ಸಾರ್ ಪ್ಲಾಸ್ಟಿಕ್ ಕವರ್ ಇಲ್ಲಾ, ಪೇಪರ್‌ನಲ್ಲೇ ಸುತ್ತಿಕೊಡಲಾ?

Written By:
Subscribe to Oneindia Kannada

ಬೆಂಗಳೂರು, ಮೇ 12: 'ಎಂದಿನಂತೆ ಬೆಳಗ್ಗೆ ಕಚೇರಿಗೆ ಹೊರಟಿದ್ದೆ. ಮಧ್ಯ ದಾರಿಯಲ್ಲಿ ಬೈಕ್ ನಿಲ್ಲಿಸಿ ನಾಲ್ಕು ಇಡ್ಲಿ ಪಾರ್ಸಲ್ ಎಂದೆ... 'ಸಾರ್ ಪ್ಲಾಸ್ಟಿಕ್ ಕವರ್ ಇಲ್ಲಾ. ಪೇಪರ್ ನಲ್ಲೇ ಸುತ್ತಿಕೊಡಲಾ? ಎಂಬ ಧ್ವನಿ ಅತ್ತ ಕಡೆಯಿಂದ ಬಂತು.

ನನ್ನ ಬಳಿ ಬಟ್ಟೆ ಬ್ಯಾಗ್ ಇಲ್ಲ, ಅಲ್ಲೇ ತಿನ್ನಲು ಹಸಿವಾಗಿಲ್ಲ, ಪಾರ್ಸಲ್ ನೀಡಲು ಆತನ ಬಳಿ ಪ್ಲಾಸ್ಟಿಕ್ ಕವರ್ ಇಲ್ಲ...ಒಂದು ಕ್ಷಣ ಸರ್ಕಾರದ ಮೇಲೆ ಸಿಟ್ಟು ಬಂದರೂ ಪರಿಸರ ಸಂರಕ್ಷಣೆ ನೆನೆಸಿಕೊಂಡು ಸುಮ್ಮನಾದೆ. ಆಮೇಲೆ ಅನಿವಾರ್ಯವಾಗಿ ಬೆಳಗಿನ ತಿಂಡಿ ಅಲ್ಲೇ ತಿಂದು ಬಂದೆ.[ಬೆಂಗಳೂರಿಗರೇ, ಪ್ಲಾಸ್ಟಿಕ್ ಕವರ್ ಕೊಂಡೊಯ್ದರೂ ದಂಡ ಕಟ್ಬೇಕು!]

plastic

ಹೌದು ರಾಜ್ಯ ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಬಿಬಿಎಂಪಿ ಸಹ ಅನುಷ್ಠಾನಕ್ಕೆ ಮುಂದಾಗಿದ್ದು ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ತೆರಳಿ ಬಳಕೆ ಮಾಡುತ್ತಿದ್ದವರಿಗೆ ದಂಡವನ್ನು ಹಾಕಿದೆ.

ಪ್ಲಾಸ್ಟಿಕ್ ಕವರ್ ನೀಡುವ ಅಂಗಡಿಯವನಿಗೆ ಮಾತ್ರ ಅಲ್ಲ ಕವರ್ ತೆಗೆದುಕೊಂಡು ಹೋದರೆ ನಿಮಗೂ ದಂಡ ಹಾಕುತ್ತೇನೆ ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ. ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಹೋದರೆ ಕಿಸೆಯಲ್ಲಿ 500 ರು. ದಂಡ ಕಟ್ಟಲು ರೆಡಿ ಇಟ್ಟುಕೊಂಡಿರಬೇಕಾಗುತ್ತದೆ.

ಹೌದು ನಾವೆಲ್ಲ ಪ್ಲಾಸ್ಟಿಕ್ ಬಳಕೆಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ಲಾಸ್ಟಿಕ್ ಎಂಬ ಪೆಡಂಭೂತ ನಮ್ಮನ್ನು ಹಿಡಿದುಕೊಂಡು ಬಿಟ್ಟಿದೆ. ಇದನ್ನು ಬಿಟ್ಟು ಹೊರಕ್ಕೆ ಬರುವುದು ಅನಿವಾರ್ಯ.[ಪ್ಲಾಸ್ಟಿಕ್ ನಿಷೇಧ ಅಧಿಕೃತ, ನಿಯಮ ಮುರಿದರೆ ಜೈಲೂಟ]

ಹೀಗೆ ಮಾಡಿದರೆ ಹೇಗೆ?
* ತರಕಾರಿ ತರಲು ಮಾರುಕಟ್ಟೆಗೆ ತೆರಳುವಾಗ ಬಟ್ಟೆ ಬ್ಯಾಗ್ ಕೈಯಲ್ಲಿ ಹಿಡಿದುಕೊಂಡು ಹೋದರೆ ಅರ್ಧ ಸಮಸ್ಯೆ ಮುಗಿದಂತೆಯೇ.
* ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿರುವ ಸರ್ಕಾರ ಉತ್ಪಾದನೆಯ ಮೇಲೆ ಅಂಕುಶ ಹೇರಬೇಕು. ಹೆಚ್ಚುವರಿ ತೆರಿಗೆ ವಿಧಿಸಬೇಕು.
* ಕಸ ವಿಲೇವಾರಿಗೆ ಪ್ಲಾಸ್ಟಿಕ್ ಕವರ್ ಬದಲಾಗಿ ರೊಟ್ಟಿನ ಬಾಕ್ಸ್ ಬಳಕೆ ಮಾಡಿ.[ಬಿಬಿಎಂಪಿ ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಹೇಗೆ?]
* ಕೊಂಚ ಕಿರಿಕಿರಿಯಾದರೂ ಪರವಾಗಿಲ್ಲ ಮನೆಯಲ್ಲಿ ಒಣ ಕಸ, ಹಸಿ ಕಸ policy ಪಾಲಿಸಿ.
* ಮಿನರಲ್ ವಾಟರ್ ಬಾಟಲ್ ಗಳ ಬಳಕೆ ಕಡಿಮೆ ಮಾಡಿ
* ಮನೆಯಿಂದ ಕಚೇರಿಗೋ ಅಥವಾ ಇನ್ನೆಲ್ಲಿಗೋ ಹೊರಟಾಗ ಬ್ಯಾಗ್ ನಲ್ಲಿ ಅಥವಾ ಬೈಕ್ ಬಾಕ್ಸ್ ನಲ್ಲಿ ಒಂದು ಬಟ್ಟೆ ಚೀಲ ಇಟ್ಟುಕೊಳ್ಳುವುದು ಬುದ್ಧಿವಂತಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Government issued strict directions about plastic ban. The Bruhat Bengaluru Mahanagara Palike (BBMP) has started fining people who use plastic Rs 500 and repeat offenders can expect to be relieved of Rs 1,000. Here is the experience of a common man about Plastic ban. Although what is the solution for this problem? Here is a look.
Please Wait while comments are loading...