SSLC ಫಲಿತಾಂಶ : 2018 ಹಾಗೂ 2017ರಲ್ಲಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!

ಬೆಂಗಳೂರು, ಮೇ 07: 2018ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಿಸಲಾಗಿದೆ. ಈ ಬಾರಿ ಒಟ್ಟಾರೆ, ಶೇ 71.93 (ಕಳೆದ ಬಾರಿ 67.87%) ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನಕ್ಕೆ ಕುಸಿದಿದೆ. 2017 ಹಾಗೂ 2018ರ ಫಲಿತಾಂಶದ ತುಲನೆ ಇಲ್ಲಿದೆ.

ಈ ಬಾರಿಯೂ, ಬಾಲಕಿಯರೇ ಮೇಲುಗೈ, ಶೇ. 78.01ವಿದ್ಯಾರ್ಥಿನಿಯರು ತೇರ್ಗಡೆ, ಶೇ.66.56 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಗ್ರಾಮೀಣ ಭಾಗದ ಶೇ.74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನಗರ ಭಾಗದಲ್ಲಿ ಶೇ.69.38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ಮೂರನೇ ಸ್ಥಾನದಲ್ಲಿದೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ನಗರ ಜಿಲ್ಲೆಗೆ 22 ನೇ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಕಳೆದ ಬಾರಿ ಶೇ74.84ರಷ್ಟು ಫಲಿತಾಂಶದೊಂದಿಗೆ 16ನೇ ಸ್ಥಾನಗಳಿಸಿತ್ತು. ಈ ಬಾರಿ ಕೇವಲ 35.54% ಫಲಿತಾಂಶ ಪಡೆದು 34ನೇ ಸ್ಥಾನಕ್ಕೆ ಕುಸಿದಿದೆ.

Karnataka SSLC Exam Results 2018: Udupi Tops and Yadgir at the bottom of the table

ಎಸ್‌ಎಸ್‌ಎಸ್‌ಸಿ ಬೋರ್ಡ್ ಪ್ರಧಾನ ನಿರ್ದೇಶಕಿ ಶಾಲಿನಿ ರಜನೀಶ್‌ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಫಲಿತಾಂಶವನ್ನು www.sslc.kar.nic.in, www.karresults.nic.in ನಲ್ಲಿ ವೀಕ್ಷಿಸಬಹುದು.

ಶೈಕ್ಷಣಿಕ ಜಿಲ್ಲಾವಾರು ಸ್ಥಿತಿ ಗತಿ 2018 ಹಾಗೂ 2017ರ SSLC ಫಲಿತಾಂಶ ಹೀಗಿದೆ:

ಶೈಕ್ಷಣಿಕ ಜಿಲ್ಲೆ 2018 ಫಲಿತಾಂಶ

2017 ಫಲಿತಾಂಶ


ಶೇಕಡಾ ಸ್ಥಾನ ಶೇಕಡಾ

ಸ್ಥಾನ

ಉಡುಪಿ 88.18 1 84.23 1
ಉತ್ತರ ಕನ್ನಡ 88.12 2 79.82 5
ಚಿಕ್ಕೋಡಿ 87.01 3 80.47 3
ದಕ್ಷಿಣ ಕನ್ನಡ 85.56 4 82.39 2
ಮಧುಗಿರಿ
85.55
5
71.84 22
ಬೆಳಗಾವಿ
84.77
6
71.25 25
ಹಾಸನ
84.68
7
69.15 31
ಕೋಲಾರ
83.34
8
78.51 7
ವಿಜಯಪುರ
83.23
9
72.23 20
ತುಮಕೂರು
82.97
10
68.15 32
ಮೈಸೂರು
82.9
11
72.03
21
ಬಳ್ಳಾರಿ
82.73
12
74.65 17
ಧಾರವಾಡ
82.21
13
77.29 8
ಬೆಂಗಳೂರು ಗ್ರಾಮಾಂತರ
82.17
14
77.03 10
ದಾವಣಗೆರೆ 81.56
15
75.33 14
ಚಿತ್ರದುರ್ಗ 80.85
16
72.64 19
ರಾಮನಗರ
80.78
17
78.55 6
ಕೊಡಗು
80.68
18
77.09 9
ಕೊಪ್ಪಳ
80.43
19
76.05 11
ಶಿವಮೊಗ್ಗ
78.77
20
75.07 15
ಶಿರಸಿ
78.06
21
80.09 4
ಬೆಂಗಳೂರು ಉತ್ತರ
77.37
22
71.44 24
ಹಾವೇರಿ
76.76
23
70.46 26
ಚಾಮರಾಜನಗರ
74.47
24
75.66 12
ಬಾಗಲಕೋಟೆ
72.7
25
64.53 33
ಚಿಕ್ಕಮಗಳೂರು
72.47
26
74.4 18
ಬೆಂಗಳೂರು ದಕ್ಷಿಣ
72.03
27
69.92 29
ಮಂಡ್ಯ
71.57
28
71.73 23
ರಾಯಚೂರು
68.89
29
69.69 30
ಕಲಬುರಗಿ
68.65
30
70.24 27
ಚಿಕ್ಕಬಳ್ಳಾಪುರ 68.2 31 70.13 28
ಗದಗ
67.52
32
75.62 13
ಬೀದರ್
60.71
33
62.2 34
ಯಾದಗಿರಿ
35.54
34
74.84 16

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+