ರಾಹುಲ್ ಗಾಂಧಿ ಫ್ಯಾನ್ ಅನ್ನೋ ಕಾರಣಕ್ಕೆ 40 ಲಕ್ಷ ಪ್ಯಾಕೇಜ್ ಇದ್ದರೂ ಮದುವೆ ಹುಡುಗನ್ನ ರಿಜೆಕ್ಟ್ ಮಾಡಿದ ಕನ್ನಡತಿ
ಬೆಂಗಳೂರು: ಮದುವೆಗೆ ಹುಡುಗನನ್ನ ನೋಡುವಾಗ ಆತನ ರೂಪ, ಗುಣ, ಆಸ್ತಿ, ಕುಟುಂಬ ಹಿನ್ನೆಲೆ ಮತ್ತು ಮುಖ್ಯವಾಗಿ ಆತನ ವಾರ್ಷಿಕ ಆದಾಯವನ್ನ ನೋಡುವುದು ಸಾಮಾನ್ಯ ಅಲ್ಲವೇ. ತಂದೆ ತಾಯಿಗಳು ಕೂಡ ತಮ್ಮ ಮಗಳಿಗೆ ಒಳ್ಳೆ ಉದ್ಯೋಗದಲ್ಲಿರುವ ಹುಡುಗನೇ ಬೇಕು ಎಂದು ಬಯಸುತ್ತಾರೆ.
ಆದ್ರೆ ನೋಡಿ, ಇಲ್ಲೊಬ್ಬ ಯುವತಿ ವಾರ್ಷಿಕ ಬರೋಬ್ಬರಿ 40 ಲಕ್ಷ ರೂಪಾಯಿ ದುಡಿಯುವ, ನೋಡಲು ಹ್ಯಾಂಡ್‌ಸಮ್ ಆಗಿರುವ ಯುವಕನ ಮದುವೆ ಪ್ರಪೋಸಲ್ ಅನ್ನು ಕೇವಲ ರಾಹುಲ್ ಗಾಂಧಿ ಕಾರಣಕ್ಕಾಗಿ ತಿರಸ್ಕರಿಸಿದ್ದಾಳೆ. ಹೌದು, ಈ ವಿಚಿತ್ರ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮೂಲದ ಆರೂಹಿ ರೆಡ್ಡಿ ಎಂಬ ಯುವತಿಯೇ ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ರಾಜಕೀಯ ಒಲವು ಕೂಡ ವೈಯಕ್ತಿಕ ನಿರ್ಧಾರಗಳ ಮೇಲೆ ಮತ್ತು ದಾಂಪತ್ಯ ಜೀವನದ ಆರಂಭದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದೆ.
ರಾಹುಲ್ ಗಾಂಧಿ ರೋಲ್ ಮಾಡೆಲ್ ಎಂಬ ಕಾರಣಕ್ಕೆ ಮದುವೆ ಪ್ರಸ್ತಾಪ ತಿರಸ್ಕಾರ
ಆರೂಹಿ ರೆಡ್ಡಿ ಅವರಿಗೆ ಇತ್ತೀಚೆಗೆ ಮದುವೆಯ ಪ್ರಸ್ತಾಪವೊಂದು ಬಂದಿತ್ತು. ಹುಡುಗ ನೋಡಲು ಸುಂದರವಾಗಿದ್ದ, ವಾರ್ಷಿಕ 40 ಲಕ್ಷ ರೂಪಾಯಿಗಳ ಭರ್ಜರಿ ಪ್ಯಾಕೇಜ್ ಹೊಂದಿದ್ದ ಮತ್ತು ಆತನ ಕುಟುಂಬವೂ ಸಮಾಜದಲ್ಲಿ ಉತ್ತಮ ಹೆಸರು ಹೊಂದಿತ್ತು. ಇಷ್ಟೆಲ್ಲಾ ಅಂಶಗಳಿದ್ದರೂ, ಆಕೆ ಆ ಮದುವೆ ಪ್ರಸ್ತಾಪವನ್ನ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅದಕ್ಕೆ ಕಾರಣ ಆ ಹುಡುಗನ ಇನ್‌ಸ್ಟಾಗ್ರಾಮ್ ಪ್ರೊಫೈಲ್.
