ಕರ್ನಾಟಕ ಸ್ಥಳೀಯ ಸಂಸ್ಥೆಗಳ ಫಲಿತಾಂಶ; ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಮುಖಭಂಗ

ಬೆಂಗಳೂರು, ಡಿಸೆಂಬರ್ 30: ರಾಜ್ಯದಲ್ಲಿ ಡಿಸೆಂಬರ್ 27ರಂದು ನಡೆದಿದ್ದ 19 ಜಿಲ್ಲೆಗಳ ಐದು ನಗರಸಭೆ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಈ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಆಡಳಿತರೂಢ ಬಿಜೆಪಿಗೆ ಈ ಫಲಿತಾಂಶದಿಂದ ಮುಖಭಂಗವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿಗೆ ತವರು ಕ್ಷೇತ್ರದಲ್ಲಿ ನಿರಾಸೆ
ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ ಬರುವುದು ಖಚಿತವಾಗಿದೆ. ಬಂಕಾಪುರ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್- 14, ಬಿಜೆಪಿ- 7, ಪಕ್ಷೇತರ- 2 ಸ್ಥಾನ ಪಡೆದಿದೆ.

Karnataka Urban Local Body Election result 2021: Congress Leading; Set Back To BJP and JDS

ಅದೇ ರೀತಿ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್‌- 11, ಬಿಜೆಪಿ- 6, ಪಕ್ಷೇತರ- 1 ಸ್ಥಾನ ಲಭಿಸಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಏರಲಿದೆ.

ಸಚಿವ ಬಿ. ಶ್ರೀರಾಮುಲುಗೆ ಮುಖಭಂಗ
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಗದ್ದಿದ್ದು, ಉಸ್ತುವಾರಿ ಸಚಿವ ಬಿ. ಶ್ರೀರಾಮುಲುಗೆ ಸ್ವಕ್ಷೇತ್ರದಲ್ಲಿ ಭಾರೀ ಮುಖಭಂಗವಾಗಿದೆ. ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆ ಕೈ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಚಳ್ಳಕೆರೆ ನಗರದಲ್ಲಿ ಕಾಂಗ್ರೆಸ್ ಮುಖಂಡ ಯೋಗೀಶ್ ಬಾಬು ನೇತೃತ್ವದಲ್ಲಿ ಮೆರವಣಿಗೆ ಮಾಡಲಾಯಿತು. ಒಟ್ಟು 16 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 11 ವಾರ್ಡ್ ಗೆದ್ದು ಬೀಗಿದೆ. ಬಿಜೆಪಿ ಕೇವಲ 2 ವಾರ್ಡ್‌ಗಳಲ್ಲಿ ಗೆದ್ದಿದ್ದು, 3 ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಗಳ ಜಯಭೇರಿ ಬಾರಿಸಿದ್ದಾರೆ.

ಸದ್ಯದ ಫಲಿತಾಂಶ ಏನಿದೆ?
ರಾಜ್ಯದ ಒಟ್ಟು 19 ಪುರಸಭೆಗಳ ಪೈಕಿ ಕಾಂಗ್ರೆಸ್- 8, ಬಿಜೆಪಿ- 6, ಜೆಡಿಎಸ್- 1 (ಬಿಡದಿ) ಮತ್ತು 4 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

ಇನ್ನು ಒಟ್ಟು 34 ಪಟ್ಟಣ ಪಂಚಾಯತ್‌ಗಳ ಪೈಕಿ ಕಾಂಗ್ರೆಸ್- 13, ಬಿಜೆಪಿ- 5, ಇತರರು- 5 ಪುರಸಭೆಗಳಲ್ಲಿ ಅಧಿಕಾರಕ್ಕೆ ಬಂದಿದ್ದರೆ, 10 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.

ಅದೇ ರೀತಿ 5 ನಗರಸಭೆಗಳ ಚುನಾವಣಾ ಫಲಿತಾಂಶಗಳ ಪೈಕಿ ಬಿಜೆಪಿ- 3 (ಚಿಕ್ಕಮಗಳೂರು, ಗದಗ-ಬೆಟಗೇರಿ, ಹೆಬ್ಬಗೋಡಿ), ಅತಂತ್ರ- 2 (ಶಿರಾ, ಹೊಸಪೇಟೆ)

Recommended Video

      ಟೀಂ‌ ಇಂಡಿಯಾಗೆ ಅಂದು‌ ಗೇಲಿ‌ಮಾಡಿದ್ದಕ್ಕೆ ಇಂದು ಮಾನ‌ಕಳೆದುಕೊಂಡ ಮೈಕೆಲ್ ವಾನ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+