ಮಳೆ.. ಮಳೆ.. ಕರ್ನಾಟಕದಲ್ಲಿ ಭಾರಿ ಭರ್ಜರಿ ಮಳೆ!

ಮಳೆ ಬೇಕು, ಮಳೆ ಚೆನ್ನಾಗಿ ಬಂದರೆ ಅಲ್ವಾ ಮನುಷ್ಯರು ನೆಮ್ಮದಿಯಾಗಿ ಜೀವನ ಮಾಡೋಕೆ ಆಗೋದು? ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಕಾರಣಕ್ಕೆ ಉತ್ತಮವಾಗಿ ಮಳೆ ಬೀಳುತ್ತದೆ. ಆದ್ರೆ ಮನುಷ್ಯ ಮಾಡಿಕೊಂಡ ತಪ್ಪುಗಳಿಗೆ ಮಳೆಯ ಮೋಡಗಳು ಕೂಡ ಕಳೆದ 4-5 ತಿಂಗಳು ನಾಪತ್ತೆ ಆಗಿದ್ದವು. ಪ್ರಕೃತಿ ಮೇಲೆ ಮನುಷ್ಯರು ದೌರ್ಜನ್ಯ ನಡೆಸುತ್ತಿರುವ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಹೀಗಿದ್ದಾಗಲೇ, ಮತ್ತೆ ಭರ್ಜರಿಯಾಗಿ ಮಳೆ ಆರಂಭವಾಗಿದೆ.

ಕೇವಲ 1 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ 2024ರಲ್ಲಿ ಒಂದೊಂದು ಹನಿ ನೀರಿಗೂ ಕಷ್ಟ ಆಗಿತ್ತು. ಕರ್ನಾಟಕದ ಯಾವುದೇ ಹಳ್ಳಿಗೆ ಹೋಗಿ, ಯಾವುದೇ ನಗರಕ್ಕೆ ಹೋಗಿ ಅಲ್ಲೆಲ್ಲಾ ನೀರಿಗಾಗಿ ದೊಡ್ಡ ಹೋರಾಟ ಶುರುವಾಗಿತ್ತು. ಜನ ಪ್ರತಿದಿನ ತಮ್ಮ ಕೆಲಸವನ್ನು ಬಿಟ್ಟು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೀಗಿದ್ದಾಗ ಮಳೆರಾಯ ಕರ್ನಾಟಕ ರಾಜ್ಯದಲ್ಲಿ, ಒಂದಷ್ಟು ಕರುಣೆ ತೋರಿಸಿ ಮಳೆ ಸುರಿಸಲು ಆರಂಭಿಸಿದ್ದ. ನೋಡ ನೋಡುತ್ತಲೇ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗು ಭರ್ಜರಿ ಗುಡುಗು ಸಹಿತ ಭಾರಿ ಮಳೆ ಬಂದಿತ್ತು. ಈ ಮೂಲಕ ನೀರಿನ ಸಂಕಷ್ಟ ಬಗೆಹರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಮತ್ತಷ್ಟು ಮಳೆ ಬೀಳುವ ಬಗ್ಗೆ ಮನ್ಸೂಚನೆ ನೀಡಲಾಗಿದೆ.

Karnataka Will Receive Heavy Rain For Next Several Days From 28 May 2024

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಈಗಿನ ವಾತಾವರಣದಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರವು ಸೇರಿ ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗೆ ಮಳೆಯ ಸಿಂಚನ ಆಗಲಿದೆ. ಆದರೂ ವಿಜಯನಗರ, ತುಮಕೂರು, ಮೈಸೂರು, ಮಂಡ್ಯ, ಕೋಲಾರ & ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆ ಸುರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಮುಂಗಾರು ಮಳೆ ಆಗಮನದ ಸಮಯದಲ್ಲಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ.

ಕರ್ನಾಟಕ ಈಗ ಕೂಲ್.. ಕೂಲ್..!

