Karnataka Weather: ವರ್ಷಾಂತ್ಯದ 5 ದಿನ ಈ ಜಿಲ್ಲೆಗಳಲ್ಲಿ ವಿಪರೀತ ಚಳಿ, ದಟ್ಟ ಮಂಜು ಮುನ್ಸೂಚನೆ

ಬೆಂಗಳೂರು: ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುತ್ತಿದ್ದು, ವರ್ಷಾಂತ್ಯದ ಮುಂದಿನ ಐದು ದಿನ (ಡಿಸೆಂಬರ್ 31ರವರೆಗೆ) ಒಣಹವೆ ಇರಲಿದೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ವ್ಯಾಪಕವಾಗಿ ಕುಸಿದಿದ್ದು, ಅಲ್ಲೆಲ್ಲ ಮೈಕೊರೆವ ಚಳಿ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಮತ್ತು ವಿಜ್ಞಾನಿ ಡಾ.ಸಿ.ಎಸ್.ಪಾಟೀಲ್ ಅವರು ತಿಳಿಸಿದರು.

ರಾಜ್ಯದಲ್ಲಿ ಚಳಿ, ಒಣಹವೆ ಜೊತೆಗೆ ದಟ್ಟ ಮಂಜು ಈ ಮೂರು ವಾತಾವರಣ ಏಕಕಾಲಕ್ಕೆ ಕಂಡು ಬರುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಳಗ್ಗೆ ದಟ್ಟ ಮಂಜು ಕಂಡು ಬರಲಿದ್ದು, ವಾಹನಗಳು, ಬಸ್, ಕಾರು ಹಾಗೂ ವಿಮಾನಗಳ ಹಾರಾಟಕ್ಕೆ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಸವಾರರು ಜಾಗರೂಕರಾಗಿ ವಾಹನ ಚಲಾಯಿಸಬೇಕಿದೆ ಎಂದು ಎಚ್ಚರಿಸಿದರು.

Karnataka Weather Temperature Drop Interior Districts Create Dense fog- Cold Wave Next 5 days

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಧಾರವಾಡ, ಹಾವೇರಿ, ಬೆಳಗಾವಿ, ಗದಗ ಜಿಲ್ಲೆಗಳ ಜನರು ತೀವ್ರ ಚಳಿಗೆ ತತ್ತರಿಸಿದ್ದಾರೆ. ಮುಂದಿನ ಐದು ದಿನ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಮತ್ತು ಕರಾವಳಿ ಜಿಲ್ಲೆಗಳಲ್ಲಿ 19 ರಿಂದ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸಂಜೆಯಿಂದ ಬೆಳಗ್ಗೆವರೆಗೆ ಹೆಚ್ಚಿನ ಚಳಿ ಅನುಭವವಾಗುತ್ತಿದೆ. ರಾತ್ರಿ ಚಳಿಯ ಪ್ರಮಾಣ ಗರಿಷ್ಠ ಮಟ್ಟದಲ್ಲಿರುತ್ತದೆ. ಹಲಗು ಹೊತ್ತು ಗರಿಷ್ಠ ತಾಪಮಾನ ಕಾರಣಕ್ಕೆ ಹೆಚ್ಚಿನ ಬಿಸಿಲು ಕಂಡು ಬರುತ್ತಿದೆ. ನೀಲಿ ಸ್ಪಷ್ಟ ಆಕಾಶವಿದ್ದು, ಸದ್ಯಕ್ಕೆ ಇದೇ ವಾತಾವರಣ ಮುಂದುವರಿಯಲಿದೆ. ವರ್ಷಾಂತ್ಯದ ದಿನಗಳು ಜನರಿಗೆ ಬಿಸಿ ಮತ್ತು ಚಳಿ ದಿನಗಳಾಗಿವೆ.

ರಾಜ್ಯದ ಅಧಿಕ ಚಳಿಯ ಜಿಲ್ಲೆಗಳು ಯಾವುವು?

ಹಾಸನದಲ್ಲಿ ಕನಿಷ್ಠ ತಾಪಮಾನ 8.1 ಡಿಗ್ರಿ ಸೆಲ್ಸಿಯಸ್ (ಮೊನ್ನೆ 7 ಡಿ.ಸಿ. ಇತ್ತು), ಬೀದರ್ 9.2 ಡಿಗ್ರಿ ಸೆಲ್ಸಿಯಸ್, ರಾಯಚೂರು 10 ಡಿಗ್ರಿ ಸೆಲ್ಸಿಯಸ್, ಧಾರವಾಡ 10 ಡಿಗ್ರಿ ಸೆಲ್ಸಿಯಸ್, ವಿಜಯಪುರ 10 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ 10.6 ಡಿಗ್ರಿ ಸೆಲ್ಸಿಯಸ್, ಗದಗ 11 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 11.5 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 12.2 ಡಿಗ್ರಿ ಸೆಲ್ಸಿಯಸ್, ಮಂಡ್ಯ 12.6 ಡಿಗ್ರಿ ಸೆಲ್ಸಿಯಸ್, ಹಾವೇರಿ 12.4 ಡಿಗ್ರಿ ಸೆಲ್ಸಿಯಸ್, ಮೈಸೂರು 13.2 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 13. 6 ಡಿಗ್ರಿ ಸೆಲ್ಸಿಯಸ್, ಕಲಬುರಗಿ 13 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಕೆಐಎಎಲ್ ನಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಬೆಂಗಳೂರು ಹವಾಮಾನ ವರದಿ

ರಾಜಧಾನಿ ಬೆಂಗಳೂರಲ್ಲಿ ಮುಂದಿನ ಏಳು ದಿನಗಳರೆಗೆ ಕನಿಷ್ಠ ತಾಪಮಾನ 13 ರಿಂದ 15 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಹಗಲು ಶುಷ್ಕ ವಾತಾವರಣ ಕಂಡು ಬರಲಿದೆ. ಸಂಜೆ ಮತ್ತು ಬೆಳಗ್ಗೆ ಹೆಚ್ಚಿನ ಚಳಿ ಸಂಭವವಿದೆ. ಕೆಲವೆಡೆ ಬೆಳಗ್ಗೆ ದಟ್ಟ ಮಂಜು ಬೀಳಬಹುದು. ಗರಿಷ್ಠ ತಾಪಮಾನದಲ್ಲಿ (26-27ಡಿಗ್ರಿ ಸೆಲ್ಸಿಯಸ್) ಹೆಚ್ಚಿನ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+