ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಸ್ಟಾರ್ಟಪ್ ನೀತಿಗೆ ಸಂಪುಟ ಅಸ್ತು: 10,000 ಕಂಪನಿ ಸ್ಥಾಪನೆ ಗುರಿ

|
Google Oneindia Kannada News

ಬೆಳಗಾವಿ, ಡಿಸೆಂಬರ್ 22: ಕರ್ನಾಟಕ ರಾಜ್ಯದಲ್ಲಿ 2027ರ ಹೊತ್ತಿಗೆ 25 ಸಾವಿರ ನವೋದ್ಯಮಗಳು ನೆಲೆಯೂರಲಿವೆ. ಇದೇ ನಿಟ್ಟಿನಲ್ಲಿ ಗುರಿ ಸಾಧನೆ ಆಗುವ ಹಾಗೆ 2022-27ರ ನಡುವಿನ ಐದು ವರ್ಷಗಳ ಅವಧಿಯ 'ಹೊಸ ಸ್ಟಾರ್ಟ್ಅಪ್ ನೀತಿ'ಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಸದ್ಯಕ್ಕೆ 15 ಸಾವಿರ ಸ್ಟಾರ್ಟ್ಅಪ್ ಕಾರ್ಯ ನಿರ್ವಹಿಸುತ್ತಿವೆ. ಸಂಪುಟ ಅನುಮೋದನೆ ನೀಡಿರುವ ಈ ಹೊಸ ನೀತಿಯಿಂದಾಗಿ ಕರ್ನಾಟಕದಲ್ಲಿ ಇನ್ನೂ 10,000 ನವ ಉದ್ಯಮಗಳು ಅಸ್ತಿತ್ವಕ್ಕೆ ಬರಲಿವೆ ಎಂದರು.

Breaking: ಡಿ.23ರಂದೇ ಸಂಸತ್ ಚಳಿಗಾಲ ಅಧಿವೇಶನ ಮುಕ್ತಾಯ ಸಾಧ್ಯತೆBreaking: ಡಿ.23ರಂದೇ ಸಂಸತ್ ಚಳಿಗಾಲ ಅಧಿವೇಶನ ಮುಕ್ತಾಯ ಸಾಧ್ಯತೆ

ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕವನ್ನು ದೇಶದ ಸ್ಟಾರ್ಟಪ್‌ ವಲಯದಲ್ಲಿ 'ಚಾಂಪಿಯನ್ ರಾಜ್ಯ'ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಅಧಿಕ ಪ್ರಮಾಣದ ಬೆಳವಣಿಗೆ ದಾಖಲಿಸುವಂತ ಸ್ಟಾರ್ಟ್ಅಪ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು.

Karntaka Cabinet Agreed New Startup Policy, 10,000 Company Establishment Target In Next 5 Year

ಹೊಸ ನೀತಿಯು ಮುಖ್ಯವಾಗಿ ಬೆಂಗಳೂರಿನಿಂದ ಹೊರಗಿರುವ ತಂತ್ರಜ್ಞಾನ ಕ್ಲಸ್ಟರ್‍‌ಗಳಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲಿದೆ. ಜೊತೆಗೆ ಸಾಮಾಜಿಕ ಉದ್ಯಮಶೀಲತೆ, ಅಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಆಡಳಿತದಲ್ಲಿ ನಾವೀನ್ಯತೆಯ ತಂತ್ರಜ್ಞಾನ ಕ್ಷೇತ್ರಗಳಿಗೆ ಇದು ಇಂಬು ನೀಡಲಿದೆ. ಈ ಎಲ್ಲ ಅಭಿವೃದ್ಧಿ ಮೂಲಕ ಈಗ ನಾವು ಎದುರಿಸುತ್ತಿರುವ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕರ್ನಾಟಕದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂದು ಹೇಳಿದರು.

9 ಅಂಶಗಳ ಆಧಾರದಲ್ಲಿ ನೀತಿ ರಚನೆ

ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಸ್ಟಾರ್ಟ್ಅಪ್ ಹಬ್‌ ಆಗಬೇಕೆನ್ನುವುದು ಬಿಜೆಪಿ ಸರ್ಕಾರದ ಗುರಿ ಆಗಿದೆ. ಇದಕ್ಕಾಗಿ ಈ ವಲಯದ ಬೆಳವಣಿಗೆ ಮತ್ತು ವಹಿವಾಟಿಗೆ ಮುಕ್ತ ಉತ್ತೇಜನ ಕೊಡಲಾಗುವುದು. ಒಟ್ಟು 9 ಅಂಶಗಳ ಆಧಾರದ ಮೇಲೆ ರೂಪಿಸಿರುವ ಈ ನೀತಿಯು ಸರಕಾರಿ ಸಂಸ್ಥೆಗಳಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸುವ ಮತ್ತು 'ಬಿಯಾಂಡ್‌ ಬೆಂಗಳೂರು' ಉಪಕ್ರಮವನ್ನು ಸಾಕಾರಗೊಳಿಸುವ ಗುರಿಗಳನ್ನೂ ಹೊಂದಿದೆ.

Karntaka Cabinet Agreed New Startup Policy, 10,000 Company Establishment Target In Next 5 Year

ಇದಲ್ಲದೆ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವುದು, ಸಾಮಾಜಿಕ ಆಡಳಿತ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸಲಾಗುವುದು. ಇನ್‌ಕ್ಯುಬೇಷನ್‌ ಕೇಂದ್ರಗಳ ಸ್ಥಾಪನೆ ಮತ್ತು ಅಭಿವೃದ್ಧಿ, ಸಾಂಸ್ಥಿಕ ಹೂಡಿಕೆದಾರರು ಮತ್ತು ಏಂಜೆಲ್‌ ಹೂಡಿಕೆದಾರರ ಜತೆಗೆ ಸರ್ಕಾರವು ನವೋದ್ಯಮಗಳಲ್ಲಿ ಬಂಡವಾಳ ಹೂಡಲು ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ವಿವರಿಸಿದರು.

English summary
Karntaka Cabinet agreed for New Startup Policy than 10,000 company establishment target in Next 5 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X