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಿಗೆ ಭಾರಿ ಮಳೆ ಬಂದಿದೆ. ನಾಳೆಯಿಂದ ಶುಕ್ರವಾರದ ತನಕ ಭಾರಿ ಮಳೆ ಆಗುತ್ತೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನ ಹಲವು ಏರಿಯಾಗೆ ಈಗಾಗಲೇ ಅಲರ್ಟ್ ನೀಡಲಾಗಿದೆ. ಭಾರಿ ಮಳೆ ಬೀಳುವ ಮುನ್ಸೂಚನೆ ಇದ್ದು, ಹವಾಮಾನ ವೈಪರಿತ್ಯದ ಪರಿಣಾಮ ಕರ್ನಾಟಕದ ವಾತಾವರಣ ಕೂಲ್ ಕೂಲ್ ಆಗ್ತಿದೆ. ಹೀಗಾಗಿ, ಬಿಸಿಲಿನಿಂದ ಬೆಂದು ಹೋದ ಜನರಿಗೆ ಈಗ ಮಳೆ ಆಗಮನದ ನಂತರ ಒಂದಷ್ಟು ಹಿತ ಎನಿಸುತ್ತಿದೆ.

ಈ ಕಾರಣಕ್ಕೆ ಬೆಂಗಳೂರು ಮತ್ತೆ ನ್ಯಾಚ್ಯುರಲ್ ಎಸಿ ಸಿಟಿ ಆಗಿ ಬದಲಾಗಿದೆ. ಮುಂದಿನ ದಿನಗಳಲ್ಲಿ, ವಾತಾವರಣ ಮತ್ತಷ್ಟು ಕೂಲ್ ಕೂಲ್ ಆಗುವ ನಿರೀಕ್ಷೆ ಇದೆ. ಹಾಗೇ ಕರ್ನಾಟಕದ ಇತರ ಜಿಲ್ಲೆ ಮತ್ತು ಪಟ್ಟಣಗಳು ಕೂಡ ತಂಪಾಗಿವೆ. ಮಳೆ ಬರದೇ ಹೋಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯ ಇತ್ತು ಎಂದು ತಜ್ಞರು ಹೇಳಿದ್ದರು. ಆದರೆ ಅದೇ ಸಮಯದಲ್ಲಿ ಕಳೆದ 1 ತಿಂಗಳಿಂದ ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.

ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ

1) ಕೆಆರ್‌ಎಸ್ ​ಜಲಾಶಯ: 49.45 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂ ಇದೀಗ 12.27 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಹಾಗೇ ಕೆಆರ್‌ಎಸ್ ಜಲಾಶಯಕ್ಕೆ 2,893 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ ​ಭರ್ತಿ 11.13 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದೀಗ 537 ಕ್ಯುಸೆಕ್ ನೀರನ್ನು KRS ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ.

2) ಕಬಿನಿ ಜಲಾಶಯ: ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂ ಕರ್ನಾಟಕದ ಪ್ರಮುಖ ಡ್ಯಾಂ ಪೈಕಿ ಒಂದಾಗಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ ಕೇವಲ 7.55 ಟಿಎಂಸಿ ನೀರು ಸಂಗ್ರಹ ಇದ್ದು, 1034 ಕ್ಯುಸೆಕ್ ನೀರು ಒಳಗೆ ಹರಿದು ಬರುತ್ತಿದೆ. ಹೀಗೆ ಭಾರಿ ಮಳೆಯ ಹಿನ್ನೆಲೆ ಮೈಸೂರಿನ ಈ ಜಲಾಶಯಕ್ಕೆ ಭಾರಿ ನೀರು ಬರುತ್ತಿದ್ದು, 300 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

3) ಹೇಮಾವತಿ ಡ್ಯಾಂ: ಕಾವೇರಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಜಲಾಶಯ. ಇಲ್ಲಿ 37.10 ಟಿಎಂಸಿ ಸಾಮರ್ಥ್ಯ ಇದ್ದು, ಬರದ ಕಾರಣಕ್ಕೆ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಇದೀಗ 9.83 ಟಿಎಂಸಿ ಬಾಕಿ ಉಳಿದಿದೆ. ಆದರೆ ಕಳೆದ ವರ್ಷ ಇದೇ ವೇಳೆಗೆ ಬರೋಬ್ಬರಿ 17.17 ಟಿಎಂಸಿ ನೀರು ಹೇಮಾವತಿ ಡ್ಯಾಂನಲ್ಲಿ ಸಂಗ್ರಹ ಆಗಿತ್ತು. 769 ಕ್ಯುಸೆಕ್ ಒಳಹರಿವು ಇದ್ದು, 250 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ.

