• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಅಧಿಕ ಅಂಕ ಪಡೆದವರ ವಿವರ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಸೋಮವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ 71.80 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಾರಿ ಕೂಡ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಆರು ಮಂದಿ 625 ಅಂಕಗಳಿಗೆ ಸಂಪೂರ್ಣ 625 ಅಂಕ ಗಳಿಸಿರುವುದು ವಿಶೇಷ.

   SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

   11 ಮಂದಿ 624 ಅಂಕಗಳನ್ನು ಪಡೆದಿದ್ದಾರೆ. 43 ವಿದ್ಯಾರ್ಥಿಗಳಿಗೆ 623 ಅಂಕಗಳು ಲಭಿಸಿವೆ. 56 ಮಂದಿಗೆ 622 ಅಂಕಗಳು, 68 ಮಂದಿಗೆ 621 ಅಂಕಗಳು ಮತ್ತು 117 ವಿದ್ಯಾರ್ಥಿಗಳಿಗೆ 620 ಅಂಕಗಳು ಲಭಿಸಿವೆ. 2019ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.

   ಎಸ್‌ಎಸ್‌ಎಲ್‌ಸಿ; 501 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶಎಸ್‌ಎಸ್‌ಎಲ್‌ಸಿ; 501 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ

   ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದವರ ವಿವರ ಇಲ್ಲಿದೆ.

   ಕನ್ನಡ ಮಾಧ್ಯಮದ ಟಾಪರ್‌ಗಳು:

   ಕನ್ನಡ ಮಾಧ್ಯಮದ ಟಾಪರ್‌ಗಳು:

   ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಎಂಕೆಟಿಎಲ್‌ಕೆ ಹೈಸ್ಕೂಲಿನ ಅಭಿಷೇಕ್ ಎಂ., 623 ಅಂಕಗಳನ್ನು ಪಡೆದಿದ್ದಾರೆ. ಚಿಕ್ಕೋಡಿಯ ಶ್ರೀ ಎಂ.ಕೆ. ಕವತಾಗಿ ಮಠ ಕನ್ನಡ ಹೈಸ್ಕೂಲ್‌ನ ಸಹನಾ ಶಂಕರ್ ಕಾಮಗೌಡರ್ ಕೂಡ 623 ಅಂಕ ಪಡೆದಿದ್ದಾರೆ. ಗೋಕಾಕ್‌ನ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ಶ್ರುತಿ ಬಸಗೌಡ ಪಾಟೀಲ್ 623 ಅಂಕ ಪಡೆದಿದ್ದಾರೆ.

   ಅತಿ ಹೆಚ್ಚು ಅಂಕ ಪಡೆದವರು

   ಅತಿ ಹೆಚ್ಚು ಅಂಕ ಪಡೆದವರು

   ಸಿರಸಿಯ ಗಜಾನನ ಪ್ರೌಢಶಾಲೆಯ ಅಖಿಲಾ ಭಾಸ್ಕರ್ ಹೆಗ್ಡೆ, ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಕೃತಿಪ್ರಿಯ ರವೀಂದ್ರ ಮತ್ತು ಸಮ್ಮದ್ ಮಹವೀರ್ ಹಂಜೆ, ಬೈಲಹೊಂಗಲ ತಾಲೂಕಿನ ಎಸ್‌ಆರ್‌ ಹೈಸ್ಕೂಲಿನ ವೀರಭದ್ರ ಬಸವರಾಜ ಕಾಲಭಾವಿ ಹಾಗೂ ರಾಯಬಾಗ ತಾಲೂಕಿನ ಪ್ರಗತಿ ಹೈಸ್ಕೂಲಿನ ದೀಪಾ ಪಾರಿಸ್ ನಗನೂರ್ ತಲಾ 622 ಅಂಕ ಪಡೆದಿದ್ದಾರೆ.

   ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆಯ ಅಪರಾಜಿತೇಶ್ವರಿ, ಉಡುಪಿಯ ಚೇತನ್ ಹೈಸ್ಕೂಲ್‌ನ ಗ್ರೀಷ್ಮಾ ಶೆಟ್ಟಿಗಾರ್, ಮೂಡಬಿದ್ರೆಯ ಆಳ್ವಾಸ್ ಕನ್ನಡ ಪ್ರೌಢಶಾಲೆಯ ಕಾವ್ಯಾ ಪಿ. ಹಳ್ಳಿ ಮತ್ತು ಶ್ರಾವ್ಯಾ ಎಚ್ ತಲಾ 621 ಅಂಕಗಳನ್ನು ಪಡೆದಿದ್ದಾರೆ.

    ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಟಾಪರ್ಸ್ ಲಿಸ್ಟ್‌ ಹೀಗಿದೆ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಟಾಪರ್ಸ್ ಲಿಸ್ಟ್‌ ಹೀಗಿದೆ

   ಇಂಗ್ಲಿಷ್ ಮಾಧ್ಯಮದ ಶಾಲೆಗಳ ಟಾಪರ್

   ಇಂಗ್ಲಿಷ್ ಮಾಧ್ಯಮದ ಶಾಲೆಗಳ ಟಾಪರ್

   ಶಿರಸಿಯ ಮಾರಿಕಾಂಬಾ ಹೈಸ್ಕೂಲಿನ ಸನ್ನಿಧಿ, ಬೆಂಗಳೂರಿನ ಸೇಂಟ್ ಮೇರಿಸ್ ಹೈಸ್ಕೂಲಿನ ಚಿರಾಯು ಕೆ.ಎಸ್, ಬೆಂಗಳೂರಿನ ಪೂರ್ಣಪ್ರಜ್ಞಾ ಎಜುಕೇಷನ್ ಸೆಂಟರ್‌ನ ನಿಖಿಲೇಶ್ ಎಂ., ಮಂಡ್ಯದ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಧೀರಜ್ ರೆಡ್ಡಿ ಎಂ.ಪಿ., ಸುಳ್ಯ ತಾಲ್ಲೂಕಿನ ಕುಮಾರಸ್ವಾಮಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅನುಷ್ ಎ.ಎಲ್., ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲಿನ ತನ್ಮಯಿ ಪಿ. ತಲಾ 625 ಅಂಕಗಳನ್ನು ಪಡೆದಿದ್ದಾರೆ.

   624 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು

   624 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು

   ಬೆಂಗಳೂರಿನ ಪ್ರಶಸ್ತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅನಿರುದ್ಧ, ವಿವಿಎಸ್ ಸರ್ದಾರ್ ಪಟೇಲ್ ಶಾಲೆಯ ಅಮೋಘ್ ಮತ್ತು ಪ್ರಣಯ್ ವಿಜಯ್ ನಾಡಿಗೇರ್, ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್‌ನ ವೀಣಾ ಎಂ.ಡಿ. ಮತ್ತು ನಿಹಾರಿಕಾ ಸಂತೋಷ್ ಕುಲಕರ್ಣಿ, ನ್ಯೂ ಕೇಂಬ್ರಿಡ್ಜ್ ಇಂಗ್ಲಿಷ್ ಶಾಲೆಯ ಸ್ಫೂರ್ತಿ ಎ.ಎಸ್., ಕುಣಿಗಲ್‌ನ ಜ್ಞಾನ ಭಾರತಿ ಶಾಲೆಯ ಮಹೇಶ ಜಿಎಂ, ಬೈಂದೂರಿನ ಸಂದೀಪನಾ ಆಂಗ್ಲ ಪ್ರೌಢಶಾಲೆಯ ಸುರಭಿ ಎಸ್. ಶೆಟ್ಟಿ, ಬಂಟ್ವಾಳದ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲಿನ ಸುಮುಖ, ಮಂಗಳೂರಿನ ಕೆನರಾ ಹೈಸ್ಕೂಲಿನ ನಿಧಿ ರಾವ್ ಮತ್ತು ಶಿವಮೊಗ್ಗದ ಸಾಗರದ ಪ್ರಗತಿ ಬಾಲಭವನ ಇಂಗ್ಲಿಷ್ ಶಾಲೆಯ ಟಿ.ಎಸ್. ಅಭಿರಾಮ 624 ಅಂಕಗಳನ್ನು ಪಡೆದಿದ್ದಾರೆ.

   ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳುಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳು

   English summary
   Karnataka SSLC Results 2020: Here is the lift of toppers in Kannada and English medium.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X