ಉಡುಪಿಯಲ್ಲಿ ಸತತ ಮಳೆ,ರಾಜ್ಯದ ಹವಾಮಾನ ಮುನ್ಸೂಚನೆ ಏನಿದೆ?

ಕರ್ನಾಟಕದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವರಾತ್ರಿ ನಂತರ ಆರಂಭವಾದ ಮಳೆ ಮಾರುತಗಳು ಇನ್ನೆರಡು ದಿನಗಳ ಕಾಲ ಕರ್ನಾಟಕ ಕರಾವಳಿ ಭಾಗದಲ್ಲಿ ಭಾಗಶಃ ಮಳೆ ಸುರಿಯಲು ಕಾರಣವಾಗಲಿದೆ ಎಂದು ಇಲಾಖೆ ಹೇಳಿದೆ.

ಉತ್ತರ ಒಳನಾಡು ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಒಣ ಹವೆ ಮುಂದುವರೆಯಲಿದೆ. ಎಲ್ಲೂ ಕೂಡಾ ಭಾರಿ ಮಳೆಯ ಭೀತಿ ಇಲ್ಲ, ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ.

ತಾಪಮಾನ ವಿವರ:
ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಜೋರಾಗಲಿದೆ. ಮಾರ್ಚ್ 14ರಂದು ಬೆಂಗಳೂರು ನಗರದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Karnataka Weather Forecast: Isolated very light rains Coastal Karnataka, Malnad region

ಮಂಗಳೂರು: ಗರಿಷ್ಠ: 34 ಡಿಗ್ರಿ ಸೆಲ್ಸಿಯಸ್; ಕನಿಷ್ಠ: 22 ಡಿಗ್ರಿ ಸೆಲ್ಸಿಯಸ್
ದಾವಣಗೆರೆ: ಗರಿಷ್ಠ: 36 ಡಿಗ್ರಿ ಸೆಲ್ಸಿಯಸ್; ಕನಿಷ್ಠ: 17 ಡಿಗ್ರಿ ಸೆಲ್ಸಿಯಸ್
ಹುಬ್ಬಳ್ಳಿ: ಗರಿಷ್ಠ: 35 ಡಿಗ್ರಿ ಸೆಲ್ಸಿಯಸ್; ಕನಿಷ್ಠ: 17 ಡಿಗ್ರಿ ಸೆಲ್ಸಿಯಸ್
ಬೀದರ್: ಗರಿಷ್ಠ: 35 ಡಿಗ್ರಿ ಸೆಲ್ಸಿಯಸ್; ಕನಿಷ್ಠ: 20 ಡಿಗ್ರಿ ಸೆಲ್ಸಿಯಸ್
ಕಲಬುರಗಿ: ಗರಿಷ್ಠ: 36 ಡಿಗ್ರಿ ಸೆಲ್ಸಿಯಸ್; ಕನಿಷ್ಠ: 18 ಡಿಗ್ರಿ ಸೆಲ್ಸಿಯಸ್

ಕರ್ನಾಟಕ ನೈಸರ್ಗಿಕ ವಿಕೋಪ ನಿಯಂತಣ ಸಂಸ್ಥೆ ನೀಡುವ ಕರ್ನಾಟಕದ ಮಳೆ ನಕ್ಷೆ ಪ್ರಕರಣ ಮಾರ್ಚ್ 11, 12ರಂದು ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ. ಮಾರ್ಚ್12ರಂದು ಅತ್ಯಧಿಕ 63ಮಿಮೀ ರಷ್ಟು ಮಳೆ ಕುಂದಾಪುರದ ತ್ರಾಸಿಯಲ್ಲಿ ದಾಖಲಾಗಿದೆ. ಮಾರ್ಚ್ 11ರಂದು ಕಾರ್ಕಳದ ಮರ್ಣೆ ಎಂಬಲ್ಲಿ 24.5 ಮಿಮೀ ರಷ್ಟು ಮಳೆ ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+