ಗೋರ್ಮೆಂಟ್ ಅಣ್ಣ ಎರಡೇ ದಿನದಲ್ಲಿ ನಮ್ ಏರಿಯಾ ರೋಡ್ ಸರಿ ಹೋಗ್ಬೇಕು ಅಷ್ಟೇ! ಮಹಿಳೆ ವಿಡಿಯೋ ವೈರಲ್
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎನ್ನುವುದು ವಿಪಕ್ಷಗಳ ವಾದ. ವಿವಿದ ನಗರಗಳ ಹಲವು ಬಡಾವಣೆಗಳಲ್ಲಿ ರಸ್ತೆ ರಿಪೇರಿ ಕೂಡ ಸರಿಯಾಗಿ ಮಾಡಲು ಹಣವಿಲ್ಲ, ಎಲ್ಲವನ್ನೂ ಸರ್ಕಾರದ ಭಾಗ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎನ್ನುವುದು ವಿಪಕ್ಷ ನಾಯಕರ ಆರೋಪ, ಇದೀಗ ಮಹಿಳೆಯೊಬ್ಬರು ತಮ್ಮ ಏರಿಯಾ ರಸ್ತೆ ಹಾಳಾಗಿರುವ ಬಗ್ಗೆ ವಿಡಿಯೋ ಮಾಡಿದ್ದು ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಲವು ಮಂದಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮಹಿಳೆ ಸರ್ಕಾರಕ್ಕೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. "ಯೋ ಗೋರ್ಮೆಂಟ್ ಅಣ್ಣ ಅಲ್ಲೇನ್ ನೋಡ್ತ್ಯ ಇಲ್ನೋಡು ನಮ್ ಏರಿಯಾ ರೋಡ್ ಕಿತ್ತೋಗದೆ, ವಿಧಾನಸೌದದಲ್ಲಿ ಕೂತು ನೀವೆಲ್ಲಾ ಏನ್ ಮಾಡ್ತಿದಿರಾ" ಎಂದು ಕೇಳಿದ್ದಾರೆ.

ನಮ್ಮ ಮನೆಗೆ ಬರೋ ನೆಂಟರೆಲ್ಲಾ ಇಂತಾ ಏರಿಯಾದಲ್ಲಿ ಇದ್ದೀಯಾ ಎಂದು ಕೇಳುತ್ತಿದ್ದಾರೆ. ನೀವೇನು ಮಾಡುತ್ತೀರೋ ನನಗೆ ಗೊತ್ತಿಲ್ಲ ಇನ್ನು ಎರಡು ದಿನದಲ್ಲಿ ನಮ್ ಏರಿಯಾಗೆ ಹೊಸ ಟಾರ್ ರಸ್ತೆ ಮಾಡಬೇಕು, ಎಲ್ಲಾ ನೈಸ್ ರೋಡ್ ತರ ಇರಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಗೋರ್ಮೆಂಟ್ ಅಣ್ಣಾ, ಎನ್ ಮಾಡ್ತಾ ಇದಿರಾ ಅಣ್ಣಾ ವಿಧಾನ ಸೌಧದಲ್ಲಿ ಕೂತು..?🤣🤣#KarnatakaPolitics pic.twitter.com/WadGBKQ0vf
— Akshay Akki ಅಕ್ಷಯ್🇮🇳 (@FollowAkshay1) August 30, 2024
ವಿಡಿಯೋ ವೈರಲ್
ಇನ್ನು ಈ ವಿಡಿಯೋ ಎಕ್ಸ್‌ನಲ್ಲಿ ಭಾರಿ ವೈರಲ್ ಆಗಿದೆ. ಕೆಲವರು ಮಹಿಳೆ ಫುಲ್ ಸಿಟ್ಟಾಗಿದ್ದಾರೆ ಮೊದಲು ಅವರ ಏರಿಯಾ ರಸ್ತೆ ಸರಿ ಮಾಡಿಸಿ ಎಂದು ಕೇಳಿದ್ದಾರೆ. ಇನ್ನೂ ಕೆಲವರು ಸರ್ಕಾರ ಉಚಿತ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿದ್ದು ಅಭಿವೃದ್ಧಿ ಮಾಡಲು ಹಣ ಇಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎನ್ನುವುದು ಬಿಜೆಪಿ ಬೆಂಬಲಿಗರ ವಾದವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಉಚಿತ ಭಾಗ್ಯಗಳನ್ನು ನೀಡುವುದಾಗಿ ಹೇಳಿದ್ದು, ಇದೀಗ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿ ಹಣವನ್ನು ಖರ್ಚು ಮಾಡುತ್ತಿದೆ. ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದ್ದು, ಅಭಿವೃದ್ಧಿಗೆ ಮೀಸಲಿಡುವ ಹಣವನ್ನು ಉಚಿತ ಭಾಗ್ಯಗಳಿಗೆ ಖರ್ಚು ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.












Click it and Unblock the Notifications