ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ರಾಜ್ಯದ ಮೊದಲ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ!

|
Google Oneindia Kannada News

ಬೆಂಗಳೂರು, ಜನವರಿ 5: ಬೆಂಗಳೂರಿನಲ್ಲಿ ರಾಜ್ಯದ ಮೊದಲ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು, ದಶಕದಿಂದ ಚರ್ಚೆಯಾಗುತ್ತಿದ್ದ ಪ್ರಯೋಗಾಲಯ ಸ್ಥಾಪನೆಗೆ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಅರಣ್ಯಾಧಿಕಾರಿಗಳ ಬಹುಬೇಡಿಕೆಯ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯ ಯೋಜನೆಗೆ ರಾಜ್ಯ ಸರ್ಕಾರ 2.7 ಕೋಟಿ ರೂ.ಗೆ ಅನುಮೋದನೆ ನೀಡಿದ್ದು, ಮಾರ್ಚ್ ವೇಳೆಗೆ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ ಎಂದು ಡಿಎಚ್‌ ವರದಿ ಮಾಡಿದೆ.

 ವನ್ಯಜೀವಿ ಪತ್ತೆ ಪ್ರಕರಣ:ಮಲ್ಲಿಕಾರ್ಜುನ್‌ ಬಂಧನಕ್ಕೆ ಆಗ್ರಹಿಸಿ ಡಿಎಫ್ಒ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು ವನ್ಯಜೀವಿ ಪತ್ತೆ ಪ್ರಕರಣ:ಮಲ್ಲಿಕಾರ್ಜುನ್‌ ಬಂಧನಕ್ಕೆ ಆಗ್ರಹಿಸಿ ಡಿಎಫ್ಒ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು

ಅನೇಕ ಪ್ರಕರಣಗಳಲ್ಲಿ ಆರೋಪಿಗಳಿಂದ ಮಾಂಸ ಮತ್ತು ಮೂಳೆಗಳನ್ನು ವಶಪಡಿಸಿಕೊಂಡು ಅಪರಾಧವನ್ನು ದೃಢೀಕರಿಸಲು ಎಫ್‌ಎಸ್‌ಎಲ್ ವರದಿಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಆದರೇ ಈಗ ರಾಜ್ಯದಲ್ಲಿಯೇ ರಾಜ್ಯದಲ್ಲಿಯೇ ಈ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸುವುದರಿಂದ ಅತಿ ತ್ವರಿತ ಗತಿಯಲ್ಲಿ
ಪ್ರಕರಣ ದಾಖಲಿಸಬಹುದಾಗಿದೆ. ಸಾವಿನ ಸಮಯವನ್ನು ನಿರ್ಧರಿಸುವುದು, ಆನುವಂಶಿಕ ಅನುಕ್ರಮ ಮತ್ತು ಇತರ ವಿಶ್ಲೇಷಣೆಗಳು ಉತ್ತಮ ತನಿಖೆಗೆ ಈ ಪ್ರಯೋಗಾಲಯವು ಸಹಾಯಕವಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಹೇಳಿದರು.

Karnataka States first wildlife forensic laboratory to be established in Bengaluru

ಅತ್ಯಾಧುನಿಕ ಉಪಕರಣಗಳ ಬಳಕೆ !

ಈ ಪ್ರಯೋಗಾಲಯಗಳಲ್ಲಿ ಆಧುನಿಕ ಉಪಕರಣಗಳನ್ನು ಹೊಂದಿರುವುದರಿಂದ ತನಿಖೆಗೆ ಸಂಬಂಧಿಸಿದಂತೆ ನಿರ್ಣಾಯಕ ವಿಶ್ಲೇಷಣೆ ಮತ್ತು ವರದಿಗಳನ್ನು ಒದಗಿಸುತ್ತದೆ. ಈ ಪ್ರಯೋಗಾಲಯವು ಡಿಎನ್ಎ ವಿಶ್ಲೇಷಣೆ ಮತ್ತು ರೂಪವಿಜ್ಞಾನ ವಿಶ್ಲೇಷಣೆ ಎಂಬ ವಿಷಯಗಳ ಕುರಿತು ಅಧ್ಯಯನ ನಡೆಸಲು ಅತಿ ಸಹಾಯಕವಾಗಿವೆ. ಡಿಎನ್ಎ ವಿಶ್ಲೇಷಣೆಯು ಜಪ್ತಿ ಮಾಡಲಾದ ಮಾದರಿಗಳನ್ನು (ಉಗುರು, ಕೂದಲು, ಹಲ್ಲುಗಳು ಮತ್ತು ಇತರ ವಸ್ತುಗಳು) ಪರೀಕ್ಷಿಸುವ ಮೂಲಕ ಮೃತದೇಹಗಳ ಮೂಲ ಮತ್ತು ಜಾತಿಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ. ರೂಪವಿಜ್ಞಾನ ವಿಶ್ಲೇಷಣೆಯು ಪ್ರಾಣಿಯ ವಿನ್ಯಾಸ ಮತ್ತು ಭೌತಿಕ ಲಕ್ಷಣಗಳ ಕುರಿತು ಅಧ್ಯಯನ ಮಾಡಲು ನೆರವಾಗಲಿದೆ ಎಂದು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ (SFSL) ನಿರ್ದೇಶಕ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ವನ್ಯಜೀವಿಗೆ ಸಂಬಂಧಿಸಿದ ಅಪರಾಧಗಳ ತನಿಖೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತದೆ. ಈ ಪೂರ್ವದಲ್ಲಿ ರಾಜ್ಯಗಳಲ್ಲಿನ ವನ್ಯಜೀವಿಗಳನ್ನು ಒಳಗೊಂಡ ಅಪರಾಧಗಳ ಮಾದರಿಗಳನ್ನು ಡೆಹ್ರಾಡೂನ್ ಅಥವಾ ಹೈದರಾಬಾದ್‌ಗೆ ಕಳುಹಿಸಲಾಗುತ್ತದೆ, ಇದರಿಂದ ಅನೇಕ ಸಂದರ್ಭಗಳಲ್ಲಿ ತನಿಖೆ ಪ್ರಕ್ರಿಯೆಯನ್ನು ಸಹ ನಿಧಾನಗೊಳಿಸಲಾಗುತ್ತಿತ್ತು ಎಂದು ವನ್ಯಜೀವಿ ಸಂರಕ್ಷಣಾಧಿಕಾರಿ ಶರತ್ ಬಾಬು ಆರ್ ಹೇಳಿದರು.

Karnataka States first wildlife forensic laboratory to be established in Bengaluru

ಹಲವಾರು ವರ್ಷಗಳಿಂದ ಅರಣ್ಯಾಧಿಕಾರಿಗಳು ಪ್ರಯೋಗಾಲಯ ಸ್ಥಾಪನೆಯ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಲೆ ಬಂದಿದೆ. ಈಗ ಈ ಯೋಜನೆಯು ಮುನ್ನೆಲೆಗೆ ಬಂದಿದ್ದು, ಪ್ರಯೋಗಾಲಯದ ಕಾರ್ಯಾರಂಭದ ನಂತರದಲ್ಲಿ ತಿಂಗಳಿಗೆ ಕನಿಷ್ಠ 10 ವನ್ಯಜೀವಿ ಅಪರಾಧಗಳನ್ನು ವರದಿ ಮಾಡಬಹುದಾಗಿದೆ ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.

English summary
The Karnataka government has given the green signal to the plan to set up the state's first wildlife forensics laboratory in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X