ಹೌದು, ಆ ಪ್ರೊಫೈಲ್‌ನಲ್ಲಿ ಆತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತನ್ನ ರೋಲ್ ಮಾಡೆಲ್ ಎಂದು ಬರೆದುಕೊಂಡಿದ್ದ. ಇದೇ ಕಾರಣಕ್ಕಾಗಿ ತಾನು ಆತನನ್ನು ರಿಜೆಕ್ಟ್ ಮಾಡಿರುವುದಾಗಿ ಆರೂಹಿ ತಮ್ಮ ಪೋಸ್ಟ್‌ನಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ವೈರಲ್ ಆದ ಆರೂಹಿ ರೆಡ್ಡಿ ಪೋಸ್ಟ್‌ನಲ್ಲಿ ಏನಿದೆ?
ಆರೂಹಿ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ: "ಇತ್ತೀಚೆಗೆ ನನಗೆ ಒಂದು ಮದುವೆಯ ಪ್ರಪೋಸಲ್ ಬಂದಿತ್ತು. ಹುಡುಗ ನೋಡಲು ಹ್ಯಾಂಡ್‌ಸಮ್ ಆಗಿದ್ದ, 40 ಲಕ್ಷ ರೂಪಾಯಿ ಪ್ಯಾಕೇಜ್ ಇತ್ತು, ಒಳ್ಳೆ ಫ್ಯಾಮಿಲಿಯಿಂದ ಬಂದಿದ್ದ. ಆದರೆ ನಾನು ಕೇವಲ ಒಂದೇ ಒಂದು ಕಾರಣಕ್ಕಾಗಿ ಆತನನ್ನು ರಿಜೆಕ್ಟ್ ಮಾಡಿದೆ. ಅವನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ರಾಹುಲ್ ಗಾಂಧಿ ಆತನ ರೋಲ್ ಮಾಡೆಲ್ ಎಂದು ನೋಡಿದೆ.
ಸತತವಾಗಿ ಸೋಲುವ ವ್ಯಕ್ತಿಯನ್ನ ರೋಲ್ ಮಾಡೆಲ್ ಎಂದು ಪರಿಗಣಿಸುವವರ ಐಕ್ಯೂ ಮಟ್ಟ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಅಂತಹವರು ತಮ್ಮ ಮಕ್ಕಳಿಗೆ ಗುಲಾಮಗಿರಿ, ದೇಶವಿರೋಧಿ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನ ಬಿಟ್ಟು ಇನ್ನೇನು ತಾನೇ ಕಲಿಸಲು ಸಾಧ್ಯ?"
ಮುಂದುವರಿದು ತನ್ನ ನಿಲುವನ್ನ ಸಮರ್ಥಿಸಿಕೊಂಡಿರುವ ಆಕೆ, "ನನ್ನ ಪಾಲಿಗೆ ಹಣ, ಆಕರ್ಷಕ ರೂಪ ಅಥವಾ ದೊಡ್ಡ ವೃತ್ತಿಜೀವನಕ್ಕಿಂತ ನನ್ನ ದೇಶ ಮತ್ತು ನನ್ನ ಧರ್ಮವೇ ಮುಖ್ಯ. ಒಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ ಆಗಿ, ಸೋಲುವ ವ್ಯಕ್ತಿಯನ್ನ ಆದರ್ಶವಾಗಿ ಇಟ್ಟುಕೊಂಡಿರುವ ಇಂಥವರನ್ನ ನನ್ನ ಜೀವನ ಸಂಗಾತಿಯಾಗಿ ಎಂದಿಗೂ ಸ್ವೀಕರಿಸಲು ಸಾಧ್ಯವಿಲ್ಲ" ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.
