Puneeth Rajkumar Eye Bank: 'ಅಪ್ಪು' ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 'ಐ ಬ್ಯಾಂಕ್' ಸ್ಥಾಪನೆ ಶೀಘ್ರ
ಬೆಂಗಳೂರು, ಅಕ್ಟೋಬರ್ 23: ಕರ್ನಾಟಕದಲ್ಲಿ ಕಣ್ಣಿನ ಅಂಗಾಂಗ ದಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 'ಐ ಬ್ಯಾಂಕ್ (Puneet Rajkumar Eye Bank)' ಸ್ಥಾಪಿಸುವ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಹಲವು ವರ್ಷಗಳಿಂದಲೇ ಬೇಡಿಕೆ ಹೆಚ್ಚಾಗಿದೆ. ಅದೆಷ್ಟೋ ಮಂದಿ ಇನ್ನೂ ಈ ಪ್ರಪಂಚವನ್ನೇ ನೋಡದೆ ಕತ್ತಲಲ್ಲಿ ಜೀವನ ಕಳೆಯುತ್ತಿದ್ದಾರೆ. ಇಂದಲ್ಲ ನಾಳೆ ತಮಗೆ ದೃಷ್ಟಿ ಬರಲಿವೆ. ತಮಗೂ ದೃಷ್ಟಿ ಲೋಪ ಸರಿ ಹೋಗಲಿದೆ ಎಂದು ಸಾವಿರಾರು ಮಂದಿ ಕಾಯುತ್ತಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸಿದರೂ ಸಹಿತ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಎರಡು ವರ್ಷದ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ವೇಳೆ ಅವರು ತಂದೆಯ ಹಾದಿಯಲ್ಲಿ ಸಾಗಿದ್ದು, ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಅವರ ಕಣ್ಣುಗಳು ನಾಲ್ಕು ಮಂದಿಗೆ ದೃಷ್ಟಿ ನೀಡಿದ್ದವು. ಈ ಮೂಲಕ ಸಾವಿನಲ್ಲೂ ಲಕ್ಷಾಂತರ ಜನರಿಗೆ ಅವರು ಸ್ಫೂರ್ತಿ ಆದರು.
ಇದೀಗ ಅವರ ಹೆಸರಿನಲ್ಲಿಯೇ ರಾಜ್ಯ ಆರೋಗ್ಯ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಪ್ಪು ಅವರ ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ಚಿಂತನೆ ನಡೆಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ರಾಜಕುಮಾರ್ ಐ ಬ್ಯಾಂಕ್ ನಿಂದ ಮನವಿ
ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಐ ಬ್ಯಾಂಕ್ ಸ್ಥಾಪಿಸಿದರೆ ಹೆಚ್ಚು ಹೆಚ್ಚು ಜನ ದಾನಕ್ಕೆ ಮುಂದಾಗುತ್ತಾರೆ ಎಂಬ ಚಿಂತನೆ ಸರ್ಕಾರದ್ದಾಗಿದೆ. ಈ ಬಗ್ಗೆ ರಾಜಕುಮಾರ್ ಐ ಬ್ಯಾಂಕ್ ಸಂಘಟನೆಯು ಸಹ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಕಣ್ಣುಗಳಿಗಾಗಿ ನೋಂದಾಯಿತರ ಸಂಖ್ಯೆ ಹೆಚ್ಚಿದೆ. ಇಂತಹವರಿಗೆ ಬಾಳಿಗೆ ಬೆಳಕು ನೀಡಲು ರಾಜ್ಯ ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲವು ಅಂದುಕೊಂಡಂತೆ ಆದರೆ ಆದಷ್ಟು ಶೀಘ್ರವೇ ನೀವಿರುವ ಸ್ಥಳಗಳಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣುಗಳ ದಾನವಾಗಿ ನೀಡಲು ನೋಂದಾಯಿಸಿಕೊಳ್ಳಬಹುದಾಗಿದೆ.












Click it and Unblock the Notifications