Rain Alert: ಮಳೆ.. ಮಳೆ.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಭರ್ಜರಿ ಮಳೆ!

ಮಳೆ.. ಮಳೆ.. ಭರ್ಜರಿ ಮಳೆ ಬೀಳುತ್ತಿರುವುದು ಭಾರಿ ನೆಮ್ಮದಿ ನೀಡುತ್ತಿದೆ. 2024ರ ಜನವರಿ, ಫೆಬ್ರವರಿ, ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಕನ್ನಡಿಗರು ಮಳೆ ಇಲ್ಲದೆ ನರಳಿದ್ದರು. ಹೀಗಿದ್ದಾಗ ಶುರುವಾದ ಮಳೆ ಭರ್ಜರಿಯಾಗಿ ಬಿದ್ದಿದೆ, ಹೀಗಾಗಿ ಪರಿಸ್ಥಿತಿ ಸುಧಾರಿಸಿದ್ದು ರೈತರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಸಮಯದಲ್ಲಿ ಮುಂಗಾರು ಮಳೆ ಆರಂಭಕ್ಕೂ ಮೊದಲು ಕರ್ನಾಟದ ಈ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಾದರೆ ಆ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯೂ ಇದೆಯಾ? ಮುಂದೆ ಓದಿ.

ಎಲ್ಲೆಲ್ಲೂ ಭಾರಿ ಮಳೆ ಶುರುವಾಗಿದ್ದು ಜನ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಅದ್ರಲ್ಲೂ ಬೇಸಿಗೆ ಸಮಯದಲ್ಲಿ ತೀವ್ರ ಸೆಕೆ & ಬಿಸಿ ಗಾಳಿಯ ಪರಿಣಾಮ ಜನ ತತ್ತರಿಸಿದ್ದರು. ಆದ್ರೆ ಇದೀಗ ಭರ್ಜರಿ ಮಳೆ ಸುರಿದ ಕಾರಣ ಜನರು ನಿಟ್ಟುಸಿರು ಬಿಟ್ಟಿದ್ದು ರೈತರು ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಭರ್ಜರಿ ಮಳೆ ಕಾರಣಕ್ಕೆ ಅವಘಡಗಳು ಕೂಡ ಈಗ ಸಂಭವಿಸಿವೆ. ಅದೆಲ್ಲವನ್ನೂ ಮೀರಿ ನಮ್ಮ ಜನ ಮಳೆಯ ಸ್ವಾಗತಿಸುತ್ತಿದ್ದಾರೆ.

Karnataka Will Receive Heavy To Normal Rain Before Monsoon Rain Starts On May Of 2024

ಮುಂದಿನ 24 ಗಂಟೆಯಲ್ಲಿ...

ಹಾಗೇ ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಕೂಡ ಶುರು ಆಗಲಿದ್ದು, ಅದಕ್ಕೂ ಮೊದಲು ಪೂರ್ವ ಮುಂಗಾರು ಮಳೆ ಕರ್ನಾಟಕದಲ್ಲಿ ಭರ್ಜರಿ ಅಬ್ಬರ ತೋರಲಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಶುರುವಾಗಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ತುರ್ತು ಪರಿಸ್ಥಿತಿ ಉಂಟಾಗಲಿದೆ ಎಂದು ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಭಾರಿ ಮಳೆ ಬೀಳಲಿರುವ ನಮ್ಮ ಕರ್ನಾಟಕದ ಆ ಜಿಲ್ಲೆಗಳು ಯಾವುವು? ಮುಂದೆ ಓದಿ.

ಈ ಜಿಲ್ಲೆಗಳಿಗೆ ಭಾರಿ ಮಳೆ!

ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಸೇರಿದಂತೆ ಕರ್ನಾಟಕದ ಮಲೆನಾಡು ಭಾಗ ಮತ್ತು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ. ಆ ಪ್ರಕಾರ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ & ಯಾದಗಿರಿ ಜಿಲ್ಲೆಗಳು ಸಾಮಾನ್ಯ ಮಳೆ ಪಡೆಯಲಿವೆ. ಹಾಗೇ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮರಗಳ ಕೆಳಗೆ ನಿಂತರೆ ಹುಷಾರ್!

