾಖಲಿಸಲಾಗಿದೆ, ಎರಡನೇ ಸುತ್ತಿನ ಕಟ್‌ಆಫ್ ಬ್ಯಾಂಕ್ ಪರಿಶೀಲಿಸಲಾಗಿದೆ, ಆದರೆ ಯಾವುದೂ ಸೀಟು ಹಂಚಿಕೆಯಾಗಿಲ್ಲ) ದಿನಾಂಕ 25-10-2025 ರ ಮಧ್ಯಾಹ್ನ 1.00 ರೊಳಗೆ [email protected] ಗೆ ಎಲ್ಲಾ ವಿವರಗಳೊಂದಿಗೆ ಮೇಲ್ ಮಾಡಬಹುದು. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.

UGNEET-25: 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ - ಪದವಿ ಪೂರ್ವ (UGNEET-25) ಅಭ್ಯರ್ಥಿಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಲಾಗಿದೆ.

ಆಕ್ಷೇಪಣೆಗಳು ಇದ್ದಲ್ಲಿ ಅಕ್ಟೋಬರ್ 25ರಂದು ಬೆಳಗ್ಗೆ 10ರೊಳಗೆ ಇ-ಮೇಲ್ ([email protected]) ಮೂಲಕ ತಿಳಿಸಬೇಕು ಎಂದು ಪ್ರಾಧಿಕಾರ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ. ಇನ್ನೂ ಅಖಿಲ ಭಾರತ ಮಟ್ಟದಲ್ಲಿ ಸೀಟು ಹಂಚಿಕೆಯಾದವರಿಗೆ ಕೆಇಎ ಯಿಂದಲೂ ಸೀಟು ಸಿಕ್ಕಿದ್ದಲ್ಲಿ ಅಂತಹವರು ಕೆಇಎ ಸೀಟು ಉಳಿಸಿಕೊಳ್ಳಬೇಕಿದ್ದರೆ ಅಕ್ಟೊಭರ್ 25ರಂದು ಮಧ್ಯಾಹ್ನ 12.30ರೊಳಗೆ ಕೆಇಎ ಗೆ ಖುದ್ದು ಬಂದು ತಿಳಿಸಬೇಕು. ಖುದ್ದು ಬರಲು ಆಗದಿದ್ದಲ್ಲಿ ಇ-ಮೇಲ್ ([email protected]) ಮೂಲಕ ತಿಳಿಸುವಂತೆ ಹೇಳಿದರು.

ಒಂದು ವೇಳೆ ಎಂಸಿಸಿ ಯಲ್ಲಿ ಸೀಟು ಸಿಕ್ಕಿ, ಕೆಇಎ ಗೆ ಪತ್ರ ನೀಡದಿದ್ದರೆ ಅಂತಹವರ ಸೀಟು ಹಂಚಿಕೆಯನ್ನು ಕೆಇಎ ರದ್ದುಪಡಿಸಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ನೋಡಲು ಮನವಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+