ಉತ್ತರಾಖಂಡ ಒಂದೇ ಅಲ್ಲ ಉತ್ತರ ಕನ್ನಡವು ಸುಡ್ತಿದೆ!

ಶಿರಸಿ, ಮೇ 05: ದೂರದ ಉತ್ತರಾಖಂಡದ ಅರಣ್ಯಕ್ಕೆ ಕಾಡ್ಗಿಚ್ಚು ತಗುಲಿದಾಗ ಮರುಕ ಪಟ್ಟಿದ್ದರಲ್ಲಿ ತಪ್ಪೇನು ಇಲ್ಲ. ಆದರೆ ನಮ್ಮ ರಾಜ್ಯದ ಉತ್ತರ ಕನ್ನಡ ಹೊತ್ತಿ ಉರಿಯುತ್ತಿರುವುದು ಬಹಳಷ್ಟು ಜನಕ್ಕೆ ಗೊತ್ತೆ ಇಲ್ಲ.

ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೂ ಕಾಡ್ಗಿಚ್ಚಿನ ಬಿಸಿ ತಟ್ಟಿದೆ. ಬೆಂಕಿ ಅರಣ್ಯವನ್ನು ಸುಟ್ಟುಹಾಕುತ್ತಿದೆ. ಮೇ 4ರ ವರೆಗಿನ ದಾಖಲೆಗಳು ಹೇಳುವಂತೆ ಉತ್ತರ ಕನ್ನಡದಲ್ಲಿ 83 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ. ಅರಣ್ಯ ಇಲಾಖೆ ಹೇಳುವಂತೆ ಪ್ರತಿವರ್ಷ ಸರಾಸರಿ 75 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗುತ್ತವೆ.['ಸುಡುತ್ತಿರುವ ಪಶ್ಚಿಮ ಘಟ್ಟ ಮೊದಲು ಉಳಿಸಿಕೊಳ್ಳಿ']

karnataka

ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಕಾಡ್ಗಿಚ್ಚಿನ ಆವಾಂತರಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಜನರಲ್ಲಿ ಜಾಗೃತಿ ಕಡಿಮೆ ಇರುವುದು ಮತ್ತು ಅರಣ್ಯ ಇಲಾಖೆಯ ನಿರ್ಲಜ್ಜತನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಡ್ಡಗಾಲಾಗಿ ಪರಿಣಮಿಸಿದೆ ಎಂದು ಹೇಳುತ್ತಾರೆ.

ಬೆಂಕಿಗೆ ಕಾರಣಗಳು ಏನು?
* ಬೇಸಿಗೆ ಧಗೆ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣ
* ಮರ ಕಡಿತಲೆ ಮತ್ತು ವಿವಿಧ ಕೆಲಸಕ್ಕೆ ಅರಣ್ಯಕ್ಕೆ ತೆರಳುವ ಜನರು ಸೇದಿ ಬಿಸಾಡುವ ಸಿಗರೇಟ್ ಎಕರೆಗಟ್ಟಲೇ ಅರಣ್ಯ ಬಲಿ ಪಡೆಯುತ್ತಿದೆ ಎಂಬುದನ್ನು ನಂಬಲೇಬೇಕು. [ಉತ್ತರಾಖಂಡ ಕಾಡ್ಗಿಚ್ಚಿಗೆ ಮೂಲ ಕಾರಣ ಯಾರು?]
* ಶಿರಸಿ, ಕಾರವಾರ, ಭಟ್ಕಳದಲ್ಲಿ ಹೆಚ್ಚಿನ ಪ್ರಕರಣ ವರದಿಯಾಗಿವೆ.
* ಮುಂಡಗೋಡ್ ಮತ್ತು ಹಳಿಯಾಳ ತಾಲೂಕಿನ ಅರಣ್ಯ ಪ್ರದೇಶಗಳಲ್ಲೂ ಬೆಂಕಿ ಕಾಣಿಸಿಕೊಂಡ ಉದಾಹರಣೆಗಳಿವೆ.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]
* ಸಾಂದರ್ಭಿಕವಾಗಿ ಬೀಳುತ್ತಿದ್ದ ಮಳೆ ಇಂಥ ಕಾಡ್ಗಿಚ್ಚನ್ನು ನಿಸರ್ಗದತ್ತವಾಗಿ ನಿಯಂತ್ರಣ ಮಾಡುತ್ತಿತ್ತು. ಆದರೆ ಈ ವರ್ಷ ಬೇಸಿಗೆ ಮಧ್ಯದಲ್ಲಿ ಮಳೆಯಾಗದೇ ಇರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+