4) ತುಂಗಭದ್ರಾ ಜಲಾಶಯ: ತುಂಗಭದ್ರಾ ಡ್ಯಾಂನಲ್ಲಿ ನೀರೆ ಇಲ್ಲ, ಹೀಗಾಗಿ ಡೆಡ್ ಸ್ಟೋರೆಜ್‌ಗೆ ಡ್ಯಾಂ ತಲುಪಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಕೇವಲ 3.35 ಟಿಎಂಸಿ ನೀರು ಸಂಗ್ರಹ ಉಳಿದಿದೆ. ಕಳೆದ ವರ್ಷ 4.30 ಟಿಎಂಸಿ ನೀರು ಸಂಗ್ರಹ ಇತ್ತು ಈ ವರ್ಷ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಒಳಹರಿವು ನಿಂತು ಹೋಗಿದೆ.

5) ಆಲಮಟ್ಟಿ ಡ್ಯಾಂ: ಅತಿದೊಡ್ಡ ಡ್ಯಾಂಗಳ ಪೈಕಿ ಆಲಮಟ್ಟಿ ಕೂಡ ಒಂದಾಗಿದೆ. ಆದರೆ ಆಲಮಟ್ಟಿ ಕೂಡ ಮಳೆ ಇಲ್ಲದೆ ಬರಿದಾಗಿದ್ದು ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ ಆಗಿದ್ರೂ 22.16 ಟಿಎಂಸಿ ನೀರು ಬಾಕಿ ಉಳಿದಿದೆ. ಕಳೆದ ವರ್ಷ ಈ ವೇಳೆಗೆ 21.90 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು. ಜಲಾಶಯದಿಂದ ಒಟ್ಟಾರೆ 3,530 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.

ಈ ಜಿಲ್ಲೆಗಳಿಗೆ ಭಾರಿ ಮಳೆ!

ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಸೇರಿದಂತೆ ಕರ್ನಾಟಕದ ಮಲೆನಾಡು ಭಾಗ ಮತ್ತು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ. ಆ ಪ್ರಕಾರ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ & ಯಾದಗಿರಿ ಜಿಲ್ಲೆಗಳು ಸಾಮಾನ್ಯ ಮಳೆ ಪಡೆಯಲಿವೆ. ಹಾಗೇ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದ ಬೋರ್‌ಗಳಲ್ಲಿ ನೀರು ಖಾಲಿ!

ಅಂತರ್ಜಲ ಕುಸಿತ ದೊಡ್ಡ ಸಮಸ್ಯೆ ತಂದೊಡ್ಡಿದೆ, ಕರ್ನಾಟಕದ ಬಹುತೇಕ ಬೋರ್‌ಗಳಲ್ಲಿ ನೀರು ಖಾಲಿ ಆಗಿದೆ. ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರೀಗ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದ್ದು ಕೆರೆ ಮತ್ತು ತೊರೆಗಳು ನಿಧಾನವಾಗಿ ತುಂಬುತ್ತಿವೆ. ಈ ನೀರಿಂದ ಇನ್ನೂ ಒಂದು ಇಲ್ಲ 2 ತಿಂಗಳು ದಿನದೂಡಬಹುದು. ಆದರೆ ಜೂನ್ & ಜುಲೈಗೆ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಈಗಾಗಲೇ, ಕೇರಳಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು. ಇನ್ನೇನು ಕರ್ನಾಟಕದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+