Students Pass Good News: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ₹63.99 ಕೋಟಿ ಅನುದಾನ ಬಿಡುಗಡೆ
Students Pass Good News: ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಕರ್ನಾಟಕದ ಶಾಲಾ - ಕಾಲೇಜುಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಗಳನ್ನು ವಿತರಿಸಲು ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ಪುಸ್ತಾವನೆಯನ್ನು ಉಲ್ಲೇಖಿಸಿ ಆದೇಶ ಮಾಡಲಾಗಿದೆ. ಪ್ರಸ್ತುತ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಾಲಿ ಇರುವ ನಿಯಮಾವಳಿಗಳನ್ನು ಅನುಸರಿಸಿ ಸೇವಾಸಿಂಧು ತಂತ್ರಾಂಶದ ಮುಖೇನ ಅರ್ಜಿಗಳನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ವಿತರಿಸಲಾಗುತ್ತಿದ್ದು, ಪುಸ್ತುತ, ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನಯ ಸಾಮಾನ್ಯ ವಿದ್ಯಾರ್ಥಿ ಪಾಸುಗಳ ಒಟ್ಟಾರೆ ವೆಚ್ಚದಲ್ಲಿ ಶೇ.50 ರಷ್ಟು ಸರ್ಕಾರ, ಶೇ.25 ರಷ್ಟು ನಿಗಮಗಳು ಹಾಗೂ ಶೇ.25 ರಷ್ಯನ್ನು ಫಲಾನುಭವಿಗಳು ಭರಿಸಲು ಕ್ರಮವಹಿಸಲಾಗುತ್ತಿದೆ.

2026-27ನೇ ಶೈಕ್ಷಣಿಕ ಸಾಲಿನಲ್ಲಿ ದಿನಾಂಕ:30.05.2026 ರಿಂದ ದಿನಾಂಕ: 09.06.2026ರವರೆಗೆ ನಾಲ್ಕು ನಿಗಮ/ಸಂಸ್ಥೆಗಳಿಂದ ಒಟ್ಟಾರೆ 19792 ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಉಚಿತ ಬಸ್ ಪಾಸ್ ವ್ಯವಸ್ಥೆ ಜಾರಿಯಾಗುವವರೆಗೆ ವಿತರಿಸಲಾದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪಾಸಿಕ ಮೊತ್ತ ಹಾಗೂ ಕರ್ನಾಟಕದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಹಿನ್ನೆಲೆಯಲ್ಲಿ, ನಿಗಮಗಳಿಗೆ ವಾರ್ಷಿಕವಾಗಿ ತಗಲುವ ಅಂದಾಜು ವೆಚ್ಚ 286.08 ಕೋಟಿ ರೂ. ಮರುಪಾವತಿಸುವಂತೆ ಕೋರಲಾಗಿತ್ತು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು 2026-27ನೇ ಸಾಲಿನಲ್ಲಿ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಯ ಫಲಾನುಭವಿಗಳ ವ್ಯತ್ಯಾಸದ ಬಾಬ್ತಿನ ಒಟ್ಟಾರೆ ಮೊತ್ತ 6399.99 ಲಕ್ಷಗಳನ್ನು (ಆರು ಸಾವಿರದ ಮುನ್ನೂರ ತೊಂಬತ್ತೊಂಬತ್ತು ಲಕ್ಷದ ತೊಂಬತ್ತೊಂಬತ್ತು ಸಾವಿರ ರೂಪಾಯಿಗಳು ಮಾತ್ರ) ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
1. ಬಿಡುಗಡೆ ಮಾಡಲಾದ ಮೊತ್ತದ ವಿವರಗಳನ್ನು ಎಂಪಿಕ್ ನಮೂನೆಯಲ್ಲಿ ಕಡ್ಡಾಯವಾಗಿ ಒದಗಿಸಬೇಕು.
2. ಬಿಡುಗಡೆ ಮಾಡುವ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುವುದು.
ಬಿಡುಗಡೆ ಮಾಡಿರುವ ಅನುದಾನವನ್ನು ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರಿಂದ ಪೇಯೀಸ್ ರಶೀದಿಗೆ ಮೇಲು ರುಜು ಪಡೆದು ರಾಜ್ಯ ಹುಜೂರು ಖಜಾನೆಯಿಂದ ಡಾ ಮಾಡಲು ಅನುಮತಿ ನೀಡಿದೆ.
| ಸಂಸ್ಥೆಗಳು | ಅನುದಾನ ಒದಗಿಸಿರುವ ಲೆಕ್ಕ ಶೀರ್ಷಿಕೆ | ಬಿಡುಗಡೆ ಮೊತ್ತ (ರೂ. ಲಕ್ಷಗಳಲ್ಲಿ) |
|---|---|---|
| ಕ.ರಾ.ರ.ಸಾ.ನಿಗಮ | 3055-00-190-0-10-106-ಸಹಾಯಧನ | 1870.00 |
| ಬೆಂ.ಮ.ಸಾ.ಸಂಖ್ಯೆ | 3055-00-190-0-03-106-ಸಹಾಯಧನ | 1662.00 |
| ವಾ.ಕ.ರ.ಸಾ.ಸಂಸ್ಥೆ | 3055-00-190-0-04-106-ಸಹಾಯಧನ | 1786.00 |
| ಕ.ಕ.ರ.ಸಾ.ನಿಗಮ | 3055-00-190-0-05-106-ಸಹಾಯಧನ | 1081.99 |
| ಒಟ್ಟು | 6399.99 | |


Click it and Unblock the Notifications