I recently got a marriage proposal.
— Aaruhi Reddy 🥷 (@CuteAaruhi4) August 17, 2026
The guy was good-looking, had an impressive ₹40 lakh package, and came from a good family.
But I rejected him for just one reason—on his Instagram profile, I saw that he considered Rahul Gandhi his role model.
If someone considers a Loser…
ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಪರ-ವಿರೋಧ ಚರ್ಚೆ
ಆರೂಹಿ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಈ 40 ಲಕ್ಷ ಪ್ಯಾಕೇಜ್ ಹುಡುಗ ಮತ್ತು ಯುವತಿಯ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಒಂದು ವರ್ಗದ ಜನರು ಆಕೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. "ಜೀವನ ಸಂಗಾತಿಯನ್ನ ಆಯ್ಕೆ ಮಾಡುವಾಗ ರಾಜಕೀಯ ಮತ್ತು ಧಾರ್ಮಿಕ ಸಿದ್ಧಾಂತಗಳು ಹೊಂದಾಣಿಕೆಯಾಗುವುದು ಬಹಳ ಮುಖ್ಯ. ಹಣಕ್ಕಿಂತ ಸಿದ್ಧಾಂತ ಮುಖ್ಯ ಎಂದು ತೋರಿಸಿದ ಆಕೆಯ ನಿರ್ಧಾರ ಸರಿಯಾಗಿದೆ, ಭವಿಷ್ಯದಲ್ಲಿ ಆಗಬಹುದಾದ ವೈಚಾರಿಕ ಸಂಘರ್ಷವನ್ನ ಮೊದಲೇ ತಪ್ಪಿಸಿದ್ದೀರಿ" ಎಂದು ಶ್ಲಾಘಿಸಿದ್ದಾರೆ.
ಆದರೆ ಮತ್ತೊಂದು ವರ್ಗ, ಆಕೆಯನ್ನು ಕಟುವಾಗಿ ಟೀಕಿಸಿದೆ. "ಆ ಹುಡುಗ ವಿಶ್ವದಲ್ಲೇ ಅತ್ಯಂತ ಅದೃಷ್ಟವಂತ! ಇಂತಹ ಸಂಕುಚಿತ ಮನಸ್ಥಿತಿಯ ಹುಡುಗಿಯಿಂದ ಆತ ಬಚಾವಾಗಿದ್ದಾನೆ. ರಾಜಕೀಯಕ್ಕೂ ವಯಕ್ತಿಕ ಜೀವನಕ್ಕೂ ಸಂಬಂಧ ಕಲ್ಪಿಸುವುದು ಮೂರ್ಖತನ, ಪ್ರಜಾಪ್ರಭುತ್ವದಲ್ಲಿ ಯಾರು ಯಾರನ್ನಾದರೂ ರೋಲ್ ಮಾಡೆಲ್ ಎಂದು ಸ್ವೀಕರಿಸಬಹುದು" ಎಂದು ಹೇಳಿದ್ದಾರೆ.
ಆದ್ರೆ, ಕಾರ್ಪೊರೇಟ್ ಜಗತ್ತಿನಲ್ಲಿ ಲಕ್ಷಾಂತರ ರೂಪಾಯಿ ದುಡಿಯುವ ಯುವಕನೊಬ್ಬನಿಗೆ ಕೇವಲ ರಾಜಕೀಯ ನಾಯಕನ ಮೇಲಿನ ಅಭಿಮಾನವೇ ತನ್ನ ಮದುವೆಗೆ ಮುಳುವಾಗಿ ಪರಿಣಮಿಸಿದ್ದು, ವೈವಾಹಿಕ ಸಂಬಂಧಗಳ ಆಯ್ಕೆಯಲ್ಲಿ ರಾಜಕೀಯ ನಿಲುವುಗಳು ಪ್ರವೇಶಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.


Click it and Unblock the Notifications