ಮಳೆ ಜೋರಾಗಿ ಬರುವಾಗ ಮರಗಳೇ ನಿಮಗೆ ಮೊದಲ ಶತ್ರು ಆಗಿರುತ್ತವೆ. ಯಾಕಂದ್ರೆ ಈ ರೀತಿ ಭಾರಿ ಜೋರಾಗಿ ಮಳೆಯು ಬಂದು, ಗಾಳಿ ಬೀಸುವಾಗ ಯಾವ ಸಮಯದಲ್ಲಿ ಬೇಕಾದರೂ ಮರ ಬೀಳಬಹುದು. ಹೀಗಾಗಿ ಮಳೆ ಬರುವಾಗ ಯಾವುದೇ ಕಾರಣಕ್ಕೂ ಮರದ ಕೆಳಗಡೆ ನಿಲ್ಲುವುದಕ್ಕೆ ಹೋಗಬೇಡಿ. ಸಾಧ್ಯವಾದಷ್ಟೂ ಮರಗಳಿಂದ ದೂರ ಇರಿ. ಹತ್ತಿರ ಇರುವ ಬಸ್ ನಿಲ್ದಾಣದಲ್ಲಿ ಅಥವಾ ಕಟ್ಟಡಗಳಲ್ಲಿ ಆಶ್ರಯ ಪಡೆದರೆ ಉತ್ತಮ.

ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ

1) ಕೆಆರ್‌ಎಸ್ ​ಜಲಾಶಯ: 49.45 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂ ಇದೀಗ 12.27 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಹಾಗೇ ಕೆಆರ್‌ಎಸ್ ಜಲಾಶಯಕ್ಕೆ 2,893 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ ​ಭರ್ತಿ 11.13 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದೀಗ 537 ಕ್ಯುಸೆಕ್ ನೀರನ್ನು KRS ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ.

2) ಕಬಿನಿ ಜಲಾಶಯ: ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂ ಕರ್ನಾಟಕದ ಪ್ರಮುಖ ಡ್ಯಾಂ ಪೈಕಿ ಒಂದಾಗಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ ಕೇವಲ 7.55 ಟಿಎಂಸಿ ನೀರು ಸಂಗ್ರಹ ಇದ್ದು, 1034 ಕ್ಯುಸೆಕ್ ನೀರು ಒಳಗೆ ಹರಿದು ಬರುತ್ತಿದೆ. ಹೀಗೆ ಭಾರಿ ಮಳೆಯ ಹಿನ್ನೆಲೆ ಮೈಸೂರಿನ ಈ ಜಲಾಶಯಕ್ಕೆ ಭಾರಿ ನೀರು ಬರುತ್ತಿದ್ದು, 300 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

3) ಹೇಮಾವತಿ ಡ್ಯಾಂ: ಕಾವೇರಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಜಲಾಶಯ. ಇಲ್ಲಿ 37.10 ಟಿಎಂಸಿ ಸಾಮರ್ಥ್ಯ ಇದ್ದು, ಬರದ ಕಾರಣಕ್ಕೆ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಇದೀಗ 9.83 ಟಿಎಂಸಿ ಬಾಕಿ ಉಳಿದಿದೆ. ಆದರೆ ಕಳೆದ ವರ್ಷ ಇದೇ ವೇಳೆಗೆ ಬರೋಬ್ಬರಿ 17.17 ಟಿಎಂಸಿ ನೀರು ಹೇಮಾವತಿ ಡ್ಯಾಂನಲ್ಲಿ ಸಂಗ್ರಹ ಆಗಿತ್ತು. 769 ಕ್ಯುಸೆಕ್ ಒಳಹರಿವು ಇದ್ದು, 250 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ.

ಕರ್ನಾಟಕದ ಬೋರ್‌ಗಳಲ್ಲಿ ನೀರು ಖಾಲಿ!

ಅಂತರ್ಜಲ ಕುಸಿತ ದೊಡ್ಡ ಸಮಸ್ಯೆ ತಂದೊಡ್ಡಿದೆ, ಕರ್ನಾಟಕದ ಬಹುತೇಕ ಬೋರ್‌ಗಳಲ್ಲಿ ನೀರು ಖಾಲಿ ಆಗಿದೆ. ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರೀಗ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದ್ದು ಕೆರೆ ಮತ್ತು ತೊರೆಗಳು ನಿಧಾನವಾಗಿ ತುಂಬುತ್ತಿವೆ. ಈ ನೀರಿಂದ ಇನ್ನೂ ಒಂದು ಇಲ್ಲ 2 ತಿಂಗಳು ದಿನದೂಡಬಹುದು. ಆದರೆ ಜೂನ್ & ಜುಲೈಗೆ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಈಗಾಗಲೇ, ಕೇರಳಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು. ಇನ್ನೇನು ಕರ್ನಾಟಕದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+