• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಟಿಇಟಿ ಫಲಿತಾಂಶ ಪರಿಶೀಲಿಸಿ: 45,074 ಅಭ್ಯರ್ಥಿಗಳು ಪಾಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2021ರ ಫಲಿತಾಂಶವನ್ನು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಕರ್ನಾಟಕದ ವಿವಿಧ ತರಗತಿಗಳಲ್ಲಿ ಬೋಧಿಸುವ ಶಿಕ್ಷಣಕರು ಸೇರಿದಂತೆ ಒಟ್ಟು ಪತ್ರಿಕೆ 1 ಮತ್ತು ಪತ್ರಿಕೆ 2ರಲ್ಲಿ 2.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ.19ರಷ್ಟು ಮಂದಿ ಉತ್ತೀರ್ಣರಾಗಿದ್ದು, 45,074 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ಕಳೆದ ವರ್ಷ 2,02,991 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,980 ಮಂದಿ ಅರ್ಹತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಕೆಳದ ಬಾರಿ ಶೇ.3.93ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ.15ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪತ್ರಿಕೆ 1ರಲ್ಲಿ ಒಟ್ಟು 1,02,282 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ.20ರಷ್ಟು ಅಂದರೆ 18,960 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆ; ಜೀವಿತಾವಧಿವರೆಗೂ ಪ್ರಮಾಣ ಪತ್ರಕ್ಕೆ ಮಾನ್ಯತೆಶಿಕ್ಷಕರ ಅರ್ಹತಾ ಪರೀಕ್ಷೆ; ಜೀವಿತಾವಧಿವರೆಗೂ ಪ್ರಮಾಣ ಪತ್ರಕ್ಕೆ ಮಾನ್ಯತೆ

ಆರನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರಿಗೆ ನಡೆಸಿದ ಪತ್ರಿಕೆ 2ರ ಪರೀಕ್ಷೆಗೆ 1,49,552 ಮಂದಿ ಹಾಜರಾಗಿದ್ದು, 26,114 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ಯಾವ ಮಾನದಂಡದ ಮೇಲೆ ಅರ್ಹತೆ?:

ಅರ್ಹತಾ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ನೀಡುವ ಸರಿ ಉತ್ತರಗಳನ್ನು ಆಧರಿಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.60ರಷ್ಟು ಮತ್ತು ಪರಿಶಿಷ್ಟ ಜಾತಿ ಮ್ತತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಪಡೆಯುವ ಶೇ.55ರಷ್ಟು ಅಂಕಗಳನ್ನು ಅರ್ಹತೆ ಎಂದು ಪರಿಗಣಿಸಲಾಗುತ್ತದೆ.

ಅರ್ಹತೆ ಫಲಿತಾಂಶಕ್ಕೆ ಆಕ್ಷೇಪಣೆ:

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಕಳೆದ ಆಗಸ್ಟ್ 22ರಂದು ನಡೆದ ಅರ್ಹತಾ ಪರೀಕ್ಷೆಗಳ ಪತ್ರಿಕೆ 1 ಮತ್ತು ಪತ್ರಿಕೆ 2ರಲ್ಲಿ 2.51 ಲಕ್ಷ ಅಭ್ಯರ್ಥಿಗಳ ಪೈಕಿ 2.31 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ಆಗಸ್ಟ್ 24ರಂದು ಸರಿಯುತ್ತರಗಳನ್ನು ಪ್ರಕಟಿಸಿದ್ದು, ಆಗಸ್ಟ್ 31ರವರೆಗೂ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆ ಪತ್ರಿಕೆ 1ರಲ್ಲಿ 391 ಆಕ್ಷೇಪಣೆ ಮತ್ತು ಪತ್ರಿಕೆ 2ರಲ್ಲಿ 3089 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ತಜ್ಞರ ಸಮಿತಿಯು ಈ ಆಕ್ಷೇಪಣೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ್ದು, ಸೆಪ್ಟೆಂಬರ್ 8ರಂದು ಸರಿ ಉತ್ತರಗಳನ್ನು ಪ್ರಕಟಿಸಿತ್ತು.

ಅಂತಿಮ ಫಲಿತಾಂಶಕ್ಕೆ ತಡೆ ಏಕೆ:

ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಓಎಂಆರ್ ಪತ್ರಿಕೆಯಲ್ಲಿ ತಮ್ಮ ಸಹಿ ಮಾಡುವುದು ಹಾಗೂ ಹೆಬ್ಬೆಟ್ಟು ಗುರುತು ಒತ್ತುವುದನ್ನು ಮರೆತಿದ್ದಾರೆ. ಇದರಿಂದ 21 ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

ಪಾಸ್ ಆಗಿರುವ ಅಭ್ಯರ್ಥಿಗಳ ಅಂಕಪಟ್ಟಿ ಎಲ್ಲಿ ಪಡೆಯುವುದು?

   ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada

   http://www.schooleducation.kar.nic.in/ ವೆಬ್ ಸೈಟ್ ಮೂಲಕ ನೋಂದಣಿ ಸಂಖ್ಯೆ, ಅರ್ಜಿ ಸಂಖ್ಯೆ, ಅಭ್ಯರ್ಥಿಯ ಜನ್ಮ ದಿನಾಂಕ ನಮೂದಿಸಿ ಗಣೀಕೃತ ಅಂಕಪಟ್ಟಿಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

   English summary
   Karnataka TET Result 2021: Here is How to Check and Highlights.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X