ವಿದ್ಯಾರ್ಥಿಗಳಿಗೆ ಪೆನ್ ಸಿಗರೇಟ್: ಅಂಗಡಿಯವನ ಸೆರೆ

ಕಾಸರಗೋಡು ನಗರದ ಅಣಂಗುರು ಭಾಗದಲ್ಲಿ ಶಾಲೆಯೊಂದರ ಬಳಿ ಅಂಗಡಿಯಿಟ್ಟುಕೊಂಡಿದ್ದ ಕೆಎ ಅಲಿ ಪೆನ್ನುಗಳಲ್ಲಿ ಸಿಗರೇಟ್ ತುಂಬಿಸಿ ವಿದ್ಯಾರ್ಥಿಗಳಿಗೆ ಮಾರುವ ಮೂಲಕ ಅವರನ್ನು ಅಡ್ಡ ಮಾರ್ಗಕ್ಕೆ ಹುರಿದುಂಬಿಸುತ್ತಿದ್ದ ಎಂದು ಆರೋಪಿಸಲಾಗಿದೆ.
44 ವರ್ಷದ ಅಲಿ ವಿದೇಶಿ ಬ್ರ್ಯಾಂಡ್ ಸಿಗರೇಟುಗಳನ್ನು ಪೆನ್ನುಗಳಲ್ಲಿ ತುಂಬಿಸುತ್ತಿದ್ದ. ಸುಮಾರು 20 pen cigarette ಗಳನ್ನು ಮತ್ತಿತರ ಸಿಗರೇಟುಗಳನ್ನು ಹಾಗೂ ತಂಬಾಕು ಉತ್ಪನ್ನಗಳನ್ನು ಅಲಿ ಅಮಗಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಮೊದಲು ವಿದ್ಯಾರ್ಥಿಯೊಬ್ಬನ ಮನೆಯಲ್ಲಿ ಪೆನ್ ಸಿಗರೇಟ್ ಕಂಡುಬಂದಿದೆ. ಎಚ್ಚೆತ್ತ ವಿದ್ಯಾರ್ಥಿಯ ಪೋಷಕರು ತಕ್ಷಣ ಶಾಲೆಗೆ ತೆರಳಿ, ಅಧ್ಯಾಪಕರಿಗೆ ವಿಷಯ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಇನ್ನೂ ಕೆಲ ವಿದ್ಯಾರ್ಥಿಗಳ ಮನೆಗಳಲ್ಲಿ ಶಾಲಾ ಸಿಬ್ಬಂದಿಗೆ ಇಂತಹುದೇ ಸಿಗರೇಟುಗಳು ಸಿಕ್ಕಿವೆ.
ಮುಂದೆ ಪೊಲೀಸರು ಕಾರ್ಯಾಚರಣೆಗೆ ಇಳಿದು ಸುತ್ತಮುತ್ತಲ ಅಂಗಡಿಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಆಗ ಅಲಿ ಅಂಗಡಿಯಲ್ಲಿ pen cigarette ಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಪೆನ್ನುಗಳಲ್ಲಿ ಸಿಗರೇಟುಗಳನ್ನು ತುಂಬಿಸಲಾಗಿತ್ತು. ಪ್ರತಿ ಪ್ಯಾಕಿನಲ್ಲೂ ಐದೈದು ಸಿಗರೇಟುಗಳಿದ್ದವು. ಅಲಿ ಸಿಗರೇಟುಗಳನ್ನು 10 ರಿಂದ 15 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎಂದು ವಿದ್ಯಾರ್ಥಿಗಳು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ, ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ pen cigaretteಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.












Click it and Unblock the Notifications