ಮುಂಗಾರು ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು, ಮೇ 09: ಕರ್ನಾಟಕದಲ್ಲಿ ಈ ವರ್ಷ ವಾಡಿಕೆಗೂ ಮುನ್ನವೇ ಬಿಸಿಲ ಬೇಗೆಯಿಂದ ಜನರನ್ನು ಕಂಗೆಡಿಸಿದೆ. ಆರಂಭದಿಂದಲೂ ಅಂದರೆ, ಫೆಬ್ರವರಿ ಮಧ್ಯಭಾಗದಲ್ಲೇ ಬೀರು ಬೇಸಿಗೆ ಅನುಭವ ಕರುನಾಡ ಜನರಿಗೆ ಆಗುತ್ತಿದೆ. ಈಗಲೇ ಇಷ್ಟೊಂದು ಬಿಸಿಲು ಅಂದ್ರೇ ಈ ವರ್ಷ ಸರಿಯಾಗಿ ಮಳೆ ಬರುತ್ತೋ ಇಲ್ಲವೋ ಎಂದು ರಾಜ್ಯದ ರೈತರು ಹಾಗೂ ಜನರನ್ನ ತೀವ್ರ ಆತಂಕ ಹುಟ್ಟುವಂತೆ ಮಾಡಿದೆ. ಈ ಫೆಬ್ರವರಿಯಲ್ಲೇ ವಾಡಿಕೆಗಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್‌ ಅಧಿಕ ಉಷ್ಣಾಂಶ ರಾಜ್ಯದಲ್ಲಿ ದಾಖಲಾಗಿದೆ

ಕಳೆದ ವರ್ಷಕ್ಕಿಂತಲೂ ಈ ವರ್ಷ ಅಧಿಕ ಬಿಸಿಲು, ಮಳೆ, ಚಳಿ ಇರುತ್ತದೆ ಎಂಬ ಮಾಹಿತಿ ಇದೆ. ಭಾರತಕ್ಕೆ ಈ ವರ್ಷ ಮುಂಗಾರು ಮಳೆ ಎಂಟ್ರಿಯಾಗಲಿದ್ದು, ಈ ಕಾರಣಕ್ಕೆ ಮುಂಗಾರು ಕೂಡ ಕಳೆದ ಬಾರಿಗಿಂತ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ.ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದ್ದು, ಮೇ 10 & ಮೇ 12 ರಿಂದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Karnataka weather good news for those waiting for monsoon rains

ಇನ್ನೂ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ಅಲ್ಲಲ್ಲಿ ವ್ಯಾಪಕವಾಗಿ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ರಾಜ್ಯದ ಕೆಲ ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಬಿಸಿಲಿನ ತಾಪದಿಂದಾಗಿ ಕರುನಾಡ ಜನತೆ ಹಾಗೂ ರೈತರು ತಳಮಳವನ್ನ ಅನುಭವಿಸುವಂತಾಗಿದೆ. ಆದರೆ ಕರ್ನಾಟಕದಲ್ಲಿ ಮುಂಗಾರು ಮಳೆಯು ಬೇಗನೇ ಪ್ರಾರಂಭವಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರೈತರಿಗೆ ಸಂತಸ ಪಡುವಂತಾಗಿದೆ.

ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಈ ಬಾರಿ ವಾಡಿಕೆಗಿಂದ ಹೆಚ್ಚು ಮಳೆಯಾಗಲಿದೆ. ಅಲ್ಲದೇ ಕೇರಳದ ಮೂಲಕ ಮುಂಗಾರು ಮಳೆ ಈ ಬಾರಿ ವಾಡಿಕೆಗಿಂದ ಮುಂಚಿತವಾಗಿ ಪ್ರದೇಶಿಸಬಹುದು ಎಂದು ತಿಳಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿತ್ತು. ಇದೀಗ ಮೇ ಕೊನೆಯಲ್ಲಿ ಅಥವಾ ಜೂನ್‌ ಆರಂಭದಲ್ಲಿ ಕೇರಳ ಮತ್ತು ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಬೆಂಗಳೂರು ಭಾಗಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನೂ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ. ಜೂನ್-ಸೆಪ್ಟೆಂಬರ್‌ ಅವಧಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಉತ್ತಮ ಮಳೆಯಾಗುವ ಹಿನ್ನೆಲೆ ರೈತರಿಗೆ ಹಾಗೂ ನೀರಾವರಿ ಯೋಜನೆಗಳಿಗೆ ಶುಭ ಸುದ್ದಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+