ರಾಜ್ಯಕ್ಕೆ ಹೊಸ 33 ತಾಲೂಕುಗಳ ಸೇರ್ಪಡೆ: ಕಾಗೋಡು ತಿಮ್ಮಪ್ಪ

Posted By:
Subscribe to Oneindia Kannada

ಬೆಂಗಳೂರು, ಜನವರಿ 09: ಕರ್ನಾಟಕದ ರಾಜ್ಯಕ್ಕೆ ಹೊಸದಾಗಿ 33 ತಾಲೂಕುಗಳು ಸೇರ್ಪಡೆಯಾಗಲು ಸಿದ್ಧವಾಗಿವೆ. ತಾಲೂಕುಗಳನ್ನು ರಚನೆ ಮಾಡಲು ಉದ್ದೇಶಿಸಲಾಗಿದ್ದು, ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ತಿಳಿಸಿದರು.

ಹೊಸ ತಾಲ್ಲೂಕುಗಳ ರಚನೆ ವಿಚಾರ ನೆನೆಗುದ್ದಿಗೆ ಬಿದ್ದಿತ್ತು. ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಪ್ರತಿ ತಾಲ್ಲೂಕಿಗೆ ಮೂಲ ಸೌಕರ್ಯ ಕಲ್ಪಿಸಲು 100 ಕೋಟಿ ರೂ. ವೆಚ್ಚವಾಗುತ್ತದೆ. ಸುಮಾರು 3300 ಕೋಟಿ ರೂ. ಸರ್ಕಾರದ ಮೇಲೆ ಹೊರಬೀಳಲಿದೆ. [43 ಹೊಸ ತಾಲೂಕುಗಳ ಪಟ್ಟಿ]

Karnataka to get 33 more Taluks : Minister Kagodu Thimmappa

ಮೊದಲು ಮೂಲಸೌಕರ್ಯ ಕಲ್ಪಿಸಿದ ನಂತರ ಹೊಸ ತಾಲೂಕುಗಳನ್ನು ಘೋಷಣೆ ಮಾಡಲು ಉದ್ದೇಶಿಸಲಾಗಿದೆ.ರಾಜ್ಯದಲ್ಲಿ ಹೊಸದಾಗಿ 33 ತಾಲೂಕು ರಚನೆಗೆ ಸರ್ಕಾರ ಬದ್ಧವಾಗಿದ್ದು, ಹಣಕಾಸು ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಗದೀಶ್ ಶೆಟ್ಟರ್ ಅವರ ಸರ್ಕಾರ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಅಷ್ಟೇ ಸಂಖ್ಯೆಯ ತಾಲೂಕುಗಳ ಉದಯಕ್ಕೆ ನಾಂದಿ ಹಾಡಿತ್ತು. ಈಗ ಮತ್ತೊಮ್ಮೆ ಹೊಸ ತಾಲೂಕು ರಚನೆ ಪ್ರಸ್ತಾವನೆ ಕೇಳಿ ಬಂದಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka government has initiated steps to create 33 new taluks in the state and it will be announced in the upcoming budget said Kagodu Thimmappa, minister for revenue said
Please Wait while comments are loading...