KEA: ಕೆಸಿಇಟಿ ಪರೀಕ್ಷಾ 2025 ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್ ಮಾಡುವುದು ಹೇಗೆ? ಲಿಂಕ್..
ಬೆಂಗಳೂರು, ಏಪ್ರಿಲ್ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 (KCET 2025) ದಿನಾಂಕ ವೇಳಾಪಟ್ಟಿ ಪ್ರಕಟಿಸಿದೆ. ಅದರ ಬೆನ್ನಲ್ಲೆ ಭಾನುವಾರ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಕೆಸಿಇಟಿ ಪರೀಕ್ಷೆಯ ಪ್ರವೇಶ ಪತ್ರ (Hall Ticket) ಸಹ ಬಿಡುಗಡೆ ಮಾಡಿದೆ. ಪರೀಕ್ಷಾರ್ಥಿಗಳು ಕೂಡಲೇ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಈ ಕೆಳಗಿನ ವಿಧಾನ ಅನುಸರಿಸಬೇಕು.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ಇದೇ ತಿಂಗಳ ಏಪ್ರಿಲ್ 15, 16 ಹಾಗೂ ಏಪ್ರಿಲ್ 17 ರಂದು ಕರ್ನಾಟಕದಾದ್ಯಂತ ನಡೆಯಲಿದೆ. ಈ ಪರೀಕ್ಷೆ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಆಯಾ ದಿನದಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ಪರೀಕ್ಷೆ ಬರೆಯಲಿದ್ದಾರೆ.

ಸದ್ಯ KCET ಪರೀಕ್ಷಾ ಅಭ್ಯರ್ಥಿಳಿಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ರಾಝ್ಯ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ kea.kar.nic.in ನಲ್ಲಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
KCET ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?
* ಅಭ್ಯರ್ಥಿಗಳು KCET ಪ್ರವೇಶ ಪತ್ರ 2025 ಡೌನ್‌ಲೋಡ್ ಮಾಡಲು kea.kar.nic.in ಗೆ ಭೇಟಿ ನೀಡಬೇಕು.
* KEA ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಅಲ್ಲಿ ಅರ್ಜಿ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಒದಗಿಸಬೇಕು.
* ಅಗತ್ಯವಿರುವ ಕ್ಷೇತ್ರಗಳಲ್ಲಿ ಅರ್ಜಿ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ.
* ಹಾಲ್ ಟಿಕೆಟ್‌ನಲ್ಲಿ ಕೊಟ್ಟಿರುವ ವಿವರ ಪರಿಶೀಲಿಸಿಕೊಳ್ಳಬೇಕು.
* ಭವಿಷ್ಯದ ಉಲ್ಲೇಖಕ್ಕಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಅರ್ಜಿದಾರರು ತಮ್ಮ KCET ಹಾಲ್ ಟಿಕೆಟ್ 2025 ಜೊತೆಗೆ ಒಂದು ಫೋಟೋ ಐಡಿ ಪುರಾವೆ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು.
* ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ಇರುವುದಿಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
* ಕರ್ನಾಟಕ ಸಿಇಟಿ ಪರೀಕ್ಷೆಯು ಆಫ್‌ಲೈನ್‌ನಲ್ಲಿ (ಪೆನ್-ಪೇಪರ್) ಇರಲಿದೆ.












Click it and Unblock the Notifications