Fact Check: ನೀರು ಕೇಳ್ತಾ ಇದ್ದೀರಲ್ವಾ, ಎಲ್ಲಿದೆ ನೀರು? ನೀವೇ ನೋಡಿ..

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಹಲವು ವರ್ಷಗಳ ಕಾವೇರಿ ನದಿನೀರು ಹಂಚಿಕೆ ವಿವಾದ ಮತ್ತೆ ಎದ್ದು ನಿಂತು ಕೂತಿದೆ. ಎಂದಿನಂತೆ ಬೆಂಗಳೂರು/ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಎರಡು ರಾಜ್ಯಗಳ ರಾಜಕಾರಣಿಗಳಿಗೆ ರಾಜಕೀಯ ವಿಚಾರದ ಅಭಾವ ಉಂಟಾದಾಗ ಕಾವೇರಿ ಸಮಸ್ಯೆ ಎದುರಾಗುತ್ತದೆಯೇ ಎನ್ನುವ ಜನರ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.

ಕಾವೇರಿ ಕಣಿವೆ ಭಾಗದಲ್ಲಿ ವಾಡಿಕೆಯಂತೆ ಮಳೆ ಆಗದೇ ಇರುವುದರಿಂದ ಕರ್ನಾಟಕಕ್ಕೆ ಪ್ರಾಧಿಕಾರದ ಸೂಚನೆಯಂತೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಬಹುತೇಕ ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶ ಎಂದು ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ. ಈ ವಿಚಾರ ಸರ್ವೋಚ್ಚ ನ್ಯಾಯಾಲಯಕ್ಕೂ ಗೊತ್ತಿದೆ, ಪ್ರಾಧಿಕಾರಕ್ಕೂ ಗೊತ್ತಿದೆ, ತಮಿಳುನಾಡು ಸರ್ಕಾರಕ್ಕೂ ಗೊತ್ತಿರದ ವಿಚಾರವೇನೂ ಅಲ್ಲ.

Karnataka And Tamil Nadu Cauvery River Water Sharing Dispute, Fact Check Of KRS Dam

ಪ್ರಮುಖವಾಗಿ ಕನ್ನಡಿಗರನ್ನು ಕಾಡುತ್ತಿರುವ ಪ್ರಶ್ನೆ ಏನಂದರೆ, ಪ್ರಾಧಿಕಾರದ ಮತ್ತು ಸುಪ್ರೀಂಕೋರ್ಟ್ ಮುಂದೆ ಕರ್ನಾಟಕ ತಮ್ಮ ಸಮಸ್ಯೆಗಳನ್ನು ಸಾಕ್ಷಿ ಸಮೇತ ಹೇಳಲು ವಿಫಲವಾಯಿತೇ ಎನ್ನುವುದು. ಕಳೆದ ವಾರ ಪ್ರಾಧಿಕಾರದ ಸಭೆಯ ವೇಳೆ ತಮಿಳುನಾಡು ಅಧಿಕಾರಿಗಳು ಖುದ್ದಾಗಿ ದೆಹಲಿಯ ಕಚೇರಿಯಲ್ಲಿ ಇದ್ದರೆ, ನಮ್ಮ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಇದು ಎಲ್ಲೋ ನಮ್ಮ ಸರ್ಕಾರ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇನೋ ಎನ್ನುವ ಅನುಮಾನ ಜನಸಾಮಾನ್ಯರಲ್ಲಿ ಮೂಡುವಂತೆ ಮಾಡಿದೆ.

ಈ ಲೇಖನದಲ್ಲಿನ ಚಿತ್ರವನ್ನೊಮ್ಮೆ ನೋಡಿ.. ಎರಡು ದಿನಗಳ ಕೆಳಗಿನ ಕೃಷ್ಣರಾಜೇಂದ್ರ ಸಾಗರ (KRS Dam) ಅಣೆಕಟ್ಟಿನ ಚಿತ್ರವಿದು. ಮಳೆಗಾಲದ ಈ ವೇಳೆಯಲ್ಲೂ ಬೇಸಿಗೆಯನ್ನೂ ನಾಚಿಸುವಂತೆ ಅಣೆಕಟ್ಟು ಖಾಲಿಯಾಗುತ್ತಾ ಬರುತ್ತಿದೆ. ಹಾರಂಗಿ, ಕಬಿನಿ ಸೇರಿದಂತೆ ಕಾವೇರಿ ನದಿಯ ಇತರ ಅಣೆಕಟ್ಟಿನ ಚಿತ್ರಣವೂ ಇದಕ್ಕಿಂತ ಹೊರತಾಗಿ ಏನೂ ಇಲ್ಲ.

ಕಾವೇರಿ ಜಲಾಯನ ಪ್ರದೇಶಗಳಲ್ಲಿ ನೀರು ಯಥೇಚ್ಚವಾಗಿ ಇದ್ದಾಗ ತಮಿಳುನಾಡು ಕೇಳಿದ್ದಕ್ಕಿಂತೆ ಹೆಚ್ಚೇ ನೀರು ಹರಿಸಿದ ಉದಾಹರಣೆಗಳಿವೆ. ತಮಿಳುನಾಡು ರೈತರು ಕುರುವೈ ಬೆಳೆಗೆ ಕಾವೇರಿ ನೀರನ್ನೇ ಅವಲಂಬಿತರಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಆದರೆ, ನಮ್ಮಲ್ಲೇ ಈ ಪರಿಸ್ಥಿತಿ ಇದ್ದಾಗ ನೀರು ಎಲ್ಲಿಂದ ಬಿಡುವುದು ಎನ್ನುವ ವಸ್ತುಸ್ಥಿತಿಯನ್ನು ಸರ್ಕಾರ ವಾದಿಸಬೇಕಿತ್ತು.

ತಮಿಳುನಾಡಿಗೆ ಹದಿನೈದು ದಿನಗಳ ಕಾಲ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 3,400 ಕ್ಯೂಸೆಕ್ ನೀರನ್ನು ಕರ್ನಾಟಕ ಬಿಡಲು ಆರಂಭಿಸಿದೆ. ಕುಡಿಯುವ ನೀರಿಗೆ ಸಂಪೂರ್ಣವಾಗಿ ಕಾವೇರಿ ನದಿಯನ್ನೇ ಅವಲಂಬಿಸಿರುವ ಬೆಂಗಳೂರು ಮಹಾನಗರಕ್ಕೆ ಇದೊಂದು ಎಚ್ಚರಿಕೆಯ ಗಂಟೆಯೇ ಸರಿ.

ಸೆಪ್ಟೆಂಬರ್ 26 ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತೆ ಕಾವೇರಿ ನೀರು ಬಿಡುವ ಅರ್ಜಿ ವಿಚಾರಣೆಗೆ ಬರಲಿದೆ. ನಮ್ಮ ವಾದವನ್ನು ಇನ್ನಷ್ಟು ಬಲವಾಗಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನೀರು ಕೇಳ್ತಾ ಇದ್ದೀರಲ್ವಾ, ಎಲ್ಲಿದೆ ನೀರು? ನೀವೇ ನೋಡಿ.. ಎಂದು ನ್ಯಾಯಾಲಯಕ್ಕೆ ಸರ್ಕಾರ ಮನವರಿಕೆ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+